ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರಿಗೆ ಧೈರ್ಯ, ಆತ್ಮಸ್ಥೃೆರ್ಯ ಲಭಿಸಲಿ, ದುಷ್ಟ ಶಕ್ತಿಗಳಿಗೆ ಸೋಲಾಗಲಿ ಎಂದು ಧರ್ಮದ ರಕ್ಷಣಾ ಪೂಜೆ

ವಿಜಯ ದರ್ಪಣ ನ್ಯೂಸ್….

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರಿಗೆ ಧೈರ್ಯ, ಆತ್ಮಸ್ಥೃೆರ್ಯ ಲಭಿಸಲಿ, ದುಷ್ಟ ಶಕ್ತಿಗಳಿಗೆ ಸೋಲಾಗಲಿ ಎಂದು ಧರ್ಮದ ರಕ್ಷಣಾ ಪೂಜೆ

ರಾಜಾಜಿನಗರ: ಧರ್ಮಸ್ಥಳ ಪಾದಯಾತ್ರ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಚಾರ, ಷಡ್ಯಂತ್ಯ , ನಿರಾಧಾರ ಅರೋಪ ವಿರುದ್ದ ಧರ್ಮ ರಕ್ಷಣೆಗಾಗಿ ಧರ್ಮದ ರಕ್ಷಣಾ ಪೂಜೆ ಕಾರ್ಯಕ್ರಮ.

ಮಾಜಿ ಶಿಕ್ಷಣ ಸಚಿವರು, ಶಾಸಕ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಮೋದಿ ವೃತ್ತದಿಂದ ಪಾದಯಾತ್ರೆ ಮೂಲಕ ಸಾಗಿ ಶ್ರೀ ಶನೃೆಶ್ವರ ಸ್ವಾಮಿ ಸನ್ನಿಧಾನ ಮತ್ತು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಶ್ರೀ ಕ್ಷೇತ್ರದ ಧರ್ಮಸ್ಥಳದ ವಿರುದ್ದ ವ್ಯವಸ್ಥಿತವಾಗಿ ಅಪಪ್ರಚಾರ, ಷಡ್ಯಂತ್ರ, ಪಿತೂರಿ ಮಾಡುತ್ತಿದ್ದಾರೆ, ನಮ್ಮ ಧರ್ಮದ ವಿರುದ್ದ ವ್ಯವಸ್ಥಿತ ಸಂಚು ನಡೆಯುತ್ತಿದೆ.

ಅಮಾಯಕಿ ಸೌಜನ್ಯ ಹತ್ಯೆಗೆ ನ್ಯಾಯ ದೊರಕಬೇಕು ಎಂಬ ಧ್ವನಿ ಎತ್ತಿರುವುದು ನಾವು.

ಮುಸುಕುಧಾರಿಯ ಬಣ್ಣ ಬಯಲು ಆಗಿದೆ, ಅಪಪ್ರಚಾರಕ್ಕೆ ವಿಡಿಯೊ ಮಾಡಿದ ವ್ಯಕ್ತಿ ಯಾರೊ ಹೇಳಿ ಕೊಟ್ಟಿದ್ದು ಅಂತ ಹೇಳಿಕೆ ನೀಡಿದ್ದಾನೆ.

ಬುರುಡೆ ಬಿಟ್ಟ ಬುರುಡೆ ವ್ಯಕ್ತಿಯ ಬಗ್ಗೆ ಪೂರ್ವಪರ ಯೋಚನೆ ಮಾಡದೇ ಇರುವುದು ಸರ್ಕಾರದ ವೈಫಲ್ಯ ಎಂದು ಕಾಣುತ್ತದೆ. ಅವನ ಮಾತುಗಳಿಗೆ ಸರ್ಕಾರ ನಂಬಿರುವುದು ದುರಂತ.

ಕಂಚಿ ಕಾಮಕೋಟಿ, ಶಬರಿಮಲೆ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಮಾಡಿದ ಸಂಚುಗಳು ಸೋಲುತ್ತಿದೆ. ಜನರ ಭಾವನೆ ಭರವಸೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲಿದೆ.

ಜನರ ನಂಬಿಕೆಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳಿಗೆ ಒಳ್ಳೆ ಬುದ್ದಿ ಕೊಡಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸುತ್ತೇನೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರಿಗೆ ಧೈರ್ಯ, ಆತ್ಮಸ್ಥೃೆರ್ಯ ಲಭಿಸಲಿ, ದುಷ್ಟ ಶಕ್ತಿಗಳಿಗೆ ಸೋಲಾಗಲಿ ಎಂದು ವಿಶೇಷ ಪೂಜೆ.

ಷಡ್ಯಂತ್ರ ಮಾಡಿದವರು ಪರಿತಪಿಸುತ್ತಿದ್ದಾರೆ. ಅವರಿಗೆ ಒಳ್ಳೆ ಬುದ್ದಿ ಕೊಡಲಿ. ಧರ್ಮ ಉಳಿಯಬೇಕು, ಆಧರ್ಮ ಆಳಿಯಬೇಕು ಎಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ , ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್,ದೀಪಾ ನಾಗೇಶ್, ಪ್ರತಿಮ,ಮಂಡಲದ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಬಿಜೆಪಿ ಮುಖಂಡರುಗಳಾದ ಕಾಮಧೇನು ಸುರೇಶ್, ಗಂಗಾಧರ್ (ಗೂಳಿ),ಯಶಸ್ ನಾಯಕ್, ಕೇಶವಮೂರ್ತಿ,ರಾಕೇಶ್, ವಿಶ್ವನಾಥ್, ಮೋಹನ್ ರಾಜು, ಕಿರಣ್, ಆನಿಲ್ ರಂಗಣ್ಣ,ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಕುಮಾರ್ ರವರು ಮತ್ತು ಹಿಂದೂ ಪರ ಹೋರಾಟಗಾರರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.