ಎಲ್ಲಾ ನೂಲು ಬಿಚ್ಚಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೋಡಬೇಕು : ರಾಜ್ಯ ರೈತ ಸಂಘ ಒತ್ಯಾಯ

ವಿಜಯ ದರ್ಪಣ ನ್ಯೂಸ್…..

ಎಲ್ಲಾ ನೂಲು ಬಿಚ್ಚಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೋಡಬೇಕು : ರಾಜ್ಯ ರೈತ ಸಂಘ ಒತ್ಯಾಯ

ಶಿಡ್ಲಘಟ್ಟ : ತಾಲ್ಲೂಕಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ, ಬೇರೆ ತಾಲ್ಲೂಕುಗಳಿಂದ ಬರುವ ನೂಲು ಬಿಚ್ಚಣಿಕೆದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಎಂದು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಆರೋಪ ಮಾಡಿದರು.

ಮಾರುಕಟ್ಟೆಗೆ ದಿನಕ್ಕೆ ಸರಾಸರಿ 300-400 ಲಾಟ್ ರೇಷ್ಮೆ ಗೂಡು ಬರುತ್ತಿದೆ ನಮ್ಮ ಗೂಡಿಗೆ ಉತ್ತಮ ಬೆಲೆ ಬರಬೇಕಾದರೆ, ಚಿಂತಾಮಣಿ ಸೇರಿದಂತೆ ಬೇರೆ ತಾಲ್ಲೂಕುಗಳಿಂದ ಬಿಚ್ಚಣಿಕೆದಾರರು ಬಂದು ಹರಾಜಿನಲ್ಲಿ ಪಾಲ್ಗೊಳ್ಳಬೇಕು ಆದರೆ ಈಗ ಕೇವಲ 600 ರೂ.ಗಳಿಂದ 680 ರೂ.ಗಳಷ್ಟೇ ಬೆಲೆ ಸಿಗುತ್ತಿದೆ ಹರಾಜಿನಲ್ಲಿ ಹೆಚ್ಚು ಜನ ಬಾಗವಹಿಸಿದರೆ 800 ರೂ.ಗಳಿಂದ 1000 ರೂ.ವರೆಗೆ ಬೆಲೆ ಬರಬಹುದಾಗಿದೆ ಎಂದರು.

ಶಿಡ್ಲಘಟ್ಟ ನಗರದಲ್ಲಿ 1,800 ಕ್ಕೂ ಹೆಚ್ಚು ಬಿಚ್ಚಣಿಕೆದಾರರು ಇದ್ದರೂ, ಅವರು ಸ್ಪರ್ಧಾತ್ಮಕ ಬೆಲೆ ನೀಡದ ಹಿನ್ನೆಲೆಯಲ್ಲಿ, ರೈತರಿಗೆ ನಷ್ಟವಾಗುತ್ತಿದೆ ಹೊರ ಜಿಲ್ಲೆಗಳ ಬಿಚ್ಚಣಿಕೆದಾರರಿಗೆ ಅವಕಾಶ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಆರೋಪದ ಬಗ್ಗೆ ಮಾರುಕಟ್ಟೆ ಉಪನಿರ್ದೇಶಕ ಎನ್. ಉಮೇಶ್‌ ಮಾತನಾಡಿ ನಾನು ಯಾರನ್ನೂ ಗುರಿಯಾಗಿಸಿ ತಡೆದಿಲ್ಲ ಎಲ್ಲಾರಿಗೂ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ ಯಾವುದೇ ರೀತಿ ನಿರ್ಬಂಧವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಸ್.ಆರ್. ಮಂಜುನಾಥ್,ಮಾಧವಚಾರ್ ಬೈರೇಗೌಡ,ನಾಗರಾಜ್ ಹರಿಕೃಷ್ಣ ಇನ್ನೀತರರು ಭಾಗವಹಿಸಿದ್ದರು.