--Ads--

ಕುಶಾಲನಗರ ಡಿಪೋ ಉದ್ಘಾಟನೆಗೆ ಇನ್ನೆಷ್ಟು ದಿನ ಕಾಯಬೇಕು?

On: August 22, 2026 11:17 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕುಶಾಲನಗರ ಡಿಪೋ ಉದ್ಘಾಟನೆಗೆ ಇನ್ನೆಷ್ಟು ದಿನ ಕಾಯಬೇಕು?

ಮಡಿಕೇರಿ: ಕುಶಾಲನಗರದ ಜನರ ಬಹುಕಾಲದ ಕನಸಾಗಿರುವ ಕೆಎಸ್‌ಆರ್‌ಟಿಸಿ ಡಿಪೋ ಕಾಮಗಾರಿ ಅಂತಿಮ ಹಂತ ತಲುಪಿದೆ ಅಧಿಕಾರಿಗಳ ಮಾಹಿತಿಯ ಪ್ರಕಾರ ಸುಮಾರು 90% ಕಾಮಗಾರಿ ಪೂರ್ಣಗೊಂಡಿದ್ದರೂ ಡಿಪೋ ಇನ್ನೂ ಸಾರ್ವಜನಿಕ ಸೇವೆಗೆ ತೆರೆಯದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ

ಇಂದು ಮೈಸೂರಿನಿಂದ ಸಂಚರಿಸುತ್ತಿದ್ದ ಕೆ-19 ಕೆಎಸ್‌ಆರ್‌ಟಿಸಿ ಬಸ್ ಕುಶಾಲನಗರದ ಹೆಬ್ಬಾಗಿಲು ಕಾವೇರಿ ಸೇತುವೆ ಸಮೀಪದ ಸಣ್ಣ ಟೈರ್ ಅಂಗಡಿಯ ಮುಂದೆ ಗಾಳಿ ತುಂಬಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂತು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಡಿಪೋ ನಿರ್ಮಾಣವಾಗಿರುವಾಗಲೂ ಬಸ್‌ಗಳು ಇಂತಹ ಮೂಲಭೂತ ಸೌಲಭ್ಯಗಳಿಗಾಗಿ ಖಾಸಗಿ ಅಂಗಡಿಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕುಶಾಲನಗರ ಇಂದು ಕೊಡಗಿನ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ವಿದ್ಯಾರ್ಥಿಗಳು ಕಾರ್ಮಿಕರು ಮತ್ತು ಪ್ರವಾಸಿಗರು ಈ ಪಟ್ಟಣವನ್ನು ಅವಲಂಬಿಸಿದ್ದಾರೆ ಇಂತಹ ಸಂದರ್ಭದಲ್ಲಿ ಡಿಪೋ ಕಾರ್ಯಾರಂಭವಾಗಿದ್ದರೆ ಬಸ್‌ಗಳ ನಿರ್ವಹಣೆ ದುರಸ್ತಿ ಸಿಬ್ಬಂದಿ ನಿಯೋಜನೆ ಸೇರಿದಂತೆ ಸಾರಿಗೆ ಸೇವೆಯ ಗುಣಮಟ್ಟ ಮತ್ತಷ್ಟು ಉತ್ತಮವಾಗುತ್ತಿತ್ತು.

ಮಾನ್ಯ ಮಡಿಕೇರಿ ಕ್ಷೇತ್ರದ ಶಾಸಕ  ಮಂತರ್ ಗೌಡ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಡಿಪೋ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಬೇಕು ಅಭಿವೃದ್ಧಿಯ ಬಗ್ಗೆ ಭಾಷಣಗಳಿಗಿಂತ ಅಭಿವೃದ್ಧಿಯ ಫಲ ಜನರಿಗೆ ತಲುಪುವುದು ಮುಖ್ಯವಾಗಿದೆ.

ಇತ್ತೀಚೆಗೆ ಹಳೆಯ ಬಸ್‌ಗಳ ಬದಲಿಗೆ ಮೂರು ಹೊಸ ಬಸ್‌ಗಳನ್ನು ನೀಡಿರುವುದು ಸ್ವಾಗತಾರ್ಹ ಆದರೆ ಕುಶಾಲನಗರದ ಜನರ ನಿರೀಕ್ಷೆ ಅದಕ್ಕಿಂತ ದೊಡ್ಡದು ಕುಶಾಲನಗರದಿಂದಲೇ ಬೆಂಗಳೂರು, ಮೈಸೂರು ಮಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಹಾಗೂ ಅಂತರರಾಜ್ಯ ಬಸ್ ಸೇವೆಗಳು ಆರಂಭವಾಗುವಂತಾಗಬೇಕು ಇದರಿಂದ ಜನರಿಗೆ ಅನುಕೂಲವಾಗುವುದರ ಜೊತೆಗೆ ಕುಶಾಲನಗರದ ಆರ್ಥಿಕ ಬೆಳವಣಿಗೆಗೂ ಹೊಸ ಚೈತನ್ಯ ಸಿಗಲಿದೆ.

ಜನರ ತೆರಿಗೆ ಹಣದಲ್ಲಿ ನಿರ್ಮಾಣವಾದ ಡಿಪೋ ಜನರ ಸೇವೆಗೆ ಯಾವಾಗ ಲಭ್ಯವಾಗಲಿದೆ ಎಂಬುದಕ್ಕೆ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕಾಗಿದೆ ಕುಶಾಲನಗರದ ಜನರು ಇನ್ನಷ್ಟು ಭರವಸೆಗಳನ್ನಲ್ಲ, ಕಾರ್ಯರೂಪಕ್ಕೆ ಬಂದ ಅಭಿವೃದ್ಧಿಯನ್ನು ನೋಡಲು ಬಯಸುತ್ತಿದ್ದಾರೆ

ಡಿಪೋ ಸಿದ್ಧವಾಗಿದೆ… ಜನ ಸಿದ್ಧರಾಗಿದ್ದಾರೆ… ಹಾಗಿದ್ದರೆ ಉದ್ಘಾಟನೆಗೆ ಇನ್ನೆಷ್ಟು ತಡ?

✍️ ಎಂ ಎಂ ದಾವುದ್

WhatsApp

Join Now

Telegram

Join Now

Instagram

Join Now