ನಾಡಪ್ರಭು ಕೆಂಪೇಗೌಡರ ಆದರ್ಶಗುಣಗಳನ್ನು ಬೆಳಸಿಕೊಂಡಾಗ ನಾಡಿಗೆ ಒಳ್ತಾಗುತ್ತದೆ: ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀ
ವಿಜಯ ದರ್ಪಣ ನ್ಯೂಸ್….
ರಾಜಾಜಿನಗರದಲ್ಲಿ ಅದ್ದೂರಿಯಾಗಿ ನಾಡಪ್ರಭು ಕೆಂಪೇಗೌಡ ದಿನಾಚರಣೆ
ನಾಡಪ್ರಭು ಕೆಂಪೇಗೌಡರ ಆದರ್ಶಗುಣಗಳನ್ನು ಬೆಳಸಿಕೊಂಡಾಗ ನಾಡಿಗೆ ಒಳ್ತಾಗುತ್ತದೆ: ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀ
ಬೆಂಗಳೂರಿನ ಜನರು ಕೆಂಪೇಗೌಡರ ಋಣ ತೀರಿಸುವ ಕೆಲಸ ಮಾಡಬೇಕು:ಎಸ್.ಸುರೇಶ್ ಕುಮಾರ್
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವ ಕಾರ್ಯಕ್ರಮ ಹಾಗೂ ಕೆಂಪೇಗೌಡರ ಪ್ರತಿಮೆ ಹೊತ್ತ ಭವ್ಯ ಮೆರವಣಿಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜೀರವರು, ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು, ಕಾರ್ಯಪಾಲಕ ಅಭಿಯಂತರಾದ ಗಂಗಾಧರ್, ಪೊಲೀಸ್ ಇನ್ಸಪೆಕ್ಟರ್ ಚಿಕ್ಕಸ್ವಾಮಿವರು ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಶ್ರೀಶ್ರೀ ಸೌಮ್ಯನಾಥ ಸ್ವಾಮೀಜಿರವರು*ಯ ಮಾತನಾಡಿ ಇಂದಿನ ಯುವ ಸಮಾಜ ಮತ್ತು ಮಕ್ಕಳಿಗೆ ನಾಡಪ್ರಭು ಕೆಂಪೇಗೌಡರ ಇತಿಹಾಸ ತಿಳಿಯಬೇಕು. ಉತ್ತಮ ಚಿಂತನೆಯಿಂದ ಬೆಂಗಳೂರು ನಗರ ನಿರ್ಮಾಣ ಮಾಡಿದ ಕೆಂಪೇಗೌಡರ ಬೆಂಗಳೂರು ಇನ್ನು ಬೆಳಯುತ್ತಿದೆ.
ದೇಶ, ವಿದೇಶಗಳಿಂದ ಬಂದರು ಇಲ್ಲೆ ನೆಲಸುತ್ತಿದ್ದಾರೆ, ಉತ್ತಮ ವಾತವರಣವಿದೆ ಬರಿ ಕೈಯಲ್ಲಿ ಬಂದರಿಗೆ ಇಲ್ಲಿ ಉದ್ಯೋಗ ಆಶ್ರಯ ನೀಡುತ್ತಿದೆ.
ಐ.ಟಿ.ಮತ್ತು ಬಿಟಿ ಕಂಪನಿಗಳಿಂದ ಲಕ್ಷಾಂತರ ಕೋಟಿ ರೂಪಾಯಿ ತೆರಿಗೆ ನೀಡುತ್ತಿದೆ. ಎಲ್ಲ ಜಾತಿ ವರ್ಗ, ಧರ್ಮದವರಿಗೆ ಬೆಂಗಳೂರುನಗರ ಆಶ್ರಯ ನೀಡಿದೆ.
ಅಧಿಕಾರ, ಆಸ್ತಿ ಡೊಡ್ಡದಲ್ಲ , ಸರಳತೆ,ವಿನಯತೆ ಡೊಡ್ಡದು.
ಹಿರಿಯರು ಗಣ್ಯರು ನೀಡಿದ ಚಿಂತನೆ ಮಾರ್ಗದರ್ಶನದಲ್ಲಿ ಸಾಗಬೇಕು ನಾಡಪ್ರಭು ಕೆಂಪೇಗೌಡರ ಆದರ್ಶ ಗುಣಗಳನ್ನು ಎಲ್ಲರು ಬೆಳಸಿಕೊಂಡು ಬೆಳದಾಗ ನಾಡಿಗೆ ಒಳಿತಾಗುತ್ತದೆ ಎಂದು ಹೇಳಿದರು
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ಮುಂದಲೋಚನೆ ಮಾಡಿ ಅಕ್ಕಿಪೇಟೆಯಿಂದ ಎತ್ತು ಬಿಟ್ಟು ಎಲ್ಲಿಯವರಗೆ ಹೋಗುತ್ತದೆ ಅಲ್ಲಿಯವರಗೆ ಬೆಂಗಳೂರುನಗರ ನಿರ್ಮಾಣ ಮಾಡಿದರು.
ಇಲ್ಲಿ ನೆಲ, ಉದ್ಯೋಗ,ಆಶ್ರಯ ನೀಡಿದ ನಾಡಪ್ರಭು ಕೆಂಪೇಗೌಡರ ಋಣ ತೀರಿಸುವ ಕೆಲಸ ಮಾಡಬೇಕು.
ಬೆಂಗಳೂರುನಗರದ ಸುತ್ತಮುತ್ತಲ ನದಿ ಇಲ್ಲದ ಕಾರಣದಿಂದ 300ಕ್ಕೂ ಹೆಚ್ಚು ಕೆರೆಗಳ ನಿರ್ಮಾಣವನ್ನು ನಾಡಪ್ರಭು ಕೆಂಪೇಗೌಡರು ಮಾಡಿದರು.
ಎಲ್ಲ ವರ್ಗ, ಜಾತಿಯವರಿಗೆ 30ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಾಣ ಮಾಡಿದರು. ಉತ್ತಮ ಆಡಳಿತಗಾರ ದಾರ್ಶನಿಕ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಅಜರಾಮರವಾಗಿ ಉಳಿಯಬೇಕು.
ಡೊಳ್ಳು, ವೀರಗಾಸೆ, ಕಂಸಾಳೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿದ್ದರು ಮತ್ತು ಶಿವನಗರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶಿವನಗರ ಮುಖ್ಯದ್ವಾರದ 3ಕಿಲೋ ಮೀಟರ್ ವರಗೆ ಭವ್ಯ ಮೆರವಣಿಗೆ ಸಾಗಿತು.
ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ದೀಪಾ ನಾಗೇಶ್, ಪ್ರತಿಮಾ ಮತ್ತು ಮಂಡಲ ಅಧ್ಯಕ್ಷ ಸುದರ್ಶನ್ ಮತ್ತು ಶಾಲೆಯ ಸಾವಿರಾರು ಮಕ್ಕಳು ಭಾಗವಹಿಸಿದ್ದರು.