ಪ್ರೀತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿ : ಡಿವೈಎಸ್ಪಿ ಪಿ. ಮುರಳಿಧರ್ 

ವಿಜಯ ದರ್ಪಣ ನ್ಯೂಸ್….

ಪ್ರೀತಿ ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿ : ಡಿ.ವೈ.ಎಸ್ಪಿ.ಪಿ. ಮುರಳಿಧರ್

ಶಿಡ್ಲಘಟ್ಟ : ಭೂಮಿ ಮೇಲೆ ಬಂದ ನಂತರ ನಾವೆಲ್ಲರೂ ಮನುಷ್ಯರೆ, ಪ್ರೀತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು
ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಸಾರ್ವಜನಿಕರಿಗೆ
ತೊಂದರೆಯಾಗದಂತೆ ಗೌರಿ ಗಣೇಶ ಹಬ್ಬವನ್ನು ಆಚರಿಸಲು ಸಹಕರಿಸಬೇಕು ಎಂದು ಚಿಂತಾಮಣಿ ಉಪ ವಿಭಾಗದ ಡಿ.ವೈ.ಎಸ್ಪಿ.ಪಿ. ಮುರಳಿಧರ್ ತಿಳಿಸಿದರು.

ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನ ಉದ್ದೇಶಿಸಿ ಅವರು ಮಾತನಾಡಿದರು.

ಮಂದಿರ, ಮಸೀದಿ,ಚರ್ಚ್, ಎಲ್ಲವೂ ಒಂದೇ ಸಾರ್ವಜನಿಕರ ಸಹಕಾರದೊಂದಿಗೆ ವಿಜೃಂಭಣೆಯಿಂದ ಗಣೇಶನ ಹಬ್ಬ ಆಚರಿಸುವುದು, ಮೆರವಣಿಗೆ ಮಾಡುವುದರಲ್ಲಿ ಸಮಸ್ಯೆಯಿಲ್ಲ ಮೆರವಣಿಗೆ ಸಾಗುವುದಕ್ಕೆ ಇಲಾಖೆಯು ಸಹಕಾರ ನೀಡುತ್ತದೆ ಎಂದು ಹೇಳಿದರು.

ಸರ್ಕಾರದ ಮಾರ್ಗಸೂಚಿನಿಯಮಗಳು ಪಾಲಿಸಬೇಕು
ಮೆರವಣಿಗೆ ಸಂದರ್ಭದಲ್ಲಿ ಚಲನವಲಗಳ ಕುರಿತು ವಿಡಿಯೋ ಗ್ರಫಿ ಇಲಾಖೆಯಿಂದ ಮಾಡಲಾಗುತ್ತದೆ ಯಾರೇ ಆಗಲೀ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿದರೆ ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಪ್ರಕರಣವನ್ನು ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಟಾಕಿ ಸಿಡಿಸುವುದು ನಿಲ್ಲಿಸಿ ಅದರಿಂದ ಶಬ್ದ ಮಾಲಿನ್ಯ, ವಾಯುಮಾಲಿನ್ಯ ಹೆಚ್ಚಾಗುತ್ತದೆ ಪ್ಲಾಸ್ಟಿಕ್ ಬಳಕೆ ನಿಷೇಧವಿದೆ ಪ್ಲಾಸ್ಟಿಕ್ ,ಬಳಸಬೇಡಿ ಪರಿಸರಸ್ನೇಹಿ ಗಣಪತಿಯನ್ನು ಬಳಸುವಂತೆ ಸಲಹೆ ನೀಡಿದರು.

