ತಿರುಪತಿ – ತಿರುಮಲ ವೆಂಕಟೇಶ್ವರ ಸ್ವಾಮಿಯ ಪ್ರಾಣಿ ಕೊಬ್ಬಿನ ಲಡ್ಡು ಅಥವಾ ಲಡ್ಡು ಒಳಗಿನ ಕೊಬ್ಬು…..
ವಿಜಯ ದರ್ಪಣ ನ್ಯೂಸ್… ತಿರುಪತಿ – ತಿರುಮಲ ವೆಂಕಟೇಶ್ವರ ಸ್ವಾಮಿಯ ಪ್ರಾಣಿ ಕೊಬ್ಬಿನ ಲಡ್ಡು ಅಥವಾ ಲಡ್ಡು ಒಳಗಿನ ಕೊಬ್ಬು….. ಈ ರೀತಿಯ ಒಂದು ಭಾವನಾತ್ಮಕ, ವಿವಾದಾತ್ಮಕ, ದೇಶದಾದ್ಯಂತ ಸುದ್ದಿ ಮಾಡುತ್ತಿರುವ ವಿಷಯವನ್ನು ಹೇಗೆ ಗ್ರಹಿಸಬೇಕು ಎನ್ನುವ ಸವಾಲು ಸಾಮಾನ್ಯ ವ್ಯಕ್ತಿಗಳಾದ ನಮ್ಮೆಲ್ಲರನ್ನು ಕಾಡುತ್ತಿದೆ……. ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಪೈಪೋಟಿಯಲ್ಲಿ, ರಾಜಕಾರಣಿಗಳ ದ್ವೇಷಮಯ ಹೇಳಿಕೆಗಳಲ್ಲಿ, ಧಾರ್ಮಿಕ ಮುಖಂಡರ ಭಕ್ತಿ ಪೂರ್ವಕ ಹೇಳಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳ ವೈಯಕ್ತಿಕ ಅಭಿಪ್ರಾಯಗಳಲ್ಲಿ, ಸಾಮಾನ್ಯ ಜನರ ಅನಿಸಿಕೆ ರೂಪುಗೊಳ್ಳುವ ಮುನ್ನ ಸಮಗ್ರ ಚಿಂತನೆ…
