ಎಸ್ ಪಿ ಸುಜಿತ್ ಎಂಬ ರೈತ ಐಷಾರಾಮಿ ಕಾರಲ್ಲಿ ಬಂದು ಸೊಪ್ಪು ಮಾರಿದ

ವಿಜಯ ದರ್ಪಣ ನ್ಯೂಸ್ 

ಕೇರಳ: ರೈತರು ಗೂಡ್ಸ್ ವಾಹನದಲ್ಲಿ ಮಾರುಕಟ್ಟೆ ಬಂದು ತಮ್ಮ ಫಸಲನ್ನು ಮಾರಾಟ ಮಾಡಿ ಹೋಗುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಐಷಾರಾಮಿ ಕಾರಿನಲ್ಲಿ ಮಾರುಕಟ್ಟೆಗೆ ಬಂದು ಸೊಪ್ಪು ಮಾರಾಟ ಮಾಡಿ ಹೋಗಿದ್ದಾನೆ.

ಆ ಕುರಿತ ವಿಡಿಯೋ ಕೂಡ ಹಂಚಿಕೊಂಡಿದ್ದಾನೆ. ಕೇರಳದ ಎಸ್​.ಪಿ. ಸುಜಿತ್ ಎಂಬ ಈ ಯುವರೈತ ತನ್ನ ವೆರೈಟಿ ಫಾರ್ಮರ್ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾನೆ. ನಾನು ಆಡಿ ಕಾರಲ್ಲಿ ಹೋಗಿ ಸೊಪ್ಪು ಮಾರಾಟ ಮಾಡಿದಾಗ ಎಂಬ ಕ್ಯಾಪ್ಷನ್​ನೊಂದಿಗೆ ಈತ ಹಂಚಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಐದು ದಿನಗಳ ಹಿಂದೆ ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ 4.71 ಲಕ್ಷ ವ್ಯೂಸ್ ಕಂಡಿದೆ.
ಬರ್ಮುಡಾದ ಮೇಲೊಂದು ಬಿಳಿ ಪಂಚೆ ಉಟ್ಟು, ಟೀ ಶರ್ಟ್ ಧರಿಸಿ ಆಡಿ ಕಾರಲ್ಲಿ ಮಾರುಕಟ್ಟೆಗೆ ಬಂದ ಈತ, ಅಲ್ಲಿಗೆ ಬರುತ್ತಿದ್ದಂತೆ ಪಂಚೆ ಬಿಚ್ಚಿ ಕಾರೊಳಗಿಟ್ಟು, ಆಟೋವೊಂದರಲ್ಲಿದ್ದ ಸೊಪ್ಪಿನ ಲಗೇಜ್ ಇಳಿಸಿಕೊಳ್ಳುತ್ತಾನೆ. ಬಳಿಕ ಅದನ್ನು ಪ್ಲ್ಯಾಸ್ಟಿಕ್ ಶೀಟ್​ವೊಂದರ ಮೇಲೆ ಹರಡಿ ವ್ಯಾಪಾರ ಮಾಡಿ, ಮತ್ತೆ ಪಂಚೆ ಉಟ್ಟುಕೊಂಡು ಆಡಿ ಕಾರಲ್ಲಿ ಮರಳಿದ್ದಾನೆ.

ಹತ್ತು ವರ್ಷಕ್ಕೂ ಅಧಿಕ ಕಾಲದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಈತ ಈಗಾಗಲೇ ಕೃಷಿಗಾಗಿ ಮೂರು ಸಲ ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಇನ್​ಸ್ಟಾಗ್ರಾಂ ಬಯೋದಲ್ಲಿ ನಮೂದಿಸಲಾಗಿದೆ.