ಸಿದ್ದರಾಮಯ್ಯ  ನಡೆದು ಬಂದ ಹಾದಿ ಮರೆತಿದ್ದಾರೆ : ನಿಖಿಲ್ ಕುಮಾರಸ್ವಾಮಿ

ವಿಜಯ ದರ್ಪಣ ನ್ಯೂಸ್…

ಸಿದ್ದರಾಮಯ್ಯ  ನಡೆದು ಬಂದ ಹಾದಿ ಮರೆತಿದ್ದಾರೆ : ನಿಖಿಲ್ ಕುಮಾರಸ್ವಾಮಿ

ಜನರ ಜತೆ ಜನತಾದಳ, ಡಿಜಿಟಲ್ ಜೆಡಿಎಸ್ ಸದಸ್ಯತ್ವ ಅಭಿಯಾನ: ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ಅಭಿಮತ

ದೇವನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದು ಬಂದ ಹಾದಿಯನ್ನು ಮರೆತು ಹೋಗಿದ್ದಾರೆ. ದೇವೇಗೌಡರ ಗರಡಿಯಲ್ಲಿ ಬೆಳೆದು ಈ ಮಟ್ಟಕ್ಕೆ ಬಂದಿರುವ ಇತಿಹಾಸ ಮರೆತಿದ್ದಾರೆ. ಜೆಡಿಎಸ್ ಪಕ್ಷ ಮುಳುಗುತ್ತದೆ ಎಂದು ಹೇಳುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಅವರು ದೇವನಹಳ್ಳಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಆಟದ ಮೈದಾನದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಿಂದ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಹಾಗೂ ಡಿಜಿಟಲ್ ಜೆಡಿಎಸ್ ಸದಸ್ಯತ್ವ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದೆ. ಸಚಿವರಾಗಿದ್ದ ರಾಜಣ್ಣ ಕಾಂಗ್ರೆಸ್ ನಲ್ಲಿರುವ ವಾಸ್ತವಂಶವನ್ನು ಹೇಳಿದ್ದರಿಂದ ಅವರನ್ನು ಸಚಿವಸ್ಥಾನದಿಂದ ವಜಾಗೊಳಿಸಿದ್ದಾರೆ.ಚುನಾವಣೆಗಳ ವೇಳೆ ಗೃಹಲಕ್ಷ್ಮಿ ಹಣವನ್ನು ಹಾಕುತ್ತಾರೆ.

ಜೆಡಿಎಸ್ ಕಾರ್ಯಕರ್ತರ ಪಕ್ಷ, ಕಾರ್ಯಕರ್ತರೇ ಜೆಡಿಎಸ್ ಶಕ್ತಿ. ಜೆಡಿಎಸ್ ಪಕ್ಷ ನಿಮ್ಮಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ. ಇಡೀ ರಾಜ್ಯದಲ್ಲಿ ,70 ಕ್ಷೇತ್ರಗಳನ್ನು ಸುತ್ತುತ್ತಿದ್ದೇನೆ ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ ರಾಮನಗರ ಮತ್ತು ಕೋಲಾರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಮಾವು ಮತ್ತು ಇತರೆ ಬೆಳೆಗಳು ನನ್ನದಲ್ಲಿದ್ದಾಗ ಕೇಂದ್ರ ಕೃಷಿ ಸಚಿವರೊಂದಿಗೆ ಮಾತನಾಡಿ ಬೆಂಬಲ ಬೆಲೆಗಳನ್ನು ಕೊಡಿಸುವ ಕೆಲಸವನ್ನು ಮಾಡಿದ್ದಾರೆ. ಈಗಾಗಲೇ ಕೃಷಿ ಸಚಿವರು ಇದನ್ನು ಒಪ್ಪಿಕೊಂಡಿದ್ದಾರೆ.

ಅಭಿವೃದ್ಧಿಯಲ್ಲಿ ಕಾಂಗ್ರೆಸ್ ವಿಫಲ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಹಿಂದುಳಿದಿದೆ. ಹಳ್ಳಿಗೆ ತೆರಳಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಪಗರಣಗಳ ಬಗ್ಗೆ ತಿಳಿಸಬೇಕು, ಕಾರ್ಯಕರ್ತರು ಧೃತಿ ಗೆಡಬಾರದು. ಎಸ್ ಸಿಪಿ, ಟಿಎಸ್ ಪಿ ಅನುದಾನವನ್ನು ಮೊದಲ ಅವಧಿಯಲ್ಲಿ ಹನ್ನೊಂದು ಸಾವಿರ ಕೋಟಿ, 2ನೇ ಅವಧಿಯಲ್ಲಿ 17,000 ಕೋಟಿಯನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿದ್ದಾರೆ ಎಸ್ಸಿಎಸ್ಪಿ ಕಾಲೋನಿಗಳ ಅಭಿವೃದ್ಧಿಗೆ ಇಟ್ಟಿದ್ದ ಅನುದಾನವನ್ನು ಬಳಸಿಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸುವ ಮೂಲಕ ತಮ್ಮ ಜೆಡಿಎಸ್ ಭದ್ರಕೋಟೆ ಎಂದು ಸಾಬೀತು ಪಡಿಸಬೇಕು ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಜೆಡಿಎಸ್ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಗಟ್ಟಿಯಾಗಿ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ಸದಸ್ಯತ್ವ ಅಭಿಯಾನದ ಮೂಲಕ ಹಾಗೂ ಜನರೊಂದಿಗೆ ಜನತಾದಳ ಎಂಬ ಕಾರ್ಯಕ್ರಮದ ಮೂಲಕ ಎಲ್ಲೆಡೆ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ಕಲಾಪ ಮತ್ತು ಹೊರಗಡೆ ಹೋರಾಟಗಳನ್ನು ಮಾಡಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಗ್ಯಾರೆಂಟಿಯೋಜನೆಗಳಿಂದ ಬಂದಿರುವ ಸರ್ಕಾರ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡುವವರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.

