ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾಗಿ ಡಾಲ್ಫಿನ್ ನಾಗರಾಜ್ ಅವಿರೋಧ ಆಯ್ಕೆ.

ವಿಜಯ ದರ್ಪಣ ನ್ಯೂಸ್…. ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾಗಿ ಶಿಡ್ಲಘಟ್ಟದ ಡಾಲ್ಫಿನ್ ನಾಗರಾಜ್ ಅವಿರೋಧ ಆಯ್ಕೆ. ಶಿಡ್ಲಘಟ್ಟ: ತಾಲ್ಲೂಕಿನ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘಗಳ ಕ್ಷೇತ್ರದಿಂದ ಎ.ನಾಗರಾಜ್ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಡಾಲ್ಫಿನ್ ಸ್ಕೂಲ್ ನಾಗರಾಜ್ ಅವಿರೋಧ ಆಯ್ಕೆಯಾಗಿದ್ದು ಅವರ ಅಭಿಮಾನಿಗಳು, ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ತಾಲ್ಲೂಕಿನ ಎಸ್‌ಎಫ್‌ಸಿಎಸ್…

Read More

ತಾಲಿಬಾನ್ ಮತ್ತು ಪಾಕಿಸ್ತಾನ್……  ಆಯ್ಕೆ ಯಾವುದು ?

ವಿಜಯ ದರ್ಪಣ ನ್ಯೂಸ್…. ತಾಲಿಬಾನ್ ಮತ್ತು ಪಾಕಿಸ್ತಾನ್……              ಆಯ್ಕೆ ಯಾವುದು ? ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕಿಂತ ಪಾಕಿಸ್ತಾನದ ಮಿಲಿಟರಿ ನಿಯಂತ್ರಣದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟೋ ಉತ್ತಮ. ಶತ್ರುವಿನ ಶತ್ರು ಮಿತ್ರ ಎಂಬುದು ರಾಜಕೀಯವಾಗಿ, ರಕ್ಷಣಾತ್ಮಕವಾಗಿ ಒಳ್ಳೆಯ ಚಾಣಕ್ಯ ನೀತಿ ಎಂಬುದೇನು ನಿಜ, ಆದರೆ ಆ ಶತ್ರುವಿನ ಶತ್ರು ಎಷ್ಟು ಪ್ರಾಮಾಣಿಕ, ಎಷ್ಟು ಯೋಗ್ಯ, ದೀರ್ಘಕಾಲದಲ್ಲಿ ಅವರೊಂದಿಗೆ ಹೊಂದಬಹುದಾದ ಸಂಬಂಧಗಳ ಅರ್ಹತೆ, ಅವರ ಸಾಮಾಜಿಕ ಮತ್ತು ರಾಜಕೀಯ ಬದ್ಧತೆ, ಮನಸ್ಥಿತಿ…

