ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನವನ್ನು ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ  ಅರ್ಚಕರು

ವಿಜಯ ದರ್ಪಣ ನ್ಯೂಸ್

ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನವನ್ನು ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ  ಅರ್ಚಕರು

ಚಿಕ್ಕಬಳ್ಳಾಪುರ ಜಿಲ್ಲೆ ಮಾರ್ಚ್ 25, 2024: ಇಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ, ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಶಿವನ ಅನುಗ್ರಹವನ್ನು ಆಹ್ವಾನಿಸಲು, ಶಕ್ತಿಯುತ ಸಪ್ತಋಷಿ ಆವಾಹನವನ್ನು ನಡೆಸಿದರು. ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳಿಂದ ನೂರಾರು ಜನರು, ಸಂಜೆ 6 ಗಂಟೆಗೆ ಪ್ರಾರಂಭವಾಗಿ 8:15 ಕ್ಕೆ ಕೊನೆಗೊಂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆದಿಯೋಗಿ ಬಳಿ ಸೇರಿದ್ದರು.

 

ಹಲವಾರು ಸಹಸ್ರಮಾನಗಳ ಹಿಂದೆ, ಶಿವನು ತನ್ನ ಮೊದಲ ಶಿಷ್ಯರಾದ ಸಪ್ತಋಷಿಗಳಿಗೆ ದೇವಿಯ ಸಮ್ಮುಖದಲ್ಲಿ ಈ ಪ್ರಕ್ರಿಯೆಯನ್ನು ಕಲಿಸಿದನೆಂದು ಹೇಳಲಾಗುತ್ತದೆ. ಸಪ್ತಋಷಿಗಳು ಪ್ರಪಂಚದ ಮೂಲೆ ಮೂಲೆಗಳಿಗೆ ಸಾಗಿ ಯೋಗ ವಿಜ್ಞಾನವನ್ನು ಜನರಿಗೆ ಅರ್ಪಿಸಲು ಪ್ರಯಾಣಿಸುತ್ತಿರುವಾಗ, ಶಿವನ ಉಪಸ್ಥಿತಿಗಾಗಿ ಮತ್ತು ಅವನ ಅನುಗ್ರಹವನ್ನು ಆಹ್ವಾನಿಸುವ ಸಾಧನವಾಗಿ ಇದನ್ನು ಅವರಿಗೆ ಅರ್ಪಿಸಲಾಗಿತ್ತು.

ಸಾವಿರಾರು ವರ್ಷಗಳಿಂದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ಪ್ರಕ್ರಿಯೆಯನ್ನು ಇನ್ನೂ ಅಷ್ಟೇ ಪಾವಿತ್ರ್ಯತೆಯಲ್ಲಿ ಸಂರಕ್ಷಿಸಲಾಗಿದೆ. ಪ್ರತಿ ವರ್ಷ, ಕಾಶಿ ವಿಶ್ವನಾಥ ದೇವಸ್ಥಾನದ ಏಳು ಅರ್ಚಕರು ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನವನ್ನು ನಡೆಸಿಕೊಡುತ್ತಾರೆ. ಇದು ಕಾಶಿ ದೇವಾಲಯದ ಹೊರಗೆ ಈ ಪ್ರಕ್ರಿಯೆಯನ್ನು ನಡೆಸುವ ಏಕೈಕ ನಿದರ್ಶನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಹರ್ಷ – 93799 01191, ಶರತ್ – 98862 64909