ರೈತರಿಗೆ  ನೆರವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್‌ ವಿತರಣೆ 

ವಿಜಯ ದರ್ಪಣ ನ್ಯೂಸ್…

ರೈತರಿಗೆ  ನೆರವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್‌ ವಿತರಣೆ

ಶಿಡ್ಲಘಟ್ಟ : ರೈತರಿಗೆ ಶೀಘ್ರವಾಗಿ ಸೇವೆ ಸಲ್ಲಿಸಲು ನೆರವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್‌ ವಿತರಿಸಿದ್ದು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕರಾದ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದ ಅವರು ಜನ ಸಾಮಾನ್ಯರು ಸೇರಿದಂತೆ ರೈತರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಬಂದಾಗ ವಿನಾಕಾರಣ ಅವರನ್ನು ಕಚೇರಿಗೆ ಅಲೆಸದೇ ಶೀಘ್ರವಾಗಿ ಕೆಲಸ ಮಾಡಿಕೊಡಬೇಕೆಂಬ ಸದುದ್ದೇಶದಿಂದ ಸರ್ಕಾರವು ಲ್ಯಾಪ್ ಟಾಪ್ ನೀಡಿದೆ ಅಧಿಕಾರಿಗಳು ಸ್ಪಂದಿಸಿ ವಿಳಂಭ ಮಾಡದೇ ಅವರ ಕೆಲಸ ಮಾಡಿಕೊಡಿ ಎಂದು ಹೇಳಿದರು.

ತಹಶೀಲ್ದಾ‌ರ್ ಗಗನ ಸಿಂಧು ಮಾತನಾಡಿ,ಭೂ ಸುರಕ್ಷಾ, ಪಬ್ಲಿಕ್ ಖಾತೆ ಸೇರಿದಂತೆ ಎಲ್ಲವೂ ಡಿಜಿಟಲ್ ಆಗುತ್ತಿದೆ ಹಿಂದಿನಂತೆ ಕಚೇರಿಯಿಲ್ಲದೆ ಫೋನ್ ನಲ್ಲಿ ಮಾತ್ರ ಕೆಲಸ ಮಾಡಬೇಕಾಗುತ್ತಿದ್ದ ತೊಂದರೆಯನ್ನು ನಿವಾರಿಸಲು ಇದೀಗ ಲ್ಯಾಪ್ ಟಾಪ್ ವಿತರಣೆಯಾಗಿದ್ದು ಅಧಿಕಾರಿಗಳು ಸರಿಯಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಜನತೆಗೆ ಉತ್ತಮ ಸೇವೆ ನೀಡಲು ಸಜ್ಜಾಗಬೇಕಿದೆ ಎಂದರು.

ಡಿಜಿಟಲ್ ಕರ್ನಾಟಕದ ಭಾಗವಾಗಿ ಕಂದಾಯ ಇಲಾಖೆಯಲ್ಲಿ ರಾಜ್ಯದ ಎಲ್ಲಾ ಭೂ ದಾಖಲೆಗಳನ್ನು ಆನ್ ಲೈನ್ ವ್ಯವಸ್ಥೆಗೆ ತರಲಾಗುತ್ತಿದೆ ಆ ನಿಟ್ಟಿನಲ್ಲಿ ಆದಿಕಾರಿಗಳು ಶ್ರಮಿಸಿ ಕಾರ್ಯಗತಗೊಳಿಸಬೇಕಂದು ಹೇಳಿದರು.
ಗ್ರಾಮ ಆಡಳಿತಾಧಿಕಾರಿಗಳು ಈಗ ಡಿಜಿಟಲ್ ವ್ಯವಸ್ಥೆಯೊಂದಿಗೆ ತೊಡಗಿಸಿಕೊಂಡು ಗ್ರಾಮೀಣ ಮಟ್ಟದಲ್ಲಿಯೇ ಮಾಹಿತಿ ನಿರ್ವಹಣೆ, ದಾಖಲೆ ಸಂರಕ್ಷಣೆ ಹಾಗೂ ಸೇವಾ ವಿತರಣೆಯಲ್ಲಿ ನೂತನ ಪ್ರಗತಿಗೆ ಕಾರಣರಾಗಬೇಕಿದೆ. ಇದು ‘ಡಿಜಿಟಲ್ ಕರ್ನಾಟಕ’ ಕನಸು ಸಾಕಾರವಾಗಲು ನೆರವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಶಿರಸ್ತೇದಾರ್ ಆಯಿಷಾ ಬೀ, ಗ್ರಾಮ ಆಡಳಿತಾಧಿಕಾರಿಗಳು ಹಾಗು ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

