ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ…..
ವಿಜಯ ದರ್ಪಣ ನ್ಯೂಸ್ ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ….. ದೇವರಿಗಾಗಿಯೋ, ಮನುಷ್ಯರಿಗಾಗಿಯೋ, ಧರ್ಮಕ್ಕಾಗಿಯೋ, ಪ್ರದರ್ಶನಕ್ಕಾಗಿಯೋ, ರಾಜಕೀಯಕ್ಕಾಗಿಯೋ, ಶಿಸ್ತಿಗಾಗಿಯೋ, ಭಕ್ತಿಗಾಗಿಯೋ, ಸೌಜನ್ಯಕ್ಕಾಗಿಯೋ, ಸಂಪ್ರದಾಯಕ್ಕಾಗಿಯೋ….. ಇದು, ನಾಗರಿಕತೆಯೇ, ಮೌಡ್ಯವೇ, ಸಂಸ್ಕೃತಿಯೇ, ವೈಚಾರಿಕತೆಯೇ, ಆಚರಣೆಯೇ, ಆಶಯವೇ, ಅನವಶ್ಯಕ ಒತ್ತಡವೇ,…. ಇದನ್ನು ಒಪ್ಪಿಕೊಳ್ಳಬೇಕೆ, ತಿರಸ್ಕರಿಸಬೇಕೆ, ನಿರ್ಲಕ್ಷಿಸಬೇಕೆ, ಪ್ರತಿಭಟಿಸಬೇಕೆ,… ಚರ್ಚೆ ಮಾಡುವುದಾದರೆ ಎಲ್ಲವನ್ನೂ ಸಮರ್ಥಿಸಿಕೊಳ್ಳಬಹುದು ಅಥವಾ ವಿರೋಧಿಸಬಹುದು ಅಥವಾ ವ್ಯಂಗ್ಯ ಮಾಡಬಹುದು. ಆದರೆ ವಾಸ್ತವ ಏನಿರಬಹುದು….. ಪ್ರಕೃತಿಯ ಮೂಲದಿಂದ ಯೋಚಿಸಿದಾಗ….. ಮೂಲತಃ ಮನುಷ್ಯ ಬೆತ್ತಲೆ ಜೀವಿ ಎಲ್ಲಾ ಪ್ರಾಣಿ ಪಕ್ಷಿ ಕೀಟಗಳ ರೀತಿಯಲ್ಲಿ. ಆದರೆ…