ಅಣ್ಣೇಶ್ವರ, ಹಾಡೋನಹಳ್ಳಿ ಗ್ರಾ.ಪಂ ಗಳಿಗೆ ಕೇಂದ್ರ ಅಧಿಕಾರಿಗಳ ತಂಡ ಭೇಟಿ
ವಿಜಯ ದರ್ಪಣ ನ್ಯೂಸ್….
ಅಣ್ಣೇಶ್ವರ, ಹಾಡೋನಹಳ್ಳಿ ಗ್ರಾ.ಪಂ ಗಳಿಗೆ ಕೇಂದ್ರ ಅಧಿಕಾರಿಗಳ ತಂಡ ಭೇಟಿ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ದೇವನಹಳ್ಳಿ ತಾಲ್ಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯ ಮಾತೃಶ್ರೀ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಕ್ಕೆ *ಲೊಕೋಸ್ ಕಾರ್ಯತಂತ್ರದ* ಪ್ರಗತಿ ಪರಿಶೀಲನೆ ಉದ್ದೇಶ ಮತ್ತು ಮುಂದಿನ ಹಂತದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲು *ರಾಷ್ಟ್ರೀಯ ಕಾರ್ಯಕ್ರಮ ವ್ಯವಸ್ಥಾಪಕರಾದ ಲಕ್ಷ್ಮಿಕಾಂತ್ ರವರು ಮತ್ತು GDI ಪಾರ್ಟ್ನರ್ಸ್ ತಂಡದ ಹಿರಿಯ ಸಲಹೆಗಾರರಾದ ಕೈಸರ್ ಅಹಮದ್ ರವರು*, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಮಂಜೇಶ್ ರವರು ಹಾಗೂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಮಂಜುಳಾ, ಜಿಲ್ಲಾ ವ್ಯವಸ್ಥಾಪಕರಾದ ಅಶೋಕ್ , ಡಿಎಂಐಎಸ್ ವಿನುತಾ ಮತ್ತು ಸಂಜೀವಿನಿ ತಾಲ್ಲೂಕು ಸಿಬ್ಬಂದಿಗಳು, ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಎಂ ಬಿ ಕೆ, ಎಲ್ ಸಿ ಆರ್ ಪಿ, ಸಮುದಾಯ ಸಿಬ್ಬಂದಿಗಳು ಹಾಗೂ ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.