ಬಾಕಿ ಉಳಿದ ಯೋಜನೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು : ಜಿಲ್ಲಾಧಿಕಾರಿ ಜಿ. ಪ್ರಭು 

ವಿಜಯ ದರ್ಪಣ ನ್ಯೂಸ್….. ಬಾಕಿ ಉಳಿದ ಯೋಜನೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು : ಜಿಲ್ಲಾಧಿಕಾರಿ ಜಿ. ಪ್ರಭು  ಶಿಡ್ಲಘಟ್ಟ – ಪ್ರತಿ ತಾಲೂಕಿಗೆ ವಾರಕ್ಕೆ ಕನಿಷ್ಠ ಎರಡು ರಿಂದ ಮೂರು ದಿನ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು ದೀರ್ಘಕಾಲದಿಂದ ಬಾಕಿ ಉಳಿದ ಯೋಜನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅವರು ತಿಳಿಸಿದರು. ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾಗು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. … Read more

ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಚುನಾವಣೆ: ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಿ ಪ್ರಕಾಶ್ ಆಯ್ಕೆ

ವಿಜಯ ದರ್ಪಣ ನ್ಯೂಸ್…. ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಚುನಾವಣೆ: ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಿ ಪ್ರಕಾಶ್ ಆಯ್ಕೆ ತಾಂಡವಪುರ ಮಾ.26: ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಚುನಾವಣೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಪ್ರಕಾಶ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ . ಖಜಾಂಚಿಯಾಗಿ ಕೆ.ಜಿ.ಮಹದೇವನಾಯಕ ಅವರು ಆಯ್ಕೆಗೊಂಡರು. ಮೈಸೂರು … Read more

ಸಂಘದ ಅಧ್ಯಕ್ಷರನ್ನು ಬಿಟ್ಟು ಉದ್ಘಾಟನೆ ಮಾಡಿ ತೆರಳಿದ ಸಚಿವ ಕೆ ಹೆಚ್ ಮುನಿಯಪ್ಪ 

ವಿಜಯ ದರ್ಪಣ ನ್ಯೂಸ್….. ಸಂಘದ ಅಧ್ಯಕ್ಷರನ್ನು ಬಿಟ್ಟು ಉದ್ಘಾಟನೆ ಮಾಡಿ ತೆರಳಿದ ಸಚಿವ ಕೆ ಹೆಚ್ ಮುನಿಯಪ್ಪ  ದೇವನಹಳ್ಳಿ : ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಎರಡನೇ ಅಂತಸ್ತಿನ ಕಟ್ಟಡ ಉದ್ಘಾಟನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸರಿಯಾದ ಸಮಯಕ್ಕೆ ಬಂದು ಉದ್ಘಾಟಿಸಿದ್ದಾರೆ, ಆದರೆ ತರಾತುರಿಯಲ್ಲಿ ಸಂಘದ ಅಧ್ಯಕ್ಷರನ್ನು ಬಿಟ್ಟು ಉದ್ಘಾಟನೆ ಮಾಡಿ ತೆರಳಿದ್ದಾರೆ. ಅಧಿವೇಶನವಿರುವ ಕಾರಣ ಬೇಗ ಆಗಮಿಸಿ ಉದ್ಘಾಟಿಸಿ ಹೊರಟಿದ್ದಾರೆ, ಸ್ಥಳೀಯ … Read more

ಶ್ರೀರಾಮನವಮಿ ಮಹೋತ್ಸವಕ್ಕೆ ರಾಜಾಜಿನಗರದಲ್ಲಿ ಭವ್ಯ ಚಾಲನೆ : 70ನೇ ಶ್ರೀರಾಮೋತ್ಸವಕ್ಕೆ ಅದ್ದೂರಿ ಆರಂಭ

ವಿಜಯ ದರ್ಪಣ ನ್ಯೂಸ್…. ಶ್ರೀರಾಮನವಮಿ ಮಹೋತ್ಸವಕ್ಕೆ ರಾಜಾಜಿನಗರದಲ್ಲಿ ಭವ್ಯ ಚಾಲನೆ :70ನೇ ಶ್ರೀರಾಮೋತ್ಸವಕ್ಕೆ ಅದ್ದೂರಿ ಆರಂಭ 11 ದಿನಗಳ ವೈಭವೋತ್ಸವ – ಬ್ರಹ್ಮರಥೋತ್ಸವ, ಸೀತಾರಾಮ ಕಲ್ಯಾಣ, ಪಟ್ಟಾಭಿಷೇಕ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ರಾಜಾಜಿನಗರ: ಶ್ರೀರಾಮ ಸೇವಾ ಮಂಡಳಿ ವತಿಯಿಂದ ರಾಜಾಜಿನಗರದ ಶ್ರೀರಾಮಮಂದಿರದಲ್ಲಿ 70ನೇ ವರ್ಷದ ಶ್ರೀರಾಮೋತ್ಸವವು ಮಾರ್ಚ್ 26ರಿಂದ 11 ದಿನಗಳ ಕಾಲ ಅದ್ದೂರಿಯಾಗಿ ಆರಂಭಗೊಂಡಿದೆ. ಆಗಮ ಶಾಸ್ತ್ರಾನುಸಾರ ಪಂಡಿತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್. ಶ್ರೀಧರ್ ಅವರು ಶ್ರೀರಾಮೋತ್ಸವಕ್ಕೆ … Read more