ಮಾಜಿ ಶಾಸಕ ಎಲ್.ಎನ್. ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಂಘಟಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಬಂದಿರುವ ಈ ಜನಸಾಗರವೇ ನಮಗೆ ಶಕ್ತಿ, ಮುಂಬರುವ ಚುನಾವಣೆಯಲ್ಲಿ ಬಹುಮತಗಳನ್ನು ನೀಡುವುದರ ಮೂಲಕ ಶಕ್ತಿ ತುಂಬಬೇಕಿದೆ. ಕುಮಾರಣ್ಣ ಅವರು ಭಾರತ ದೇಶದಲ್ಲಿ ಮತ್ತೆ 2 ಜವಾಬ್ದಾರಿಯುತ ಸ್ಥಾನ ಲಭಿಸಿರುವುದು ಜನರ ಆರ್ಶೀವಾದಕ್ಕೆ ಸಾಕ್ಷಿ ಮೈಸೂರಿನ ಭದ್ರಾವತಿ ಉಕ್ಕಿನ ಕಾರ್ಖಾನೆಗೆ ಮರು ಜೀವ ಕಲ್ಪಿಸಲಿದ್ದಾರೆ ಎಂದರು.

ಕಾಂಗ್ರೆಸ್ ನಿಂದ ಕಿರುಕುಳ: ಮಾಜಿ ಮಂತ್ರಿ ಪುಟ್ಟರಾಜು ಮಾತನಾಡಿ, 1983ರಲ್ಲಿ ಪಕ್ಷದಲ್ಲಿ ಸಕ್ರಿಯ ಸಚಿವರಾಗಿ ಕಾರ್ಯನಿರ್ವಹಿಸಿದ್ದೇನೆ. ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು 25,000 ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. 14 ತಿಂಗಳು ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನೀಡಿದ ಕಿರುಕುಳವನ್ನು ನಿಂದೂ ಮರೆಯಲಾಗದು, ದೇವೇಗೌಡರಾಗಲಿ ಕುಮಾರಸ್ವಾಮಿಯಾಗಲಿ ಸರ್ಕಾರ ಮಾಡುತ್ತೇವೆ ಎಂದು ಅವರ ಜೊತೆ ಹೋಗಿರಲಿಲ್ಲ ಅವರೇ ನಮ್ಮನ್ನು ಹುಡುಕಿಕೊಂಡು ಬಂದು ಕಿರುಕುಳ ನೀಡಿದರು ಎಂದರು.

ದೇವನಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್ ಮುನೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ ಮುನೇಗೌಡ , ಬಮೂಲ್ ಮಾಜಿ ಉಪಾಧ್ಯಕ್ಷ ಇರೀಗೇನಹಳ್ಳಿ ಬಿ ಶ್ರೀನಿವಾಸ್, ಶಿಡ್ಲಘಟ್ಟ ಶಾಸಕ ರವಿಕುಮಾರ್, ನೆಲಮಂಗಲ ಮಾಜಿ ಶಾಸಕ ಶ್ರೀನಿವಾಸ್ ಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ , ಜೆಡಿಎಸ್ ಸೇವಾದಳದ ರಾಜ್ಯಾಧ್ಯಕ್ಷ ಬಸವರಾಜ್ ಪಾದಯಾತ್ರಿ, ದೇವನಹಳ್ಳಿ ತಾಲೂಕು, ಜೆಡಿಎಸ್ ಅಧ್ಯಕ್ಷ ಆರ್ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ಕಾರ್ಯಾಧ್ಯಕ್ಷ ಲಕ್ಷಣ, ಖಜಾಂಚಿ ಸಾದಹಳ್ಳಿ ಮಹೇಶ್, ಕುಂದಾಣ ಹೋಬಳಿ ಅಧ್ಯಕ್ಷ ಜಗದೀಶ್, ಚನ್ನರಾಯಪಟ್ಟಣ ಹೋಬಳಿಯ ಅಧ್ಯಕ್ಷ ಮುನಿರಾಜು, ವಿಜಯಪುರ ಹೋಬಳಿ ಅಧ್ಯಕ್ಷ ಕೃಷ್ಣಪ್ಪ. ತೂಬಗೆರೆ ಹೋಗುಳಿ ಅಧ್ಯಕ್ಷ ಜಗನ್ನಾಥ ಚಾರಿ . ಎಪಿಎಂಸಿ ಮಾಜಿ ಅಧ್ಯಕ್ಷ ಕೋಡಗುರ್ಕಿ ಮಂಜುನಾಥ್, ಜಿಲ್ಲಾ ಜೆಡಿಎಸ್ ಸಂಚಾಲಕ ಜೊನ್ನಹಳ್ಳಿ ಮುನಿರಾಜು, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಮಂಡಿಬೆಲೆ ರಾಜಣ್ಣ, ದೇವನಹಳ್ಳಿ ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಟಿ.ಹೊಸಹಳ್ಳಿ ರವಿ ಇತರರಿದ್ದರು.