*ಯಾ ಅಲ್ಲಾ ಇಲಾ ಇಲಾ ಇಲ್ಲುಲ್ಲಾ…* *ಬಿಜಾಪುರದ ಬೆಲ್ಲ*
ವಿಜಯ ದರ್ಪಣ ನ್ಯೂಸ್ *ಯಾ ಅಲ್ಲಾ ಇಲಾ ಇಲಾ ಇಲ್ಲುಲ್ಲಾ…* *ಬಿಜಾಪುರದ ಬೆಲ್ಲ* ಬಿಳಿ ಜುಬ್ಬಾ ಬಿಳಿ ಪೈಜಾಮ ಬಲಗೈಯಲ್ಲಿ ನವಿಲಿನ ಪುಕ್ಕಗಳ ಪೊರಕೆ, ಎಡಗೈಯಲ್ಲಿ ಹೊಗೆಯಾಡುತ್ತಿರುವ ಧೂಪದ ಬಟ್ಟಲು ಹಿಡಿದುಕೊಂಡು ಬಂದು ಅಲ್ಲಾನ ಕಲ್ಮಾ ಹೇಳಿಕೊಂಡು ನಿಂತರೆ ಪ್ರತಿ ಅಂಗಡಿಯವರೂ ಆತನಿಗೆ ಐದು, ಹತ್ತು, ಐವತ್ತು ಅಥವಾ ತಮ್ಮ ಶಕ್ತ್ಯಾನುಸಾರ ಕೊಟ್ಟೆ ಮುಂದೆ ಸಾಗಿಸುತ್ತಾರೆ. ಕೊಡದಿದ್ದರೆ ಆತ ಬಿಡಬೇಕಲ್ಲಾ ತನ್ನಲ್ಲಿರುವ ನವಿಲಿನ ಪುಕ್ಕಗಳ ಪೊರಕೆಯಿಂದ ಇಡೀ ಅಂಗಡಿಗೆ ಹೊಗೆ ಹಾಕಿ ಪೊರಕೆಯಿಂದ ಅಂಗಡಿಯವನ ತಲೆಗೆ ಮೊಟಕುತ್ತಾನೆ….