ಒಳಚರಂಡಿ ಉಪಕರ ಆದೇಶ ಹಿಂಪಡೆಯಿರಿ

ವಿಜಯ ದರ್ಪಣ ನ್ಯೂಸ್…. ಒಳಚರಂಡಿ ಉಪಕರ (ಸ್ಯಾನಿಟರಿ ಸೆಸ್ )ಆದೇಶ ಹಿಂಪಡೆಯಿರಿ: ಎನ್. ಆರ್. ರಮೇಶ್  ಬೆಂಗಳೂರು: ಪ್ರತಿ 3 ತಿಂಗಳಿಗೊಮ್ಮೆ ಒಳಚರಂಡಿ ಉಪಕರವನ್ನು (ಸ್ಯಾನಿಟರಿ ಸೆಸ್) ಶೇ.3 ಹೆಚ್ಚಿಸುವ ಬೆಂಗಳೂರು ನೀರು ? ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್  ಆಗ್ರಹಿಸಿದ್ದಾರೆ. ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು 2024 ಡಿಸೆಂಬರ್‌ನಲ್ಲಿ ಜಲಮಂಡಳಿಯು ಕುಡಿಯುವ ನೀರಿನ ದರವನ್ನು ಏರಿಕೆ ಮಾಡಿದ್ದಲ್ಲದೆ, ಒಳಚರಂಡಿ ಉಪಕರವನ್ನು … Read more

ಭಕ್ತರ ಸಮ್ಮುಖದಲ್ಲಿ ನಡೆದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ

ವಿಜಯ ದರ್ಪಣ ನ್ಯೂಸ್…. ಭಕ್ತರ ಸಮ್ಮುಖದಲ್ಲಿ ನಡೆದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ ಕುಣಿಗಲ್: ತಾಲೂಕಿನ ಪ್ರಸಿದ್ದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ಬುಧವಾರ ಸಹಸ್ರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಮಹಾರಥೋತ್ಸವ ಅಂಗವಾಗಿ ಸಿದ್ದಲಿಂಗೇಶ್ವರಸ್ವಾಮಿ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ ಹಾಗೂ ರಥಕ್ಕೆ ಹಣ್ಣಿನ ಅಲಂಕಾರ ಮಾಡಲಾಗಿತ್ತು. ಅಭಿಜಿತ್ ಮುಹೂರ್ತದಲ್ಲಿ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಎಡೆಯೂರು ಬಾಳೆಹೊನ್ನೂರು ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ … Read more

ಕಾನೂನು ಅರಿವು ಮಹಿಳೆಯರಿಗೆ ಅತ್ಯವಶ್ಯ: ರಾಧಾಮುರುಳಿದರ್

ವಿಜಯ ದರ್ಪಣ ನ್ಯೂಸ್…. ಕಾನೂನು ಅರಿವು ಮಹಿಳೆಯರಿಗೆ ಅತ್ಯವಶ್ಯ: ರಾಧಾಮುರುಳಿದರ್ ದೊಡ್ಡಬಳ್ಳಾಪುರ:ಕಾನೂನಿನ ಅರಿವು ಮಹಿಳೆಯರಿಗೆ ಇದ್ದರೆ ತಮಗಾದ ಅನ್ಯಾಯವನ್ನು ಎದುರಿಸಿ, ನ್ಯಾಯ ಪಡೆಯುವ ಅವಕಾಶ ಮಹಿಳೆಯರಿಗೆ ಇರುತ್ತದೆ ಎಂದು ವಕೀಲರಾದ ರಾಧಾ ಮುರುಳಿದರ್ ಹೇಳಿದರು. ನಗರದ ಕಾಶಿ ವಿಶ್ವನಾಥ ದೇವಾಲಯದ ಸಭಾ ಭವನದಲ್ಲಿ ಕಾಶಿ ವಿಶಾಲಾಕ್ಷಿ ವಿಪ್ರ ವನಿತಾ ವೇದಿಕೆಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾನೂನು ವೃತ್ತಿಯಲ್ಲಿ ಮಹಿಳೆಯರು ಅಷ್ಟೊಂದು ತೊಡಿಸಿಕೊಳ್ಳದಿದ್ದರೂ, ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕಾನೂನು ತಿಳಿದ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು … Read more

