ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆ.

ವಿಜಯ ದರ್ಪಣ ನ್ಯೂಸ್ 

ವಿಜಯಪುರ ದೇವನಹಳ್ಳಿ ತಾಲ್ಲೂಕು ಜನವರಿ:ನಾಡಿನ ಐತಿಹಾಸಿಕ ವಾಸ್ತುಶಿಲ್ಪ ಪರಂಪರೆಗೆ ಶಿಲ್ಪಿಗಳ ಕೊಡುಗೆ ಅಪಾರವಾದದ್ದು , ಅಂತಹ ಅಪರೂಪದ ಕೊಡುಗೆಯನ್ನು ನಾಡಿಗೆ ನೀಡಿ ತನ್ನ ಕಲಾ ಕೌಶಲ್ಯ ಕೊಡುಗೆಯನ್ನು ನಾಡಿಗೆ ನೀಡಿದ ಅಜರಾಮನಾರದ ಜಕಣಾಚಾರಿ ಎಂದು ಸಂಘದ ಅಧ್ಯಕ್ಷ ಎ. ಸುದರ್ಶನ್ ಬಣ್ಣಿಸಿದರು.

ವಿಜಯಪುರ ಪಟ್ಟಣದ ವಿಜಯವಿಶ್ವಕರ್ಮ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಆವರಣದಲ್ಲಿ ಅಮರಶಿಲ್ಪಿ ಜಕಣಾಚಾರಿ ರವರ ಸಂಸ್ಕರಣ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರಾಚಾರಿ ರವರು ಅಮರಶಿಲ್ಪಿ ಜಕಣಾಚಾರಿ ಜೀವನ ಹಾಗೂ ಶಿಲ್ಪಕಲೆಗೆ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಜಕಣಾಚಾರಿ ತುಮಕೂರು ಜಿಲ್ಲೆಯ ಕ್ರೀಡಾ ಪುರದಲ್ಲಿ ಜನಿಸಿದರು.

ಇವರು ಸೌಂದರ್ಯ ಮತ್ತು ಕಲಾ ಸಂಸ್ಕೃತಿಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.ವೈಯಕ್ತಿಕ ಕಾರಣಗಳಿಂದ ಹೆಂಡತಿ ಮತ್ತು ಊರನ್ನು ಬಿಟ್ಟು ದೂರ ಸರಿದರು. ಇವರು ಲೋಕ ಸಂಚಾರ ಮಾಡುತ್ತಿದ್ದಾಗ ರಾಮಾನುಚಾರ್ಯರ ಮಾರ್ಗದರ್ಶನದಂತೆ ತನ್ನ ವೃತ್ತಿಯಲ್ಲಿ ಏಕಾಗ್ರತೆಯನ್ನು ಸಾಧಿಸಿದ ಹೊಯ್ಸಳ ಅರಸರ ವಿಷ್ಣುವರ್ಧನ ಮತ್ತು ರಾಣಿ ಶಕುಂತಲಾ ದೇವಿಯರವರ ಆಶಯದಂತೆ ಬೇಲೂರು ಚೆನ್ನಕೇಶವ ಸ್ವಾಮಿ ದೇವಾಲಯವನ್ನು ನಿರ್ಮಾಣ ಮಾಡುವ ಹೊಣೆಯನ್ನು ಹೊತ್ತಿದರು. ಅದು ದೇವಾಲಯವಾಗದೆ ಅಪರೂಪದ ಕಲಾಕೃತಿಯಾಗಿ ನಿರ್ಮಿಸಲು ಸೇವೆ ಸಲ್ಲಿಸಿದ್ದರು.

ದೇವಾಲಯದ ಸುತ್ತಲೂ ರಾಮಾಯಣ ಮಹಾಭಾರತ ದೃಶ್ಯಾವಳಿಯನ್ನು ಕೆತ್ತಿದ್ದರು ಇವರ ಮಗ ಡಕಣಾಚಾರಿ ಚನ್ನಕೇಶವ ಸ್ವಾಮಿಯವರ ವಿಗ್ರಹವನ್ನು ಕೆತ್ತುತ್ತಿದ್ದ ಲೋಪವನ್ನು ತೋರಿಸಿದಾಗ ಜಕಣಾಚಾರಿ ತಮ್ಮ ಬೆರಳುಗಳನ್ನು ಕಟ್ಟಿ ಮಾಡಿಕೊಂಡರು. ತಮ್ಮ ಹುಟ್ಟೂರಿಗೆ ಬಂದು ಶ್ರೀ ಚನ್ನಕೇಶವ ದೇವಾಲಯವನ್ನು ಕೆತ್ತನೆ ಮಾಡುತ್ತಿದ್ದಾಗ ಭಗವಂತನ ಕೃಪೆಯಿಂದ ಬೆರಳುಗಳು ಮಾಮೂಲಿನಂತೆ ಆಗಿತ್ತು. ಇಂದು ಕೈದಾಳ ಪ್ರಸಿದ್ಧಿಯಾಗಿದೆ ಎಂದು ಪುರಾಣದಿಂದ ತಿಳಿದು ಬರುತ್ತದೆ‌

ಕರ್ನಾಟಕ ಸರ್ಕಾರವು 1995 ರಿಂದ ಶಿಲ್ಪಿಗಳ ಕಲಾಕೃತಿಗೆ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಕಾರ್ಯಕ್ರಮದಲ್ಲಿ ನಿರ್ದೇಶಕ ವೈ.ಕೆ ಮುರುಳೀಧರ್ ಪ್ರವೀಣ್ ಕುಮಾರ್ ರಾಮಪ್ರಸಾದ್ ಶಿಲ್ಪಿಗಳಾದ ಗಿರೀಶ್ ಮೋಹನ್ ಬ್ರಹ್ಮಚಾರ್ ಮಣಿ ಜನಾರ್ಧನ ಚಾರ್ ಮಹಿಳಾ ಪ್ರತಿನಿಧಿಗಳಾದ ರಾಜೇಶ್ವರಿ ಶ್ವೇತಾ ಉಮಾಮಹೇಶ್ವರಿ ಲೋಚನ ಜಯಮ್ಮ ಕಮಲಮ್ಮ ಹಾಗೂ ಪುರುಷೋತ್ತಮ್ ಗೋಪಾಲಚಾರಿ ರವರು ಉಪಸ್ಥಿತರಿದ್ದರು.