ಅವಿಶ್ವಾಸ ನಿರ್ಣಯದಲ್ಲಿ ಗೆದ್ದ ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ

ವಿಜಯ ದರ್ಪಣ ನ್ಯೂಸ್…

ಅವಿಶ್ವಾಸ ನಿರ್ಣಯದಲ್ಲಿ ಗೆದ್ದ ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ

ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮ ಪಂಚಾಯಿಯಲ್ಲಿ ಇದೇ ತಿಂಗಳು 19 ರಂದು ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ನಿರ್ಣಯ ಸಭೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಸಮ್ಮುಖದಲ್ಲಿ ನಡೆಯಿತು. ಬೂದಿಗೆರೆ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮೀ ವಿರುದ್ಧ ಅವಿಶ್ವಾಸಕ್ಕೆ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ 19 ರಂದು ಅವಿಶ್ವಾಸ ನಿರ್ಣಯ ಸಭೆ ನಡೆಯಿತು.

ಅವಿಶ್ವಾಸ ನಿರ್ಣಯ ಸಭೆಯಲ್ಲಿ ಅಧ್ಯಕ್ಷೆ ವರಲಕ್ಷ್ಮೀ ವಿರುದ್ಧ 13 ಕಾಂಗ್ರೆಸ್‌ ಬೆಂಬಲಿತ ಸದಸ್ಯರು, 6 ಜೆಡಿಎಸ್ ಬೆಂಬಲಿತ ಸದಸ್ಯರು ಗೊತ್ತುವಳಿ ಮಂಡನೆ ಮಾಡಿದರು. ಇನ್ನೂ ಉಳಿದ ಒಬ್ಬ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರಿಜ್ವಾನ್‌ ನಜೀ‌ರ್ ಗೈರಾದ ಕಾರಣ ಅವಿಶ್ವಾಸ ನಿರ್ಣಯ ಸಭೆ ವಿಸರ್ಜನೆಗೊಂಡು ಅಧ್ಯಕ್ಷೆ ವರಲಕ್ಷ್ಮೀ ಅಧಿಕಾರದಲ್ಲಿ ಮುಂದುವರಿಯುವಂತೆ ಆಯಿತು. ಅವಿಶ್ವಾಸಕ್ಕೆ ಮೂರನೇ ಎರಡರಷ್ಟು ಸದಸ್ಯ ಬಲ ಬೇಕಾಗಿತ್ತು ಆದರೆ ಮೂರನೇ ಎರಡರಷ್ಟು ಬಲ ಬಾರದ ಕಾರಣ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಅಧ್ಯಕ್ಷೆ ವರಲಕ್ಷ್ಮೀ ಗೆದ್ದರು.

ಬೂದಿಗೆರೆ ಗ್ರಾಪಂ ಮೊದಲ ಅವಧಿಯಲ್ಲಿ ಎಸ್ಸಿ ಮಹಿಳೆ ಮೀಸಲಾತಿಯಲ್ಲಿ ಅಧ್ಯಕ್ಷೆಯಾಗಿ 2.5 ವರ್ಷ ಅಧಿಕಾರದಲ್ಲಿದ್ದರು, ಎರಡನೇ ಅವಧಿಗೆ ಎಸ್ಟಿ ಮಹಿಳೆ ಮೀಸಲಾತಿ ಹಿನ್ನೆಲೆಯಲ್ಲಿ ವರಲಕ್ಷ್ಮೀ ಅವಿರೋಧವಾಗಿ ಆಯ್ಕೆ ಆಗಿದ್ದರು. ವರಲಕ್ಷ್ಮಿ ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್ಟಿ ಮಹಿಳೆಯಾಗಿ ಚುನಾವಣೆಯಲ್ಲಿ ಗೆದ್ದವರು ಒಬ್ಬರೇ ಇದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದರು.

ಅವಿಶ್ವಾಸಕ್ಕೆ ಕಾರಣ: ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದು 20 ವರ್ಷ ಆಗಿತ್ತು. ವಿರೋಧದ ನಡುವೆ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಿದರು. ಈ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತ 13 ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಂಡಿದ್ದರು.