&&&&&&&&&&&&&&&&&&&&&&&&&&

ಆಧ್ಯಾತ್ಮಿಕ ವಿಚಾರ:

ವರ್ತಮಾನದಲ್ಲಿ ಮನುಷ್ಯನಿಗೆ ವೈಯಕ್ತಿಕ ಸಮಸ್ಯೆಗಳು ಏಕೆ ಹೆಚ್ಚಾಗುತ್ತವೆ._

ಸೃಷ್ಟಿಯಲ್ಲಿ ಒಂದು ನಿಯಮವಿದೆ ನಾವು ಏನನ್ನು ಜಗತ್ತಿಗೆ ಕೊಡುತ್ತೇವೋ ಅದು ನಮಗೆ ಖಂಡಿತವಾಗಿಯೂ ಹಿಂದಿರುಗುಸುತ್ತದೆ. ಇದು ಸಂಕಲ್ಪ ಮತ್ತು ಕರ್ಮಕ್ಕೂ ಕೂಡ ಅನ್ವಯವಾಗುತ್ತದೆ. ವರ್ತಮಾನದಲ್ಲಿ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಿ ಮನುಷ್ಯನು ಅಶಾಂತಿಯಲ್ಲಿ ಮುಳುಗಿರಲು ಕಾರಣವೇನೆಂದರೆ…

01. ಅನ್ಯರಿಗೆ ಕೆಟ್ಟದಾಗಲಿ ಎಂದು ಯೋಚಿಸುವುದು,
02. ಅತಿಯಾದ ಸ್ವಾರ್ಥ,
03. ಲಂಚತೆಗೆದುಕೊಳ್ಳುವುದು,
04. ಮೋಸ ಮಾಡುವುದು,
05. ಅಧಿಕಾರದ ದರ್ಪ ಅಹಂಕಾರದ ದರ್ಪ,
06. ಕೆಟ್ಟ ಕರ್ಮಗಳನ್ನು ಮಾಡುವುದು,
07. ಕೊಲೆಯ ಸುಲಿಗೆ ದರೋಡೆಗಳನ್ನುಮಾಡುವುದು,
08. , ಅತಿಯಾದ ಮೋಹ,
09. ಕೈಲಾದ ಸಹಾಯ ಮಾಡುವ ಗುಣವನ್ನು ಮರೆತಿರುವುದು,
10. ಬೇರೆಯವರೊಂದಿಗೆ ತನ್ನ ಜೀವನವನ್ನು ಹೋಲಿಸಿಕೊಳ್ಳುವುದು.
11. ಅತಿಯಾದ ಹಣದ ಆಸೆ,

ಈ ಮೇಲಿನ ಎಲ್ಲಾ ಕಾರಣಗಳಿಂದ ಮನಸ್ಸು ಹುಚ್ಚು ಕುದುರೆಯಾಗಿ ಓಡುತ್ತಾ, ತನ್ನ ಆತ್ಮದಲ್ಲಿ ಪಾಪದ ಗಂಟನ್ನು ಹೆಚ್ಚು ಮಾಡಿಕೊಳ್ಳುತ್ತಾ ಅಶಾಂತವಾಗಿರುವುದರ ಜೊತೆಗೆ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗುತ್ತವೆ ಮರೆಯಬೇಡಿ. ಜಗತ್ತಿಗೆ ನಾವು ಏನನ್ನು ಕೊಡುತ್ತೇವೆ ಅದನ್ನು ಹಿಂತಿರುಗಿ ಪಡೆಯಲೇಬೇಕು,