ಇಂದಿನ ಯುವಕರೇ ರಂಗಭೂಮಿ ಉಳಿಸಿ : ಡಾ. ಕೆಂಪಣ್ಣ

ವಿಜಯ ದರ್ಪಣ ನ್ಯೂಸ್

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ 03– ರಂಗಭೂಮಿಯಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಯಪಡಿಸುತ್ತಾ ಇಂದಿನ ಯುವಕರಿಂದ ರಂಗಭೂಮಿ ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಯುವಕರು ರಂಗಭೂಮಿ ಉಳಿಸಿ ನಮ್ಮ ನಾಡಿನ ಪರಂಪರೆಯನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡುತ್ತಾ ಇಡೀ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಕಲಾವಿದರ ಸಂಘ ಮಾಸಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾದದ್ದು ಎಂದು ಹಿರಿಯ ರಂಗಭೂಮಿ ಕಲಾವಿದ ಡಾ.ಕೆಂಪಣ್ಣ ತಿಳಿಸಿದರು.

ವಿಜಯಪುರ ಪಟ್ಟಣದ ದೇವನಹಳ್ಳಿ ತಾಲ್ಲೂಕು ಕನ್ನಡ ಕಲಾವಿದರ ಸಂಘದ ಆಶ್ರಯದಲ್ಲಿ 104ನೇ ಕನ್ನಡ ದೀಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಮಾತನಾಡುತ್ತಾ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಲು ರಂಗಭೂಮಿಯೇ ಮೂಲ ಕಾರಣ ಎಂದು ತಿಳಿಯ ಪಡಿಸುತ್ತಾ ಮಹಾತ್ಮ ಗಾಂಧೀಜಿಯವರು ಸತ್ಯ ಹರಿಶ್ಚಂದ್ರ ರಾಮಾಯಣ ಮಹಾಭಾರತ ನಾಟಕಗಳನ್ನು ಆಲಿಸಿ ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ದೇಶಕ್ಕಾಗಿ ಸ್ವಾತಂತ್ರ್ಯ ಬರಲು ಅಹಿಂಸೆ ಸತ್ಯ ನಿಷ್ಠೆ ತ್ಯಾಗ ಸತ್ಯಾಗ್ರಹಗಳನ್ನು ನಡೆಸಿ ಹಿಂದೂಸ್ಥಾನಕ್ಕೆ ಶಾಂತಿ ನೆಮ್ಮದಿ ಬರಲು ಗಾಂಧಿಜಿಯರವರೇ ಕಾರಣವೆಂದು ತಿಳಿಸುತ್ತಾ. ರಾಮಾಯಣ ಮಹಾಭಾರತ ಪಾತ್ರದಾರಿಗಳನ್ನು ನಾಟಕ ರೂಪದಲ್ಲಿ ಕಾಣಬಹುದು.

 ಕಾರ್ಯಕ್ರಮದಲ್ಲಿ ಬಿಜ್ಜವಾರ ರಾಮಚಂದ್ರಪ್ಪ ಕರ್ನಾಟಕ ರಾಜ್ಯ ತಿಗಳರ ಸಂಘಕ್ಕೆ ನೂತನ ನಿರ್ದೇಶಕರಾಗಿ ಆಯ್ಕೆಯಾದ ಎನ್ ಕನಕರಾಜು ಜೆ ಆರ್ ಮುನಿವೀರಣ್ಣ ರವರನ್ನು ಸನ್ಮಾನಿಸಿ ಗೌರವಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೋಹನ್ ಬಾಬು ರವರು ಮಾತನಾಡುತ್ತಾ ರಂಗಭೂಮಿಯಲ್ಲಿ 300 ನಾಟಕಗಳಲ್ಲಿ ಭಾಗವಹಿಸಿ ನೀಲಿ ದಾರಾವಾಹಿ ಚಲನಚಿತ್ರಗಳಲ್ಲಿ ಉತ್ತಮ ಪಾತ್ರವನ್ನು ವಹಿಸಿ ನಮ್ಮ ಕುಟುಂಬದಲ್ಲಿ ಒಬ್ಬರನ್ನು ರಂಗಭೂಮಿ ಕಲೆಗೆ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು ‌.

ಕಾರ್ಯಕ್ರಮದಲ್ಲಿ ರಂಗಭೂಮಿ ನಿರ್ದೇಶಕ ಎಂ ವಿ ನಾಯ್ಡು ಮತ್ತು ಸಂಗಡಿಗರು ಭಕ್ತಿ ಗೀತೆ ನಾಡಗೀತೆ ಹಾಡಿದರು.

 ಕಾರ್ಯಕ್ರಮದಲ್ಲಿ ಜೆ ಸಿ ಐ ಅಧ್ಯಕ್ಷ ಮುನಿವೆಂಕಟರಮಣ ಕೆಎಚ್ ಚಂದ್ರಶೇಖರ್ ಸುಬ್ರಮಣಿ ಗೋವಿಂದರಾಜು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.