Read More

ಕಾರ್ಮಿಕ ಸಂಘಟನೆಯ ನಾಯಕರು ವಿಧಾನಸಭೆಯಲ್ಲಿರಬೇಕು: ಡಾ.ಲಕ್ಷ್ಮಿವೆಂಕಟೇಶ್‌

ವಿಜಯ ದರ್ಪಣ ನ್ಯೂಸ್…. ಕಾರ್ಮಿಕ ಸಂಘಟನೆಯ ನಾಯಕರು ವಿಧಾನಸಭೆಲ್ಲಿರಬೇಕು: ಡಾ.ಲಕ್ಷ್ಮಿವೆಂಕಟೇಶ್‌ ತಾಂಡವಪುರ ಮೈಸೂರು ಜಿಲ್ಲೆ : ಯಾವುದೇ ರಾಜ್ಯವಾಗಲಿ ಕಾರ್ಮಿಕ ಸಂಘಟನೆಯ ನಾಯಕರೊಬ್ಬರು ವಿಧಾನ ಸಭೆಯಲ್ಲಿ ಇರಬೇಕು ಎಂದು ಕರ್ನಾಟಕ ರಾಜ್ಯ ಐಎನ್‌ಟಿಯುಸಿ ಡಾ.ಲಕ್ಷ್ಮಿ ವೆಂಕಟೇಶ್‌ ಅಭಿಪ್ರಾಯ ಪಟ್ಟರು. ಮೈಸೂರಿನ ಕೆಎಸ್‌ ಒಯು ಘಟಿಕೋತ್ಸವ ಭವನದಲ್ಲಿ ಟಿವಿಎಸ್ ಮೋಟಾರ್ ಕಂಪನಿ ಉದ್ಯೋಗಿಗಳ ಸಂಘದ 25 ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ, ತಮಿಳುನಾಡು ಹೀಗೆ ಯಾವುದೇ ರಾಜ್ಯವಾಗಲಿ ಯೂನಿಯನ್‌ ನಾಯಕರೊಬ್ಬರು ವಿಧಾನಸಭೆಯಲ್ಲಿರಬೇಕೆಂಬುದು ನಮ್ಮ ಒತ್ತಾಯವಾಗಿದೆ….

Read More

ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಪ್ರಾತಿನಿಧ್ಯ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸ್ಸು: ಪ್ರೋ.ಗೋವಿಂದ ರಾವ್

ವಿಜಯ ದರ್ಪಣ ನ್ಯೂಸ್…. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಪ್ರಾತಿನಿಧ್ಯ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸ್ಸು: ಪ್ರೋ.ಗೋವಿಂದ ರಾವ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ , ಮೇ 23: ಜಿಲ್ಲೆಯಲ್ಲಿನ ಶಿಕ್ಷಣ, ಆರೋಗ್ಯ, ತಲಾದಾಯ, ಕೃಷಿ, ಹೈನಗಾರಿಕೆ, ಕೈಗಾರಿಕೆ, ಸೇವಾ ವಿಭಾಗ, ಸಾಮಾಜಿಕ ವಲಯಗಳ ಮಾನದಂಡಗಳ ಆಧಾರದ ಮೇಲೆ ಅಭಿವೃದ್ಧಿ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಈ ಅಭಿವೃದ್ಧಿ ಸೂಚ್ಯಂಕವನ್ನು ಆಧರಿಸಿ ಹಿಂದುಳಿದ ತಾಲ್ಲೂಕುಗಳು ಯಾವುವು ಎಂಬುದನ್ನು ಗುರುತಿಸಿ ಆ…

Read More

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ 

ವಿಜಯ ದರ್ಪಣ ನ್ಯೂಸ್….  ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು : ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ಶಿಡ್ಲಘಟ್ಟ : ಡಾ.ಬಿ.ಆರ್‌.ಅಂಬೇಡ್ಕ‌ರ್ ಆಶಯದಂತೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಹಾಗು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪಜೆಗಳನ್ನಾಗಿ ರೂಪಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ತಿಳಿಸಿದರು. ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯಲ್ಲಿ ಅಂಬೇಡ್ಕರ್ ಮತ್ತು ಜಗಜೀವನ ರಾಷ್ಟ್ರ ಬಳಗದಿಂದ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಬಾಬುಜಗಜೀವನ್ ರಾಂ ಜಯಂತಿಯಲ್ಲಿ ಬಾಗವಹಿಸಿ ಅವರು…

