ದೊಡ್ಡಬಳ್ಳಾಪುರ:ರಾಗಿ ಖರೀದಿ ಕೇಂದ್ರ ಸ್ಥಳಾಂತರ
ವಿಜಯ ದರ್ಪಣ ನ್ಯೂಸ್…. ದೊಡ್ಡಬಳ್ಳಾಪುರ:ರಾಗಿ ಖರೀದಿ ಕೇಂದ್ರ ಸ್ಥಳಾಂತರ ಬೆಂ.ಗ್ರಾ.ಜಿಲ್ಲೆ, ಮಾ.10: 2024-25ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ ನೋಂದಣಿಯಾದ ರೈತರಿಂದ ರಾಗಿಯನ್ನು ಖರೀದಿಸಲು ರಾಗಿ ಖರೀದಿ ಕೇಂದ್ರವನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮು, ಸರ್ಕಾರಿ ಆಸ್ಪತ್ರೆ ಹಿಂಭಾಗ, ಚಿಕ್ಕಬಳ್ಳಾಪುರ ರಸ್ತೆ, ದೊಡ್ಡಬಳ್ಳಾಪುರ ತಾಲ್ಲೂಕು ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರದ ನೊಂದಾಯಿತ ರೈತರು ಸ್ಥಳಾಂತರಿಸಲಾದ ರಾಗಿ ಖರೀದಿ ಕೇಂದ್ರದಲ್ಲಿ ರಾಗಿಯನ್ನು ತಂದು ಮಾರಾಟ…
