--Ads--

ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಡಾ. ಬಿ. ಆರ್.ಅಂಬೇಡ್ಕರ್ ಸರ್ಕಾರಿ ಹಾಸ್ಟೆಲ್‌ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯ ಹಾಸ್ಟೆಲಿಗಳಿಗೆ ದಿಢೀರ್‌ ಭೇಟಿ ನೀಡಿದ ಸಿಇಒ ವಾಸಂತಿ ಅಮರ್ 

On: July 26, 2026 5:13 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಡಾ. ಬಿ. ಆರ್.ಅಂಬೇಡ್ಕರ್ ಸರ್ಕಾರಿ ಹಾಸ್ಟೆಲ್‌ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯ ಹಾಸ್ಟೆಲಿಗಳಿಗೆ ದಿಢೀರ್‌ ಭೇಟಿ ನೀಡಿದ ಸಿಇಒ ವಾಸಂತಿ ಅಮರ್ 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಾಸಂತಿ ಅಮರ್ ಅವರು ಇಂದು ದೇವನಹಳ್ಳಿ ನಗರದ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಡಾ. ಬಿ. ಆರ್.ಅಂಬೇಡ್ಕರ್ ಸರ್ಕಾರಿ ಹಾಸ್ಟೆಲ್‌ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯ ಹಾಸ್ಟೆಲಿಗಳಿಗೆ ದಿಢೀರ್‌ ಭೇಟಿ ನೀಡಿ ವಿದ್ಯಾರ್ಥಿನಿಯರ ಕುಂದು ಕೊರತೆಗಳನ್ನು ವಿಚಾರಿಸಿದರು.

ವಿದ್ಯಾರ್ಥಿನಿಯರ ಪ್ರತಿ ಕೊಠಡಿಗೂ ತೆರಳಿದ ಅವರು, ಹಾಸ್ಟೆಲ್‌ನಲ್ಲಿ ದೊರೆಯುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆಯೇ ಎಂದು ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು.

ಅಡುಗೆ ಕೋಣೆಯ ಪರಿಶೀಲನೆ ವೇಳೆ ಆಹಾರ ತಯಾರಿಕೆಯಲ್ಲಿ ತರಕಾರಿ ಪದಾರ್ಥಗಳನ್ನು ಹೆಚ್ಚು ಬಳಸಲು ಸೂಚಿಸಿದರು.

ಅಡುಗೆ ಮನೆಯಲ್ಲಿ ಸಿದ್ಧಪಡಿಸಿಟ್ಟಿದ್ದ ಆಹಾರವನ್ನು ವಿದ್ಯಾರ್ಥಿನಿಯರ ಜೊತೆ ಊಟಯನ್ನು ಸ್ವತಃ ಸೇವಿಸಿ ಗುಣಮಟ್ಟ ಪರಿಶೀಲಿಸಿದರು.

ಶೈಕ್ಷಣಿಕ ಅಭ್ಯಾಸ ಮತ್ತು ಆರೋಗ್ಯಕವಾದ ಸ್ವಚ್ಛತೆ ಬಗ್ಗೆ ಸವಿವಿವರವಾಗಿ ವಿದ್ಯಾರ್ಥಿನಿಯರ ಜೊತೆ ಸಮಾಲೋಚಿಸಿದರು.

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಶ್ರೀ ಸುಜಯನಿಧಿ ತೀರ್ಥರಿಂದ ತಪ್ತಮುದ್ರಾಧಾರಣೆ
ಬೆಂಗಳೂರು: ಆಷಾಡ ಶುದ್ಧ ಏಕಾದಶಿ ಅಂಗವಾಗಿ ಮುಳಬಾಗಿಲು ಶ್ರೀಪಾದರಾಜಮಠದ ಪೀಠಾಧಿಪತಿ ಶ್ರೀ ಸುಜಯನಿಧಿ ತೀರ್ಥರು ತಪ್ತಮುದ್ರಾಧಾರಣೆ ಭಕ್ತರಿಗೆ ಮಾಡಿದರು.

ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀಪಾದರಾಜ ಮಠದಲ್ಲಿ ಶ್ರೀಗಳು ಬೆಳಿಗ್ಗೆ ಸುದರ್ಶನ ಹೋಮ ನೇರವೇರಿಸಿ ಅದರ ಅಗ್ನಿಯಲ್ಲಿ ಶಂಖ ಮತ್ತು ಚಕ್ರದ ಮುದ್ರೇಯನ್ನು ಕಾಯಿಸಿ ಬಂದ ಭಕ್ತರಿಗೆ ತಪ್ತಮುದ್ರಾಧಾರಣೆಯನ್ನು ಮಾಡಿದರು, ಸಾವಿರಾರು ಭಕ್ತರು ಮುದ್ರೇಯನ್ನು ಹಾಕಿಸಿಕೊಂಡು ಶ್ರೀಹರಿಯ ಮತ್ತು ಗುರುಗಳ ಆಶೀರ್ವಾದ ಪಡೆದರು.

 

WhatsApp

Join Now

Telegram

Join Now

Instagram

Join Now