ಗಣೇಶ ಕೂರಿಸಲು ಬಲವಂತವಾಗಿ ಚಂದ ವಸೂಲಿ ಮಾಡಿದರೆ
ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಮಾತನಾಡಿ ಭಾರತ ದೇಶ ಜಾತ್ಯತೀತ ರಾಷ್ಟ್ರವಾಗಿದೆ ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸಬೇಕು ಜತೆಗೆ ಸಮಾನವಾಗಿ ಗೌರವಿಸಬೇಕು ನಮ್ಮ ಹಬ್ಬ ಹರಿದಿನಗಳು ನಮಗೆ ಹೇಗೆ ಮುಖ್ಯವೋ ಬೇರೆ ಧರ್ಮದವರಿಗೂ ಅವರ ಹಬ್ಬಗಳು ಅಷ್ಟೇಮುಖ್ಯವಾಗುತ್ತವೆ ಅವರ ಭಾವನೆಗಳನ್ನು ಸಹ ಗೌರವಿಸುವುದರ ಜೊತೆಗೆ ಸುರಕ್ಷತೆಯನ್ನು ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವ ಹಬ್ಬವಾಗಿರುವುದರಿಂದ
ಪೊಲೀಸ್ ಇಲಾಖೆ ಹಾಗೂ ಸರ್ಕಾರದಿಂದ ನೀಡಿರುವ
ಮಾರ್ಗಸೂಚಿಗಳು ತಪ್ಪದೆ ಪಾಲಿಸಬೇಕು ನಗರಸಭೆ, ಬೆಸ್ಕಾಂ,
ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದುಕೊಂಡು ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನ ಸಿಂಧು, ನಗರಸಭೆ ಪೌರಾಯುಕ್ತ ಜಿ.ಅಮೃತ ,ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ನಗರ ಪೊಲೀಸ್ ಠಾಣೆ ಪಿಎಸ್ಐ ವೇಣುಗೋಪಾಲ್, ದಿಬ್ಲೂರಹಳ್ಳಿ ಠಾಣೆ ಪಿಎಸ್ಐ ಶ್ಯಾಮಲಾ, ಗ್ರಾಮಾಂತರ ಪೊಲೀಸ್ ಠಾಣೆ ಕ್ರೈಂ ಪಿಎಸ್ಐ ನಾಗರಾಜ್,ಬೆಸ್ಕಾಂ ಇಲಾಖೆಯ ಕಿರಣ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು,ವಿವಿಧ ಸಮುದಾಯದ ಮುಖಂಡರು,ಸಾರ್ವಜನಿಕರು ಉಪಸ್ಥಿತಿರಿದ್ದರು.

₹₹₹$₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಶ್ರಮಿಸಿದ  ಮಾಜಿ ಮುಖ್ಯಮಂತ್ರಿ ದೇವರಾಜು ಅರಸು

ಶಿಡ್ಲಘಟ್ಟ : ದೇವರಾಜು ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆ, ಉಳುವವನೆ ಭೂಮಿಯ ಒಡೆಯ ಭೂ ಕಾಯಿದೆಯಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಭೂಮಿ ದೊರೆತು ಅದರಿಂದ ಅವರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ತಿಳಿಸಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀದೇವರಾಜು ಅರಸು ಅವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ನಾಡಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಶ್ರೇಯಸ್ಸು, ಅಭಿವೃದ್ದಿಗೆ ಶ್ರಮಿಸಿದ ಮಹನೀಯರಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಹಾಗು ಕ್ರಾಂತಿಕಾರಕ ಯೋಜನೆಗಳಿಂದ ಅರಸು ಅವರು ಈ ನಾಡಿನ ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ ಎಂದು ಹೇಳಿದರು.

ದೇವರಾಜು ಅರಸು ಮುಖ್ಯಮಂತ್ರಿ ಆಗಿದ್ದಾಗ ಕೇವಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗಷ್ಟೆ ಹಾಸ್ಟೆಲ್‌ ಗಳಿದ್ದವು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಗೂ ಅವರ ಕುಟುಂಬಗಳ ಆರ್ಥಿಕ, ಸಾಮಾಜಿಕ ಸಮಸ್ಯೆ ಅರಿತು ಹಿಂದುಳಿದ ವರ್ಗಗಳ ಹಾಸ್ಟೆಲ್‌ ಗಳನ್ನು ಆರಂಭಿಸಿದರು ಇದೀಗ ಲಕ್ಷ ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದ್ದು ಅದರ ಕೀರ್ತಿ ಅರಸು ಅವರಿಗೆ ಸಲ್ಲಬೇಕು ಎಂದರು.

ನಿವೃತ್ತ ಶಿಕ್ಷಕ ವಿ.ಕೃಷ್ಣ ಅವರು ದೇವರಾಜು ಅರಸು ಅವರ ಜೀವನ ಚರಿತ್ರೆ ಕುರಿತು ಪ್ರಧಾನ ಭಾಷಣ ಮಾಡಿದರು.
ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು.

ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿನ ಎಸ್.ಎಸ್.ಎಲ್.ಸಿ. ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ಗಗನ ಸಿಂಧು, ತಾಲ್ಲೂಕು ಪಂಚಾಯಿತಿ ಇ.ಒ.ಆರ್.ಹೇಮಾವತಿ, ಬಿಇಒ ನರೇಂದ್ರಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜ್, ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸುವ ಸಮಿತಿ ಸದಸ್ಯ ಅರಿಕೆರೆ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಬಿ.ನವೀನ್ ಕುಮಾರ್, ವೀಣಾ,ವೆಂಕಟೇಶ್, ಮುನಿರಾಜು ಹಾಗು ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.