ಕರ್ನಾಟಕದಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸಬೇಕು :ಕಂಟನಕುಂಟೆ ಕೃಷ್ಣಮೂರ್ತಿ
ವಿಜಯ ದರ್ಪಣ ನ್ಯೂಸ್…..
ಕರ್ನಾಟಕದಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸಬೇಕು :ಕಂಟನಕುಂಟೆ ಕೃಷ್ಣಮೂರ್ತಿ

ದೇವನಹಳ್ಳಿ, ಡಿ. 29 : ವ್ಯಾವಹಾರಿಕವಾಗಿ ನಾವು ಯಾವುದೇ ಭಾಷೆಯನ್ನು ಕಲಿತರೂ ಕನ್ನಡ ಭಾಷೆಯನ್ನು ಮಾತ್ರ ಮಾತನಾಡಬೇಕು, ಪರಭಾಷಿಕರಿಗೆ ಕನ್ನಡ ಕಲಿಸಬೇಕು’ ಎಂದು ಬೆಂ.ಗ್ರಾ. ಕನ್ನಡ ರಂಗಭೂಮಿ ಕಲಾವಿದರ ಸಂಘದ ಗೌರವ ಅಧ್ಯಕ್ಷ ಕಂಟನಕುಂಟೆ ಕೃಷ್ಣಮೂರ್ತಿ ತಿಳಿಸಿದರು.
ತಾಲ್ಲೂಕಿನ ವೆಂಕಟಗಿರಿಕೋಟೆ ಪಂಚಾಯ್ತಿಯ ಮುದುಗುರ್ಕಿ ಗ್ರಾಮದ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಮೋಹನ್‌ಬಾಬುರವರ ಗೃಹದಲ್ಲಿ ಆಯೋಜಿಸಿದ್ದ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ 129ನೇ ಮಾಸದ ಕನ್ನಡ ದೀಪ ಕಾರ್ಯಕ್ರಮ, ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ 46ನೇ ಮಾಸದ ರಂಗಕಲಾಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
‘ನಾಟಕಗಳು ಸುಸಂಸ್ಕೃತ ಸಮಾಜ ಕಟ್ಟಲು ಸಹಕಾರಿ ಯಾಗುತ್ತವೆ ಆದುದರಿಂದ ಇಂದಿನ ಯುವಕರಿಗೆ ಹಿರಿಯ ಕಲಾವಿದರು ಮಾರ್ಗದರ್ಶನ ಮಾಡಿ ಕನ್ನಡ ಪ್ರೇಮದ ಜೊತೆ ಕಲೆ, ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು, ಇಂತಹ ಕನ್ನಡದೀಪ ಕಾರ್ಯಕ್ರಮದಿಂದ ಕನ್ನಡ ಭಾಷಾ ಪ್ರೇಮವನ್ನು ಹೆಚ್ಚಿಸುತ್ತದೆ’ ಎಂದು ಹೇಳಿ ದರು.
ಜಿಲ್ಲಾ ರಂಗಭೂಮಿಕಲಾವಿದರ ಅಧ್ಯಕ್ಷ ರಬ್ಬನಹಳ್ಳಿ ಡಿ.ಕೆಂಪಣ್ಣ ಮಾತನಾಡಿ, ‘ಕನ್ನಡ ನಾಡಿನ ಸಂಸ್ಕೃತಿ, ಭಾಷೆ ಉಳಿಯಬೇಕಾದರೆ ಜಾನಪದ, ನಾಟಕಕಲೆ ಶಾಲಾ, ಕಾಲೇಜಿನಲ್ಲಿ ಪಠ್ಯ ಪುಸ್ತಕದಲ್ಲಿ ತಂದು ನಾಟಕ ಪ್ರಯೋಗಗಳನ್ನು ಮಾಡಿದರೆ ಪ್ರತಿಭಾವಂತ ಕಲಾವಿದರು ಸೃಷ್ಟಿಯಾಗಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು
ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಬಾಬು ಮಾತನಾಡಿ, ‘ರಂಗಭೂಮಿ ಕಲಾವಿದರ ನಾಟಕಗಳ ಪ್ರದರ್ಶನದಿಂದ ಶಿಸ್ತು, ಸಹಬಾಳ್ವೆ, ಸಹಕಾರ, ಉತ್ತಮ ಬದುಕಿನ ಮೌಲ್ಯಗಳನ್ನು ಬೆಳಸಿಕೊಳ್ಳಲು ಅನುಕೂಲವಾಗಿ ವ್ಯಕ್ತಿತ್ವ ವಿಕಾಸವಾಗುತ್ತದೆ’ ಎಂದು ಹೇಳಿದರು.
ರಂಗ ಬೆಂ.ಗ್ರಾ.ಕನ್ನಡ ಭೂಮಿ ಕಲಾವಿದರ ಸಂಘದ ಕಾರ್ಯದರ್ಶಿ ಹಾರೋಹಳ್ಳಿ ಸುಬ್ರಮಣಿ, ನಾಟಕ ನಿರ್ದೇಶಕ ಸುಬ್ರಹ್ಮಣ್ಯಾಚಾರ್ ಶಿಕ್ಷಕ ಚಂದ್ರಶೇಖರ್ ಹಡಪದ್, ನಾರಾಯಣಸ್ವಾಮಿ, ನಾಯುಡು, ಹೊಸಹಳ್ಳಿ ವಾಸು, ಪಿಡಿಒ ರಂಗಸ್ವಾಮಿ, ಬೈಚಾಪುರದ ಹಿರಿಯ ಕಲಾವಿದ ನಾರಾಯಣಸ್ವಾಮಿ ಭಾಗವಹಿಸಿದ್ದರು.
