ಕಡೆ ಆಷಾಢ ಶುಕ್ರವಾರ ಭಕ್ತರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ
ವಿಜಯ ದರ್ಪಣ ನ್ಯೂಸ್….
ಕಡೆ ಆಷಾಢ ಶುಕ್ರವಾರ ಭಕ್ತರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ
ಮೈಸೂರು ತಾಂಡವಪುರ ಜುಲೈ 18: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಗ್ರಾಮ ದೇವತೆ ಮಾರಮ್ಮ ಮಲ್ಲಮ್ಮ ಚಿಕ್ಕಮ್ಮ ನಾರಾಯಣಸ್ವಾಮಿ ಹಾಗೂ ತೊಟ್ಟಿತಾಳಮ್ಮನವರ ದೇವಾಲಯದಲ್ಲಿ ಕಡೆ ಆಷಾಢ ಶುಕ್ರವಾರ ಪ್ರಯುಕ್ತ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಇದೆ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿ ಎಂ ರಾಮುರವರ ನೇತೃತ್ವದಲ್ಲಿ ನಂಜನಗೂಡು ಮೈಸೂರು ಊಟಿ ರಸ್ತೆ ಗ್ರಾಮದ ಇಟ್ಟಿಗೆ ಕಂಪನಿ ಆವರಣದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೀಡುವ ಮೂಲಕ ಕಡೆ ಆಶಾಡ ಶುಕ್ರವಾರದ ಪ್ರಯುಕ್ತ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ ಮಹದೇವ ಗ್ರಾಮದ ಪಿ ಎಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಬಿ ಎಂ ನಾಗರಾಜು ದಣಿ ಎಂ ಹುಚ್ಚೇಗೌಡ ಟಿ ಚಂದ್ರು ಕಾಂಗ್ರೆಸ್ ಯುವ ಮುಖಂಡ ಬಿಆರ್ ರಾಕೇಶ್ ಗ್ರಾಮ ಪಂಚಾಯತ್ ಸದಸ್ಯ ಪ್ರಭುಸ್ವಾಮಿ ಮುಖಂಡರಾದ ಬಿಬಿ ಕುಮಾರ್ ಪಚ್ಚೇಗೌಡ ಟಿಪಿ ರವಿ ಪುಟ್ಟರಾಜು ಕಾರ್ಮಿಕ ಮುಖಂಡ ನಾರಾಯಣ ರೇವಣ್ಣ ರವಿ ಶ್ರೀಕಂಠ ಪಚ್ಚಯ್ಯ ಸುರೇಶ್ ಕುಮಾರ ಸೇರಿದಂತೆ ಇನ್ನು ಅನೇಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು