ಅಂಗಡಿ ಮಾಲೀಕನ ವರ್ತನೆಗೆ ನಾಗರೀಕರ ಆಕ್ರೋಶ
ವಿಜಯ ದರ್ಪಣ ನ್ಯೂಸ್….
ಅಂಗಡಿ ಮಾಲೀಕನ ವರ್ತನೆಗೆ ನಾಗರೀಕರ ಆಕ್ರೋಶ
ವಿರಾಜಪೇಟೆ ಮುಖ್ಯರಸ್ತೆಯ ಒಂದು ಬದಿ ವಾಹನಗಳು ನಿಲುಗಡೆಗೊಳಿಸಲು ಅವಕಾಶ ಕಲ್ಪಿಸಿದ ಸ್ಥಳದಲ್ಲಿ, ಅಲ್ಲಿನ ವರ್ತಕನೊಬ್ಬ ತನ್ನ ಅಂಗಡಿಯ ಮುಂಭಾಗದಲ್ಲಿ ಕಬ್ಬಿಣದ ಗೇಟ್ ಒಂದನ್ನು ಅಳವಡಿಸಿದ್ದಾನೆ.
ಲೋಕೋಪಯೋಗಿ ಸೇರಿದ ರಸ್ತೆಗೆ ಈ ರೀತಿಯ ಅಚಾತುರ್ಯ ತೋರಿದರು ಕೂಡ ಸಂಬಂಧಿಸಿದ ಇಲಾಖೆಯವರು, ಪುರಸಭೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ವಿರಾಜಪೇಟೆ ಆಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಅಲ್ಲಿನ ಕೆಲವು ನಾಗರಿಕರು ದೂರಿಕೊಂಡಿದ್ದಾರೆ.
ಹಣ ನೀಡಿ ವಾಹನ ನಿಲುಗಡೆಗೊಳಿಸಲು ಪುರಸಭೆ ಈಗಾಗಲೇ ಅವಕಾಶ ಕಲ್ಪಿಸಿ, ಕಾನೂನಾತ್ಮಕವಾಗಿ ಸಾರ್ವಜನಿಕವಾಗಿ ಹಣ ಸಂಗ್ರಹಿಸಲು ಗುತ್ತಿಗೆಯನ್ನು ಒಬ್ಬರಿಗೆ ನೀಡಲಾಗಿದ್ದರು ಕೂಡ, ಈ ಅಂಗಡಿ ಮಾಲೀಕ ತನ್ನ ಮುಂಭಾಗದ ಜಾಗ ತನಗೇ ಸೇರಿದ್ದು ಎಂಬಂತೆ ಗೇಟ್ ಅಳವಡಿಸಿಕೊಂಡಿದ್ದಾನೆ. ಪ್ರತಿಯೊಬ್ಬ ಅಂಗಡಿಯವರು ಈತನಂತೆ ಬೇಲಿ ಅಳವಡಿಸಿಕೊಂಡರು ಕೂಡ ಪುರಸಭಾ ಸದಸ್ಯರೆಲ್ಲ ಕಂಡು ಕಾಣದಂತೆ ಇದ್ದರೆ ಆಶ್ಚರ್ಯಪಡಬೇಕಾಗಿಲ್ಲ ಎನ್ನುತ್ತಾರೆ ಇಲ್ಲಿ ನಾ ಸಾರ್ವಜನಿಕರು.