ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ : ಶಾಸಕ ಬಿ.ಎನ್.ರವಿಕುಮಾರ್
ವಿಜಯ ದರ್ಪಣ ನ್ಯೂಸ್…
ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಗೊಂಡ ಮುಖಂಡರು ಹಾಗು ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಭರವಸೆ ನೀಡಿದರು.
ಮೇಲೂರಿನ ಅವರ ಗೃಹ ಕಚೇರಿಯಲ್ಲಿ ಸಾದಲಿ ಗ್ರಾಮದ ಸವಿತಾ ಸಮಾಜದ ಇಪ್ಪತ್ತೂ ಕುಟುಂಬಗಳು ಸೇರಿದಂತೆ ವಿವಿಧ ಪಕ್ಷಗಳ ಅನೇಕ ಮುಖಂಡರು ಹಾಗು ಕಾರ್ಯಕರ್ತರು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನ ಒಪ್ಪಿ ಶಾಸಕ ಬಿ.ಎನ್.ರವಿಕುಮಾರ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಖಂಡ ನರಸಿಂಹಮೂರ್ತಿ ಮಾತನಾಡಿ,ಸಾದಲಿ ಭಾಗವು ಕಳೆದ ಸುಮಾರು ವರ್ಷಗಳಿಂದ ಯಾವುದೇ ರೀತಿಯಾದಂತಹ ಅಭಿವೃದ್ಧಿ ಹೊಂದದೆ ಇರುವುದು ದುರಾದೃಷ್ಟ, ಈ ಹಿಂದೆ ಶಾಸಕರಾಗಿದ್ದವರು ಯಾವುದೇ ರೀತಿಯಾದಂತಹ ಅಭಿವೃದ್ಧಿ ಕೆಲದ ಮಾಡದೇ ನಮ್ಮ ಭಾಗ ತೀರ ಹಿಂದುಳಿದಿತ್ತು, ಈಗಿನ ಶಾಸಕರಾದ ಬಿ.ಎನ್.ರವಿಕುಮಾರ್ ರವರು ನಮ್ಮ ಸಾದಲಿ ಭಾಗಕ್ಕೆ ಹೆಚ್ಚಿನ ಆಧ್ಯತೆ ನೀಡಿ ಗಡಿಮಿಂಚೇನಹಳ್ಳಿ ರಸ್ತೆ, ಸಾದಲಿ- ಪೆರೆಸೆಂದ್ರ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಸರ್ಕಾರದ ಅನುದಾನ ಸಿಗದೇ ಇದ್ದ ಪಕ್ಷದಲ್ಲಿ ವೈಯಕ್ತಿಕವಾಗಿ ಅಭಿವೃದ್ಧಿಪಡಿಸುವ ಭರವಸೆಯನ್ನು ನೀಡಿದ್ದು,ನಾವೆಲ್ಲ ಸ್ವಾಭಿಮಾನದಿಂದ ಬದುಕುವವರಾಗಿದ್ದೇವೆ ನಮ್ಮ ಭಾಗದ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆಯಿಂದ ನಾವು ದೃಢ ಸಂಕಲ್ಪದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಹೇಳಿದರು.
ಸಾದಲಿ ಗ್ರಾಮದ ಬಿ.ಎಸ್.ಶಿವಪ್ಪ, ಬಿ.ಎಸ್.ಮಂಜುನಾಥ್, ಎಸ್.ಎನ್.ರಾಜು, ಎಸ್.ಎಂ.ಮಂಜುನಾಥ್,ಚರಣ್ ಕುಮಾರ್, ಕ್ರಾಸ್ ಮಂಜುನಾಥ್, ನರಸಿಂಹಮೂರ್ತಿ, ಎಸ್.ಆರ್. ಮಂಜುನಾಥ್, ಟೈಲರ್ ವೆಂಕಟೇಶ್,ಪ್ರಸಾದ್, ನಾಗಭೂಷಣ್,ಎಸ್.ಎನ್.ಶಂಕರಪ್ಪ,, ಬಿ.ಎಸ್. ಸುಬ್ರಮಣಿ,, ಎಸ್.ವಿ.ನಾರಾಯಣಸ್ವಾಮಿ,ಎಸ್.ವಿ.ಸುಭ್ರಮಣಿ,ಎಸ್.ವಿ.ಕೃಷ್ಣಪ್ಪ,, ಎಸ್.ವಿ.ಚಂದ್ರಶೇಖರ್, ಬಿ.ಎಸ್.ನಾಗರಾಜ್,
ಎಸ್.ಎಂ.ಸುರೇಶ್,ಎಸ್.ಟಿ.ಸತೀಶ್ ಕುಮಾರ್, ಎಸ್.ಎನ್. ನರಸಿಂಹಮೂರ್ತಿ,ಎಸ್.ಎನ್.ಚಿಕ್ಕನರಸಿಂಹಮೂರ್ತಿ,ಎ.ಎಂ.ನಾಗರಾಜ್, ನರಸಿಂಹರಾಜು, ಕೆ.ಎನ್.ಗೋಪಿನಾಥ್,ಪಾರಿವ್ ಅಹಮದ್ ಸೇರಿದಂತೆ ಮುಂತಾದವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸೇರ್ಪಡೆಯಾದಂತಹ ಎಲ್ಲಾರಿಗೂ ಶಾಸಕರು ಶಲ್ಯ ಹೊದಿಸಿ , ಹಾರ ಹಾಕಿ, ಪಕ್ಷಕ್ಕೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಪಿಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ,ಮುಖಂಡ ತಾದೂರು ರಘು ಮುಂತಾದವರು ಹಾಜರಿದ್ದರು.
