ಚಿಕ್ಕತೇಕಹಳ್ಳಿಯಲ್ಲಿ ವಾಂತಿ-ಭೇದಿಯಾಗಿ ಅಸ್ವಸ್ಥಗೊಂಡಿದ್ದ 17 ಮಂದಿ ಚೇತರಿಕೆ 

ವಿಜಯ ದರ್ಪಣ ನ್ಯೂಸ್…. ಚಿಕ್ಕತೇಕಹಳ್ಳಿಯಲ್ಲಿ ವಾಂತಿ-ಭೇದಿಯಾಗಿ ಅಸ್ವಸ್ಥಗೊಂಡಿದ್ದ 17 ಮಂದಿ ಚೇತರಿಕೆ  ಅನಧಿಕೃತ ಘಟಕದಿಂದ ಪೂರೈಸುತ್ತಿದ್ದ ನೀರಿನಲ್ಲಿ ಇ-ಕೋಲಿ(E-CILI) ವೈರಸ್ ಪತ್ತೆ ,ನೀರನ್ನು ಕುದಿಸಿ ಕುಡಿಯುವಂತೆ ಗ್ರಾಮಸ್ಥರಿಗೆ ಆರೋಗ್ಯ ಇಲಾಖೆ ಸಲಹೆ ! ಶಿಡ್ಲಘಟ್ಟ : ತಾಲ್ಲೂಕಿನ ಚಿಕ್ಕತೇಕಹಳ್ಳಿಯಲ್ಲಿ ವಾಂತಿ-ಭೇದಿಯಾಗಿ ಅಸ್ವಸ್ಥಗೊಂಡಿದ್ದ 17 ಮಂದಿ ಚೇತರಿಸಿಕೊಂಡಿದ್ದು ಗ್ರಾಮದಲ್ಲಿ ಹೊಸ ಪ್ರಕರ ಯಾವುದು ಪತ್ತೆಯಾಗಿಲ್ಲ ತಿಳಿದುಬಂದಿದೆ. ಗ್ರಾಮದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಘಟಕವು ಪೂರೈಸುವ ಕುಡಿಯುವ ನೀರಿನಲ್ಲಿ ಇ-ಕೋಲಿ (E-COLI) ಬ್ಯಾಕ್ಟಿರಿಯಾ ಕಂಡು ಬಂದಿದ್ದು ಆ ನೀರು ಕುಡಿದ ಜನರು … Read more

ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ  ಸಮುದಾಯ ಭವನಗಳ ಮುಂದುವರಿದ ನಿರ್ಮಾಣ ಕಾಮಗಾರಿಗಳನ್ನು  ಪರಿಶೀಲಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

ವಿಜಯ ದರ್ಪಣ ನ್ಯೂಸ್….. ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ  ಸಮುದಾಯ ಭವನಗಳ ಮುಂದುವರಿದ ನಿರ್ಮಾಣ ಕಾಮಗಾರಿಗಳನ್ನು  ಪರಿಶೀಲಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ ತಾಂಡವಪುರ ಜುಲೈ 6ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀ ಬಸವ ಭವನ, ಶ್ರೀ ಈಡಿಗ ಸಮುದಾಯ ಭವನ, ಶ್ರೀ ಮಡಿವಾಳ ಸಮುದಾಯ ಭವನ, ಶ್ರೀ ಒಕ್ಕಲಿಗ ಸಮುದಾಯ ಭವನ, ಸವಿತಾ ಸಮುದಾಯ ಭವನ, ಶ್ರೀ ಕುಂಬಾರ ಸಮುದಾಯ ಭವನ, ಬಾಬು ಜಗಜೀವನ್ ರಾಮ್ ಸಮುದಾಯ ಭವನ ಹಾಗೂ ಭೋವಿ ಸಮುದಾಯ ಭವನಗಳ ಮುಂದುವರಿದ … Read more

ಜೆಡಿಎಸ್‌ ಪಕ್ಷವನ್ನು ಬಲಪಡಿಸಲು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್‌ ಕರೆ

ವಿಜಯ ದರ್ಪಣ ನ್ಯೂಸ್….. ಜೆಡಿಎಸ್‌ ಪಕ್ಷವನ್ನು ಬಲಪಡಿಸಲು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್‌ ಕರೆ ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಬಲಿಷ್ಠವಾಗಿದೆ. ಮುಂದಿನ 2028ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೆ ನಮ್ಮಗುರಿಯಾಗಬೇಕು. ಚುನಾವಣೆಯಲ್ಲಿ ಪಕ್ಷಯಾರಿಗೆ ಟಿಕೆಟ್ ಕೊಡಲಿ ಅವರ ಪರವಾಗಿ ಕೆಲಸ ಮಾಡೋಣ. ಇಂದಿನಿಂದಲೇ ತಮ್ಮತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡಬೇಕೆಂದು ಎಂದುಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್‌ಕರೆ ನೀಡಿದರು. ತಾಲೂಕಿನ ವಕ್ಕಲೇರಿಯಲ್ಲಿ ಭಾನುವಾರ ಜೆಡಿಎಸ್ … Read more

