ಅಧಿಕಾರಿಯನ್ನು ನಿಂದಿಸಿ ಧಮ್ಕಿ ಹಾಕಿರುವ ರಾಜೀವ್‍ಗೌಡರದ್ದು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ : ಮಾಜಿ ಸಂಸದ ಎಸ್.ಮುನಿಸ್ವಾಮಿ

ವಿಜಯ ದರ್ಪಣ ನ್ಯೂಸ್…..

ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಪ್ರಯುಕ್ತ ಹೆಲ್ಮೆಟ್ ವಿತರಣೆ, ಜಾಗೃತಿ ಜಾಥಾ

ಅಧಿಕಾರಿಯನ್ನು ನಿಂದಿಸಿ ಧಮ್ಕಿ ಹಾಕಿರುವ ರಾಜೀವ್‍ಗೌಡರದ್ದು ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ : ಮಾಜಿ ಸಂಸದ ಎಸ್.ಮುನಿಸ್ವಾಮಿ

ಶಿಡ್ಲಘಟ್ಟ : ಜೀವ ಅಮೂಲ್ಯವಾದ್ದು ಕೇವಲ ಹೆಲ್ಮೆಟ್ ಧರಿಸುವುದು ಮಾತ್ರವಲ್ಲ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ಪಾಲಿಸುವ ಮೂಲಕ ನಮ್ಮ ಜೀವ ಉಳಿಸಿಕೊಳ್ಳೋಣ ನಮ್ಮನ್ನು ನಂಬಿರುವ ಕುಟುಂಬದವರ ಹಿತ ಕಾಯೋಣ ಹಾಗೂ ರಾಷ್ಟ್ರೀಯ ಸಂಪತ್ತನ್ನು ಉಳಿಸೋಣ ಬಿಜೆಪಿ ಜಿಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದ ಮಯೂರ ವೃತ್ತದ ಬಿಜೆಪಿ ಸೇವಾ ಸೌಧ ಕಛೇರಿಯ ಅವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರ 101ನೇ ಜಯಂತಿ ಅಂಗವಾಗಿ ರಾಮಚಂದ್ರಗೌಡ ಫೌಂಡೇಷನ್(ಆರ್‍ಸಿಜಿ ಫೌಂಡೇಷನ್)ನಿಂದ ಹೆಲ್ಮೆಟ್ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವುಗಳು ಕಾನೂನು, ಪೊಲೀಸರು ಹಾಕುವ ದಂಡಕ್ಕೆ ಹೆದರಿ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದಲ್ಲ ನಮ್ಮ ರಕ್ಷಣೆ ಮತ್ತು ನಮ್ಮ ಮೇಲೆ ಅವಲಂಬಿತರ ಹಿತದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಎಂದು ಹೇಳಿದರು.

ನಮ್ಮ ಆರ್‍ಸಿಜಿ ಫೌಂಡೇಷನ್‍ನಿಂದ ಹೆಲ್ಮೆಟ್‍ಗಳನ್ನು ವಿತರಿಸುವುದು ಮತ್ತು ಹೆಲ್ಮೆಟ್ ಧರಿಸುವ ಬಗ್ಗೆ ಜನ ಜಾಗೃತಿ ಮೂಡಿಸುವ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.

ಈ ದೇಶ, ಸಮಾಜಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೇವೆ ಕೊಡೆಗೆ ಅಪಾರವಾದದ್ದು, ಅವರನ್ನು ನಾವೆಲ್ಲರೂ ಸ್ಮರಿಸಬೇಕು. ರಾಜಕಾರಣದಲ್ಲಿ ಅವರು ಅಂದಿಗೂ ಎಂದೆಂದಿಗೂ ನಮ್ಮೆಲ್ಲರಿಗೂ ಮಾದರಿ ಮತ್ತು ಅನುಕರಣೀಯ ಎಂದರು.

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ,ಆಡಳಿತ ವ್ಯವಸ್ಥೆ ತೀರಾ ಹದೆಗೆಟ್ಟಿದೆ. ದೇಶದಲ್ಲಿ ಮೂರು ಅವಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲದೆ ನರೇಂದ್ರಮೋದಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ ,ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾರನ್ನ ಅಧಿಕಾರಕ್ಕೆ ತರಬೇಕು ಎಂದು ಜನ ಸೂಕ್ತವಾಗಿ ನಿರ್ಧರಿಸಬೇಕು ಎಂದರು.

ಮಾಜಿ ಸಂಸದ ಎಸ್.ಮುನಿಶಾಮಿ ಮಾತನಾಡಿ ,ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರನ್ನು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಮೇಲೆ ಎಫ್‍ಐಆರ್ ದಾಖಲಿಸಿ ಬಂದಿಸಬೇಕು ಎಂದು ಆಗ್ರಹಿಸಿದರು.

