ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಹಿಸುವುದಿಲ್ಲ:ಸಚಿವ ಕೆಎಚ್ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್ 

ವಿಜಯಪುರ ಪಟ್ಟಣದ ಕಾಂಗ್ರೆಸ್ ಮುಖಂಡರು ನಿಮ್ಮ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾರೆ ಕೆಲಸ ಮಾಡಬೇಕಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ  ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮುಖಂಡರು ಪಟ್ಟಣದ ಅಭಿವೃದ್ಧಿಯ ಕಡೆ ಹೆಚ್ಚು ಗಮನಹರಿಸಬೇಕು ನಿಮ್ಮ ನಿಮ್ಮ ಭಿನ್ನ ಅಭಿಪ್ರಾಯ ಪಕ್ಕಕ್ಕೆ ಇಟ್ಟು ಇಬ್ಬರು ಒಟ್ಟಾರೆ ಕೆಲಸ ಮಾಡಬೇಕು ನಾನು ಯಾವುದೇ ಕಾರಣಕ್ಕೂ ಇಬ್ಬರು ಮುಖಂಡರು ಒಟ್ಟಾಗಿ ಇರುವುದನ್ನು ಬಯಸುತ್ತೇನೆ, ಹೊರತು ಬೇರೆ ಬೇರೆ ಉದ್ದೇಶಗಳ ಕಡೆ ಗಮನ ಹರಿಸುವುದಿಲ್ಲ. ನೀವು ಕಾಂಗ್ರೆಸ್ ಪಕ್ಷ ಎಲ್ಲಾರ ಕುಟುಂಬದ ಪಕ್ಷವಾಗಿದ್ದು ನೀವು ಒಟ್ಟಾರೆ ಸಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡಬೇಕಿದೆ ಎಂದರು.ಇನ್ನು ಮುಂದೆ ಪಟ್ಟಣದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರು ಎಲ್ಲಾರು ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಮಾತ್ರ ನಾನು ಸ್ಪಂದಿಸುತ್ತೇನೆ. ಇಲ್ಲವಾದಲ್ಲಿ ನಾನು ಹೇಳಿದ ಹಾಗೆ ನೀವು ಮಾಡಬೇಕು, ನಾನು ಹೇಳಿದ ಕಡೆ ನೀವು ಬರಬೇಕು ಹೊರತು ನಾನು ಬರುವುದಿಲ್ಲವೆಂದು ಎಚ್ಚರಿಕೆ ನೀಡಿದರು.

ನೂತನ ಸಚಿವ ಕೆ.ಎಚ್.ಮುನಿಯಪ್ಪ ರವರಿಗೆ ಅಭಿನಂದನೆ ತಿಳಿಸಿ ಮಾತನಾಡಿದಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ ಸಚಿವ ಕೆ.ಎಚ್.ಮುನಿಯಪ್ಪ ರವರು ಹಿರಿಯ ರಾಜಕಾರಣಿಗಳು ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವೇಲ್ಲರು ನಡೆದುಕೊಳ್ಳಬೇಕು, ಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ನಾವು ಅಭಿನಂದನಾ ಸಮಾರಂಭ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಮಾರಂಭದಲ್ಲಿ ಭಾಗವಹಿಸಬೇಕು. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಶಕ್ತಿ ತುಂಬುವಂತಹ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು

ಈ ಸಂದರ್ಭದಲ್ಲಿ ಮಾಜಿ ಸಂಸದ ಸಿ.ನಾರಾಯಣಸ್ವಾಮಿ,‌‌  ಪುರಸಭಾ ಸದಸ್ಯ ನಂದಕುಮಾರ್, ಭವ್ಯಮಹೇಶ್, ಇತರರು ಹಾಜರಿದ್ದರು