ವಚನ ಸಾಹಿತ್ಯಕ್ಕೆಫ.ಗು.ಹಳಿಕಟ್ಟೆ ಕೊಡುಗೆ ಅನನ್ಯ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

ವಿಜಯ ದರ್ಪಣ ನ್ಯೂಸ್…. ವಚನ ಸಾಹಿತ್ಯಕ್ಕೆ ಫ.ಗು.ಹಳಿಕಟ್ಟೆ ಕೊಡುಗೆ ಅನನ್ಯ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ದಾವಣಗೆರೆ: ಇಂದು ನಮ್ಮ ಇಡೀ ವಚನ ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಕೈಗೆಟುಕುವಂತೆ ಮಾಡುವಲ್ಲಿ ಡಾ.ಫ. ಗು.ಹಳಿಕಟ್ಟಿಯವರ ಪಾತ್ರ ಹಿರಿದಾದುದು. ಅವರು ಇಲ್ಲದೇ ಹೋಗಿದ್ದರೆ ಇಂತಹ ಶ್ರೇಷ್ಠ ವಚನ ಸಂಪತ್ತು ನಮಗೆ ಸಿಗುತ್ತಿರಲಿಲ್ಲ” ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಾ.ಫ.ಗು.ಹಳಿಕಟ್ಟಿ- ಯವರ ಜನ್ಮದಿನ-ವಚನ … Read more

ದೊಡ್ಡ ನಲ್ಲೂರು ಅಭಯ ಶನೈಶ್ಚರ ಸ್ವಾಮಿಗೆ ವಿಶೇಷ ಪೂಜೆ

ವಿಜಯ ದರ್ಪಣ ನ್ಯೂಸ್… ದೊಡ್ಡ ನಲ್ಲೂರು ಅಭಯ ಶನೈಶ್ಚರ ಸ್ವಾಮಿಗೆ ವಿಶೇಷ ಪೂಜೆ ತಾವರೆಕೆರೆ: ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರು ಗ್ರಾಮದ ಶ್ರೀ ಕ್ಷೇತ್ರ ಸುಪ್ರಸಿದ್ದ ಅಭಯ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಆಷಾಢ ಮಾಸದ ಮೊದಲ ಶನಿವಾರದ ಅಂಗವಾಗಿ ಶನಿ ಮಹಾತ್ಮ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ-ಶ್ರದ್ಧೆಯಿಂದ ನೆರವೇರಿದವು. ಆಷಾಢಮಾಸದ ಮೊದಲ ಶನಿವಾರದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಶನಿ ಮಹಾತ್ಮ ಸ್ವಾಮಿಗೆ … Read more

ಪತ್ರಕರ್ತರು ಯಾವುದೇ ಪ್ರಭಾವಕ್ಕೆ ಒಳಗಾಗದೆ ವೃತ್ತಿ ಧರ್ಮ ಪಾಲಿಸಬೇಕು: ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ  ಪಿ. ಮೂರ್ತಿ 

ವಿಜಯ ದರ್ಪಣ ನ್ಯೂಸ್… ಕುಂದಾಪುರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ನೇತೃತ್ವದಲ್ಲಿ ಪತ್ರಿಕಾ ದಿನಾಚರಣೆ ಪತ್ರಕರ್ತರು ಯಾವುದೇ ಪ್ರಭಾವಕ್ಕೆ ಒಳಗಾಗದೆ ವೃತ್ತಿ ಧರ್ಮ ಪಾಲಿಸಬೇಕು : ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ. ಮೂರ್ತಿ  ಕುಂದಾಪುರ: ಪತ್ರಕರ್ತರು ಯಾವುದೇ ರೀತಿಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿ ಧರ್ಮ ಪಾಲಿಸಬೇಕು ಎಂದು ಅಂಬೇಡ್ಕರ್ ಸೇನೆ (ರಿ) ರಾಜ್ಯಾಧ್ಯಕ್ಷ ಪಿ. ಮೂರ್ತಿ ಅಭಿಪ್ರಾಯಪಟ್ಟರು. ಕುಂದಾಪುರದ ತಾಸಿಯ ಪೆಸ್ಟಿಜ್ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ … Read more

ಚಲಿಸುವ ಜಂಗಮನಾಗಿ………..