ಕಲ್ಟ್ ಚಲನಚಿತ್ರದ ಪ್ರಚಾರ ಕಾರ್ಯಕ್ರಮಕ್ಕಾಗಿ ಕಟ್ಟಿದ್ದ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕಾಗಿ ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ರಾಜೀವ್‍ಗೌಡ ಮೊಬೈಲ್ ಕರೆ ಮಾಡಿ ಅಸಭ್ಯವಾಗಿ ಮಾತನಾಡಿ ಗುಂಡಾವರ್ತನೆ ಮಾಡಿರುವುದನ್ನು ನಾನು ಮತ್ತು ನಮ್ಮ ಪಕ್ಷ ಖಂಡಿಸುತ್ತದೆ ಎಂದರು.

ಹೆಣ್ಣು ಮಗಳ ಮೇಲೆ ದರ್ಪಮೆರೆದಿರುವ ರಾಜೀವ್ ಗೌಡನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಆ ವ್ಯಕ್ತಿಯ ನಡುವಳಿಕೆ ಕಾಂಗ್ರೇಸ್ ಸಂಸ್ಕೃತಿಯನ್ನ ತೋರುತ್ತದೆ ಎಂದು ಆಪಾದಿಸಿದ ಅವರು ನಗರಠಾಣೆಯಲ್ಲಿ ರಾಜೀವ್‍ಗೌಡರ ವಿರುದ್ದ ದೂರು ನೀಡಿದರು.

ಈ ವೇಳೆ ಸಾರ್ವಜನಿಕರಿಗೆ ಹೆಲ್ಮೆಟ್‍ಗಳನ್ನು ವಿತರಿಸಲಾಯಿತು, ನಗರದ ಪ್ರಮುಖ ಬೀದಿಗಳಲ್ಲಿ ಹೆಲ್ಮೆಟ್ ಧರಿಸಿ ಜಾಗೃತಿ ಬೈಕ್  ರಾಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ , ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ವೇಣುಗೋಪಾಲ್, ಡಾ.ಸತ್ಯನಾರಾಯಣರಾವ್ ಹಾಗು ಮುಖಂಡರು ಹಾಜರಿದ್ದರು.

₹₹₹₹₹₹₹₹₹₹&&&&&&&&&&₹₹₹₹₹₹₹₹₹₹₹

ಪೌರಾಯುಕ್ತೆಗೆ ಧಮ್ಕಿ ಹಾಕಿದ ರಾಜೀವ್ ಗೌಡರಿಗೆ ಕೆಪಿಸಿಸಿ ನೋಟಿಸ್‌ ಜಾರಿ

ಶಿಡ್ಲಘಟ್ಟ : ನಗರದ ಸರ್ಕಲ್ಲೊಂದರಲ್ಲಿ ಸಚಿವ ಜಮೀರ್ ಪುತ್ರ ಝದ್ ಖಾನ್ ನಟನೆಯ”ಕಲ್ಟ್” ಸಿನಿಮಾ ಪ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ನಗರಸಭೆ ಪೌರಾಯುಕ್ತರಿಗೆ ಧಮ್ಮಿ ಹಾಕಿದ ಪ್ರಕರಣ ಸಂಬಂಧ ರಾಜೀವ್ ಗೌಡರಿಗೆ ಕೆಪಿಸಿಸಿ ನೋಟಿಸ್‌ ಜಾರಿ ಮಾಡಿದೆ.

ಪೌರಾಯುಕ್ತರಿಗೆ ಅವಾಚ್ಯ ಶಬ್ದ ಬಳಸಿ ಮಾತಾಡಿರುವ
ಘಟನೆಯ ಬಗ್ಗೆ ಕಾರಣ ಕೇಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ನೋಟಿಸ್ ನೀಡಿದ್ದಾರೆ ,7 ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ನೋಟೀಸ್ ನ ವಿವರ : ನಗರಸಭೆ ವ್ಯಾಪ್ತಿಯಲ್ಲಿ ತಾವು ಖಾಸಗಿ ಕಾರ್ಯಕ್ರಮದ ಸಭೆಯೊಂದಕ್ಕೆ ಸಂಬಂಧಪಟ್ಟಂತೆ ಬ್ಯಾನರ್‌ಗಳನ್ನು ಹಾಕಿರುವ ಬಗ್ಗೆ ಪೌರಾಯುಕ್ತರೊಂದಿಗೆ ದೂರವಾಣಿ ಸಂಭಾಷಣೆ ನಡೆಸುವಾಗ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ.
ತಮ್ಮ ಈ ವರ್ತನೆ ಹಾಗೂ ತಾವು ಸದರಿ ನಗರಸಭೆ ಪೌರಾಯುಕ್ತರೊಂದಿಗೆ ಆಡಿರುವ ಮಾತುಗಳಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತದೆ ತಾವು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ್ದೀರೆಂದು ತಿಳಿದು ನೋಟಿಸ್ ನೀಡಲಾಗಿದೆ.
ಈ ನೋಟಿಸ್‌ ನೀಡಿದ ಒಂದು ವಾರದ ಒಳಗಾಗಿ ಸೂಕ್ತ ಸಮಜಾಯಿಷಿ ನೀಡಬೇಕು ಇಲ್ಲವಾದರೆ, ಈ ಬಗ್ಗೆ ಶಿಸ್ತು ಸಮಿತಿಯು ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಜಿ.ಸಿ.ಚಂದ್ರಶೇಖರ್ ಎಚ್ಚರಿಸಿದ್ದಾರೆ.