ಐ ಪಿ ಎಲ್…… ಐ ಪಿ ಎಲ್ ಹಬ್ಬವೋ – ತಿಥಿಯೋ – ಶಾಪವೋ……

ವಿಜಯ ದರ್ಪಣ ನ್ಯೂಸ್…… ಐ ಪಿ ಎಲ್…… ಐ ಪಿ ಎಲ್ ಹಬ್ಬವೋ – ತಿಥಿಯೋ – ಶಾಪವೋ…… ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಇದೇ ಮಾರ್ಚ್ 28 ರಿಂದ ಪ್ರಾರಂಭ…… ಕ್ರಿಕೆಟ್ ಆಟಗಾರರು – ಫ್ರಾಂಚೈಸಿಗಳು – ಕ್ಲಬ್, ಬಾರ್ ಗಳು – ಜಾಹೀರಾತುದಾರರು – ಅದರ ಪ್ರಚಾರ ರಾಯಭಾರಿಗಳು – ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು – ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ….. ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, … Read more

ಭಕ್ತಾದಿಗಳು ನಿಜವಾದ ಭಾಗವತರು ಟಿಎಲ್ ಆನಂದಸ್ವಾಮಿ

ವಿಜಯ ದರ್ಪಣ ನ್ಯೂಸ್…. ಭಕ್ತಾದಿಗಳು ನಿಜವಾದ ಭಾಗವತರು ಟಿಎಲ್ ಆನಂದಸ್ವಾಮಿ ವಿಜಯಪುರ ದೇವನಹಳ್ಳಿ ತಾಲ್ಲೂಕು : ಶ್ರೀಮದ್ ಭಗವತ್ ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ತನ್ನ ತಂದೆ ಅಸುರ, ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ. ಅವುಗಳೆಂದರೆ ಶ್ರವಣ, ಕೀರ್ತನ, ಸ್ಮರಣೆ, ಪಾದ-ಸೇವೆ, ಅರ್ಚನೆ, ವಂದನೆ, ದಾಸ್ಯ, ಸಾಖ್ಯ ಮತ್ತು ಆತ್ಮ-ನಿವೇದನೆ. ಎಂದು ತಿಳಿಯಪಡಿಸುತ್ತಾ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳು ಭಾಗವತರು ಎಂದು ಟಿಎಲ್ಆನಂದ ಸ್ವಾಮಿಗಳು ಶ್ಲಾಘನೀಯ ಎಂದರು. ವಿಜಯಪುರ ಪಟ್ಟಣದಲ್ಲಿರುವ ಪುರಾಣ … Read more

ರಾಮೋಹಳ್ಳಿಯಲ್ಲಿ ಸಡಗರ ಸಂಭ್ರಮದ ಇತಿಹಾಸ ಪ್ರಸಿದ್ಧ ರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ವಿಜಯ ದರ್ಪಣ ನ್ಯೂಸ್…..  ರಾಮೋಹಳ್ಳಿಯಲ್ಲಿ ಸಡಗರ ಸಂಭ್ರಮದ ಇತಿಹಾಸ ಪ್ರಸಿದ್ಧ ರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ ಕೆಂಗೇರಿ : ಬೆಂಗಳೂರು ದಕ್ಷಿಣ ತಾಲ್ಲೂಕು ರಾಮೋಹಳ್ಳಿಯಲ್ಲಿ ಇತಿಹಾಸ ಪ್ರಸಿದ್ದ ರಾಮಚಂದ್ರಸ್ವಾಮಿ ದೇವರ ಬ್ರಹ್ಮ ರಥೋತ್ಸವ ಹಾಗೂ ಜಾನಪದ ಜಾತ್ರೆ ಸಡಗರ, ಸಂಭ್ರಮದಿಂದ ಅದ್ಧೂರಿಯಾಗಿ ನೆರವೇರಿತು. ಬೆಳಗ್ಗೆ 5:00 ಗೆ ಪುಣ್ಯಾಹದಿಂದ ಪ್ರಾರಂಭವಾದ ಪೂಜೆ,ಗಣಪತಿ ಪೂಜೆ ಶ್ರೀ ರಾಮನ ಪೂಜೆ ಆಂಜನೇಯ ಸ್ವಾಮಿ ಪೂಜೆ, ಗಣಪತಿ ಶ್ರೀ ರಾಮ ಹಾಗೂ ಆಂಜನೇಯ ಸ್ವಾಮಿ ಹೋಮ, ಫಲಪಂಚಾಮೃತ ಅಭಿಷೇಕದ ನಂತರ ವಿವಿಧ ಹೂಗಳಿಂದ … Read more