ವಿಜಯ ದರ್ಪಣ ನ್ಯೂಸ್…. ಚಲಿಸುವ ಜಂಗಮನಾಗಿ……. ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು……. ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು…… ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆಂಪಡರಿದ ಸೂರ್ಯ, ತಂಪಡರಿದ ಚಂದ್ರ, ಓ ಮೇಲೆ ನೋಡು ನೀಲಾಕಾಶ , ಕೆಳಗೆ ನೋಡು ಭೂಲೋಕ, ಕಣ್ಣಿನ ನೋಟಕ್ಕೂ ಸಿಗದಷ್ಟು ನೀರು, ಕಣ್ಣಂಚಿನಲ್ಲಿ ಕಾಣುವಷ್ಟು ಕಾಡು, ಅಲ್ಲಲ್ಲಿ ಪ್ರಾಣಿ ಪಕ್ಷಿಗಳು, ಎಲ್ಲೆಲ್ಲೂ ನರಮಾನವರು, ಒಂದು ಕಡೆ ಹಚ್ಚ ಹಸಿರು, ಇನ್ನೊಂದು … Read more

ಇತ್ತೀಚೆಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ನೀಡಿದ ಕುಮಾರಸ್ವಾಮಿ

ವಿಜಯ ದರ್ಪಣ ನ್ಯೂಸ್…. ಕೆಂಪಯ್ಯನಹುಂಡಿ ಗ್ರಾಮದಲ್ಲಿ ಯುವಕನೂರೋನ ಕಿರುಕುಳಕ್ಕೆ ಹೆದರಿ ಇತ್ತೀಚೆಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ನೀಡಿದ ಕುಮಾರಸ್ವಾಮಿ ತಾಂಡವಪುರ ಜುಲೈ 5 ಮೈಸೂರು ಜಿಲ್ಲೆ, ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಳೆ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಯುವಕನೂರ್ವನ ಕಿರುಕುಳಕ್ಕೆ ಹೆದರಿ ಇತ್ತೀಚೆಗೆಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮಾಜಿ … Read more

ಶೋಷಿತರಿಗೆ ಬೆಳಕು ನೀಡಿದ ಮಹಾನ್ ನಾಯಕ ಡಾ.ಅಂಬೇಡ್ಕರ್: ಸಿಎಂ ಡಿ ಕೆ ಶಿವಕುಮಾರ್

ವಿಜಯ ದರ್ಪಣ ನ್ಯೂಸ್…. ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ: ಧೀಮಂತ ನಾಯಕನಿಗೆ ಜಿಲ್ಲಾಡಳಿತದಿಂದ ಗೌರವ ಸಮರ್ಪಣೆ ಶೋಷಿತರಿಗೆ ಬೆಳಕು ನೀಡಿದ ಮಹಾನ್ ನಾಯಕ ಡಾ.ಅಂಬೇಡ್ಕರ್ : ಸಿಎಂ ಡಿ ಕೆ ಶಿವಕುಮಾರ್   ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜುಲೈ 05: “ಒಂದು ವರ್ಗದ ನಾಯಕರಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೋರಾಟ ಮಾಡಲಿಲ್ಲ. ಎಲ್ಲ ಶೋಷಿತ ವರ್ಗಕ್ಕೆ ಬೆಳಕು ‌ನೀಡಿದರು. ಭಾರತದ ಪ್ರಜೆಗಳು ಸಮಾನತೆಯಿಂದ ಬದುಕಲು ರೂಪುರೇಷೆ ನೀಡಿದ ಧೀಮಂತ … Read more

ಶಿಕ್ಷಕರು, ವೈದ್ಯರು ಎಂದು ನಿವೃತ್ತರಾಗುವುದಿಲ್ಲ, ವಿದ್ಯೆ ಎಂಬುದು ಬದುಕಿನ ಉದ್ದಕ್ಕೂ ಕಲಿಯಬೇಕು :-ಶ್ರೀ ಶ್ರೀ ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮಿಗಳು

ವಿಜಯ ದರ್ಪಣ ನ್ಯೂಸ್….. ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ, ಹಳೆಯ ವಿದ್ಯಾರ್ಥಿಗಳ ಸಮ್ಮಿಲನ , ಎಲ್ ಬಿ.ರಾಜಪ್ಪ ಅಭಿನಂದನಾ ಕಾರ್ಯಕ್ರಮ ಶಿಕ್ಷಕರು, ವೈದ್ಯರು ಎಂದು ನಿವೃತ್ತರಾಗುವುದಿಲ್ಲ, ವಿದ್ಯೆ ಎಂಬುದು ಬದುಕಿನ ಉದ್ದಕ್ಕೂ ಕಲಿಯಬೇಕು :-ಶ್ರೀ ಶ್ರೀ ಶ್ರೀ ಶಿವಾನುಭವ ಶಿವರುದ್ರ ಮಹಾಸ್ವಾಮಿಗಳು ಬೆಂಗಳೂರು: ರಾಜಾಜಿನಗರ ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ನಿವೃತ್ತ ದೃಹಿಕ ಶಿಕ್ಷಕ ಎಲ್.ಬಿ.ರಾಜಪ್ಪರವರಿಗೆ ಅಭಿನಂದನಾ ಸಮಾರಂಭ. ಬೇಲಿಮಠ ಮಹಾ ಸಂಸ್ಥಾನದ ಶ್ರೀ … Read more