ವಿಜಯ ದರ್ಪಣ ನ್ಯೂಸ್….
ಕರ್ತವ್ಯನಿಷ್ಠೆಗೆ ಸಂದ ಗೌರವ ಶ್ರೀಮತಿ ಜೀತ್ ಅವರ ಮುಂಬಡ್ತಿ ಇತರರಿಗೆ ಮಾದರಿಯಾಗಲಿ

ಕುಶಾಲನಗರ: ಅಧಿಕಾರ ಎನ್ನುವುದು ಕೇವಲ ಹುದ್ದೆಯಲ್ಲ ಅದು ಜನರ ವಿಶ್ವಾಸವನ್ನು ಗಳಿಸುವ ಜವಾಬ್ದಾರಿ ಅದು ಶಿಸ್ತು ಪ್ರಾಮಾಣಿಕತೆ ಮತ್ತು ಸೇವಾ ಬದ್ಧತೆಯ ಸಂಕೇತ ಈ ಮೌಲ್ಯಗಳನ್ನು ತಮ್ಮ ವೃತ್ತಿಜೀವನದಲ್ಲಿ ಮೈಗೂಡಿಸಿಕೊಂಡಿರುವ ಶ್ರೀಮತಿ ಜೀತ್ ಅವರು ಮುಂಬಡ್ತಿ ಪಡೆದಿರುವುದು ಸಂತಸದ ಸಂಗತಿ.
ತಾಲ್ಲೂಕು ಕಚೇರಿ ಯಲ್ಲಿ ಕರ್ತವ್ಯನಿಷ್ಠೆ ಸರಳ ವ್ಯಕ್ತಿತ್ವ ಸ್ನೇಹಪರ ನಡೆ ಹಾಗೂ ಪ್ರಾಮಾಣಿಕ ಸೇವೆಗೆ ಸದಾ ಮಹತ್ವವಿದೆ ಇಂತಹ ಗುಣಗಳು ಅಧಿಕಾರಿಯೊಬ್ಬರ ವೈಯಕ್ತಿಕ ಗೌರವವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಇಡೀ ಇಲಾಖೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನೂ ಬಲಪಡಿಸುತ್ತವೆ.
ಮುಂಬಡ್ತಿ ಎಂಬುದು ಕೇವಲ ಹುದ್ದೆಯ ಏರಿಕೆಯಲ್ಲ ಇದುವರೆಗೆ ಸಲ್ಲಿಸಿದ ಸೇವೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಾದ ಸಂಕೇತ* *ಪ್ರತಿಯೊಬ್ಬ ಅಧಿಕಾರಿಯೂ ಅಧಿಕಾರದ ಜೊತೆಗೆ ಮಾನವೀಯತೆ ಕಾನೂನಿನ ಗೌರವ ಮತ್ತು ಜನರ ನೋವಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಜನಸ್ನೇಹಿ ಆಡಳಿತದ ಆಶಯ ಸಾಕಾರಗೊಳ್ಳುತ್ತದೆ.
ಶ್ರೀಮತಿ ಜೀತ್ ಅವರ ಈ ಸಾಧನೆ ಸೇವೆ ಸಲ್ಲಿಸುತ್ತಿರುವ ಇತರರಿಗೂ ಕರ್ತವ್ಯನಿಷ್ಠೆ ಮತ್ತು ವೃತ್ತಿಪರ ಬೆಳವಣಿಗೆಗೆ ಪ್ರೇರಣೆಯಾಗಲಿ ಮುಂದಿನ ದಿನಗಳಲ್ಲಿಯೂ ಅವರು ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಂಡು ಇನ್ನಷ್ಟು ಉನ್ನತ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಲಿ
ಕೊಡಗಿನ ಕುಲದೇವತೆ ಇಗ್ಗುತ್ತಪ್ಪ ಹಾಗೂ ಕಾವೇರಿ ಮಾತೆಯ ಆಶೀರ್ವಾದ ಸದಾ ಅವರ ಮೇಲಿರಲಿ ಅವರ ವೃತ್ತಿಜೀವನ ಗೌರವ ಮತ್ತು ಜನಸೇವೆಯಿಂದ ಮತ್ತಷ್ಟು ಸಮೃದ್ಧವಾಗಲಿ ಎಂದು ಹೃತ್ಪೂರ್ವಕವಾಗಿ ಶುಭ ಹಾರೈಸುತ್ತೇವೆ
ಶುಭಕೋರುವವರು,ಕೊಡಗು ಜನ ಅಭಿವೃದ್ಧಿ ಸಮಿತಿ