Read More

ಇರಿಗೇನಹಳ್ಳಿ  ಶ್ರೀನಿವಾಸ್‌ ಗೆಲುವಿಗೆ ಎಲ್ಲರು ಶ್ರಮಿಸಿ : ನಿಸರ್ಗ ನಾರಾಯಣಸ್ವಾಮಿ ಕರೆ 

ವಿಜಯ ದರ್ಪಣ ನ್ಯೂಸ್….. ಇರಿಗೇನಹಳ್ಳಿ  ಶ್ರೀನಿವಾಸ್‌ ಗೆಲುವಿಗೆ ಎಲ್ಲರು ಶ್ರಮಿಸಿ : ನಿಸರ್ಗ ನಾರಾಯಣಸ್ವಾಮಿ ಕರೆ ದೇವನಹಳ್ಳಿ, ಮೇ.21: ಇದೇ ತಿಂಗಳು  25 ರಂದು ನಡೆಯಲಿರುವ ಬಮೂಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಇರಿಗೇನಹಳ್ಳಿ ಶ್ರೀನಿವಾಸ್ ಅವರನ್ನು ಎಲ್ಲರೂ ಒಗ್ಗೂಡಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮನವಿ ಮಾಡಿದರು. ತಾಲೂಕಿನ ನಂದಿ ಬೆಟ್ಟ ರಸ್ತೆಯಲ್ಲಿರುವ ಶ್ರೀ ಕತ್ತಿ ಮಾರೆಮ್ಮ ದೇವಾಲಯದ ಸಮುದಾಯ ಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ…

Read More

ಕಾರ್ಮಿಕರು ದುಡಿದರೂ ತಕ್ಕ ಕೂಲಿ ಸಿಗುತ್ತಿಲ್ಲ  : ಹಿರಿಯ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ

ವಿಜಯ ದರ್ಪಣ ನ್ಯೂಸ್… ಕಾರ್ಮಿಕರು ದುಡಿದರೂ ತಕ್ಕ ಕೂಲಿ ಸಿಗುತ್ತಿಲ್ಲ  : ಹಿರಿಯ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಶಿಡ್ಲಘಟ್ಟ : ಬೆಳಗ್ಗೆಯಿಂದ ಸಂಜೆವರೆಗೂ ದುಡಿದರೂ ತಕ್ಕ ಕೂಲಿ ಸಿಗದೇ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ನಿರ್ದಿಷ್ಟ ಕೆಲಸದ ಅವಧಿಯಿಲ್ಲ, ದುಡಿಮೆ ಹೆಚ್ಚು, ಅನುಕೂಲ ಕಡಿಮೆ ಇವು ಇಂದಿನ ಕಾರ್ಮಿಕ ಪರಿಸ್ಥಿತಿಗಳು ವಿಶೇಷವಾಗಿ ರೇಷ್ಮೆ ಉದ್ಯಮದಲ್ಲಿ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಿಲ್ಲದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ…

Read More

ಸುಗಮ್ಯ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಎ.ಬಿ ಬಸವರಾಜು

ವಿಜಯ ದರ್ಪಣ ನ್ಯೂಸ್…. ಸುಗಮ್ಯ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾಂ.ಜಿಲ್ಲೆ. ಮೇ 22: ಸುಗಮ್ಯ ಭಾರತ ಅಭಿಯಾನದಡಿ ವಿಕಲಚೇತನರು ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮತ್ತು ಹೊರಾಂಗಣ ಮತ್ತು ಒಳಾಂಗಣ ಪ್ರದೇಶದಲ್ಲಿ ಯಾವುದೇ ರೀತಿಯ ಅಡೆ ತಡೆಗಳಿಲ್ಲದೆ ಸುಗಮವಾಗಿ ಸಂಚರಿಸಲು ಸುಗಮ್ಯ ಭಾರತ ಅಭಿಯಾನದ ಉದ್ದೇಶವಾಗಿದ್ದು ಈ ಅಭಿಯಾನಕ್ಕೆ ಇಂದು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಾದ ಎ.ಬಿ ಬಸವರಾಜು ಅವರು ಚಾಲನೆ ನೀಡಿದರು. ಈಗಾಗಲೇ ರಾಜ್ಯಾದ್ಯಂತ ಈ…

Read More

ಬೂಕರ್ ಪ್ರಶಸ್ತಿಯವರೆಗೆ ಕನ್ನಡ ಸಾಹಿತ್ಯ, ಬರವಣಿಗೆಯಿಂದ ಸಾಧನೆ ಶ್ರೀಮತಿ ಬಾನು ಮುಷ್ತಾಕ್….

