ಕರ್ನಾಟಕ ಹೆಮ್ಮೆಯ ಸಂಗೀತ ಸಾಮ್ರಾಟ್ ಪ್ರಶಸ್ತಿಗೆ ಎನ್. ನಿಕೀಲ್ ಆಯ್ಕೆ

ವಿಜಯ ದರ್ಪಣ ನ್ಯೂಸ್…

ಕರ್ನಾಟಕ ಹೆಮ್ಮೆಯ ಸಂಗೀತ ಸಾಮ್ರಾಟ್ ಪ್ರಶಸ್ತಿಗೆ ಎನ್. ನಿಕೀಲ್ ಆಯ್ಕೆ

ಸವಿತ ಸಮಾಜದ ಕೀರ್ತಿಯನ್ನು ಬೆಳಗಿದ ಯುವ ಡೋಲು ವಿಧ್ವಾನ್ ತಾಲ್ಲೂಕಿನ ಗೊಬ್ಬರಗುಂಟೆಯ
ಎನ್. ನಿಕೀಲ್ ಆಯ್ಕೆಯನ್ನು ತಾಲೂಕಿನ ಜನಾಂಗದ ಪರವಾಗಿ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಸವಿತ ಸಮಾಜದ ಜಿಲ್ಲಾಧ್ಯಕ್ಷ ರಾಮೂರ್ತಿ ತಿಳಿಸಿರುತ್ತಾರೆ.

ಅವರು ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸವಿತ ಸಮಾಜದ ತಾಲೂಕು ಪದಾದಿಕಾರಿಗಳು,ವಿವಿಧ ಪ್ರಗತಿ ಪರ ಸಂಘಟನೆ ಕಾರ್ಯಕರ್ತರು ಏರ್ಪಡಿಸಿದ್ದ ಬೆಂಗಳೂರಿನಲ್ಲಿ ಅತ್ಯುತ್ತಮ ಡೊಲು ವಿದ್ವಾನ್ ಪ್ರಶಸ್ತಿ 2025 ನೇ ಸಾಲಿನ  ಸಮಾರಂಭದಲ್ಲಿ ಕರ್ನಾಟಕ ಹೆಮ್ಮೆಯ ಸಂಗೀತ ಸಾಮ್ರಾಟ್ ಪ್ರಶಸ್ತಿ ಪುರಸ್ಕತ ಎನ್. ನಿಕೀಲ್ ಅವರನ್ನು ಗುರ್ತಿಸಿ ಸನ್ಮಾನಿಸಿದ ಬಳಿಕ ಮಾತನಾಡಿ, ನಮ್ಮ ಸಮಾಜದಲ್ಲಿ ಪ್ರತಿಭಾವಂತ ಸಮಾಜದ ಏಳಿಗೆಯನ್ನು ಮುಂದಿನ ದಿನಗಳಲ್ಲಿ ಗುರ್ತಿಸುವ ಹಾಗೂ ಅಭಿನಂದಿಸುವ ಜವಾಬ್ದಾರಿ ಯನ್ನು ಜನಾಂಗದ ಮುಖಂಡರು ವಹಿಸಿಕೊಳ್ಳಬೇಕು. ಯಾವುದೇ ಧಾರ್ಮಿಕ ಸಭೆ ಸಮಾರಂಭಗಳಿಗೆ ಡೋಲು, ನಾದಸ್ವರಗಳನ್ನು ನುಡಿಸುವುದು ಅಲ್ಲದೇ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತ ಬಂದಿದ್ದೇವೆಂದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರಾಮೂರ್ತಿ, ಜನಾಂಗದ ಕಾರ್ಯಧ್ಯಕ್ಷ ಹುರುಗುರ್ಕಿ ಮಂಜುನಾಥ್, ಉಪಾಧ್ಯಕ್ಷ ವೆಂಕಟೇಶ್, ನಾಗರಾಜು, ಜನಾಂಗದ ಮುಖಂಡ ಕೃಷ್ಣಪ್ಪ, ದೇವನಹಳ್ಳಿ ಕುಮಾರ್, ಲೋಕೇಶ್, ಮಂಜುನಾಥ್, ಶ್ರೀಮತಿ ಗಾಯಿತ್ರಿ ನರಸಿಂಹಮೂರ್ತಿ, ಸಾರ್ವಜನಿಕರು
ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.