ವಿಜಯ ದರ್ಪಣ ನ್ಯೂಸ್…. ಬೂಕರ್ ಪ್ರಶಸ್ತಿಯವರೆಗೆ ಕನ್ನಡ ಸಾಹಿತ್ಯ, ಬರವಣಿಗೆಯಿಂದ ಸಾಧನೆ ಶ್ರೀಮತಿ ಬಾನು ಮುಷ್ತಾಕ್…. ಬದುಕು ಸಾರ್ಥಕತೆಯ ಕಡೆಗೆ ಸಾಗುವುದು ಸಾಮಾನ್ಯವಾಗಿ ಈ ನಾಗರಿಕ ಸಮಾಜದಲ್ಲಿ ಒಂದು ದೊಡ್ಡ ಅಧಿಕಾರ, ಒಂದು ದೊಡ್ಡ ಪ್ರಶಸ್ತಿ, ಒಂದು ದೊಡ್ಡ ಜನಪ್ರಿಯತೆ, ಒಂದು ದೊಡ್ಡ ಶ್ರೀಮಂತಿಕೆ, ಒಂದು ದೊಡ್ಡ ಸಾಧನೆ ಮಾಡಿದಾಗ ಎಂಬುದು ವಾಸ್ತವಿಕ ನೆಲೆಯಲ್ಲಿ ನಿಜ. ಪ್ರಖ್ಯಾತ ಸಿನಿಮಾ ನಟ ನಟಿಯರಾಗುವುದು, ಪ್ರಖ್ಯಾತ ರಾಜಕಾರಣಿಯಾಗುವುದು, ಪ್ರಖ್ಯಾತ ಕ್ರೀಡಾಪಟುವಾಗುವುದು, ಪ್ರಖ್ಯಾತ ಉದ್ಯಮಿಯಾಗುವುದು, ಪ್ರಖ್ಯಾತ ವಿಜ್ಞಾನಿಯಾಗುವುದು, ಪ್ರಖ್ಯಾತ ಪೋಲೀಸ್ ಆಗುವುದು,…

Read More

ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ,  ಕುರಿಗಳು ಸಾವು 

ವಿಜಯ ದರ್ಪಣ ನ್ಯೂಸ್…. ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ,  ಕುರಿಗಳು ಸಾವು ಶಿಡ್ಲಘಟ್ಟ : ತಾಲ್ಲೂಕಿನ ಕುತ್ತಾಂಡಹಳ್ಳಿ ಗ್ರಾಮದಲ್ಲಿ ಕುರಿಗಳ ಹಿಂಡಿನ ಮೇಲೆ ಭಾನುವಾರ ತಡರಾತ್ರಿ ಹತ್ತಾರು ಬೀದಿ ನಾಯಿಗಳ ಗುಂಪು ದಾಳಿ ನಡೆಸಿ ಕುರಿಗಳ ಕತ್ತುಗಳನ್ನು ಕಚ್ಚಿ ಹಲ್ಲೆ ನಡೆಸಿದ ಪರಿಣಾಮ ಸುಮಾರು ೫ ಕುರಿಗಳು ಸಾವನ್ನಪ್ಪಿದ್ದು, ೪ ಕುರಿಗಳು ಗಂಭೀರ ಗಾಯಗೊಂಡಿವೆ. ಕುತ್ತಾಂಡಹಳ್ಳಿ ಗ್ರಾಮದ ಮುನಿವೆಂಕಟರಾಯಪ್ಪ ಎಂಬುವರಿಗೆ ಸೇರಿದ ಕುರಿಗಳು ಕುರಿ ದೊಡ್ಡಿಯಲ್ಲಿದ್ದಾಗ, ದೊಡ್ಡಿಗೆ ನುಗ್ಗಿದ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ…

Read More