ಗೌರಿ ಗಣೇಶ ಮೂರ್ತಿಗಳನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ ಶ್ರದ್ಧ ಭಕ್ತಿಯಿಂದ  ವಿಸರ್ಜನೆ 

ವಿಜಯ ದರ್ಪಣ ನ್ಯೂಸ್…

ಗೌರಿ ಗಣೇಶ ಮೂರ್ತಿಗಳನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ ಶ್ರದ್ಧ ಭಕ್ತಿಯಿಂದ  ವಿಸರ್ಜನೆ 

ತಾಂಡವಪುರ ಸೆಪ್ಟೆಂಬರ್ 16 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಬೀಚಾಳಮ್ಮ ದೇವಾಲಯದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದವರು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶ್ರದ್ಧ ಭಕ್ತಿಯಿಂದ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಿಶೇಷ ಪೂಜೆ ಸಲ್ಲಿಸಿ ಕಪಿಲ ನದಿಯಲ್ಲಿ ವಿಸರ್ಜನೆ ಮಾಡಲಾಯಿತು

ಗ್ರಾಮದ ವಿನಾಯಕ ಗೆಳೆಯರ ಬಳಗ ಹಾಗೂ ಗ್ರಾಮಸ್ಥರ ವತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಟ್ಯಾಕ್ಟರ್ ನಲ್ಲಿ ಕೂರಿಸಿ ಹೂವಿನ ಅಲಂಕಾರ ಮಾಡಿ ಡೋಲು ಕುಣಿತ ವಾದ್ಯಗೋಷ್ಠಿಯೊಡನೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಗೌರಿ ಗಣೇಶ್ ಉತ್ಸವ ಮೆರವಣಿಗೆ ಮೂಲಕ ಗ್ರಾಮಸ್ಥರು ಪೂಜೆ ಸಲ್ಲಿಸಿ ಬಳಿಕ ಕಪಿಲ ನದಿಯಲ್ಲಿ ವಿಸರ್ಜನೆ ಮಾಡಿದರು

ಈ ಸಂದರ್ಭದಲ್ಲಿ ಗುತ್ತಿಗೆದಾರ ಕಾಂಗ್ರೆಸ್ ಮುಖಂಡ ಮಾಲಯ್ಯ ಸೇರಿದಂತೆ ಶ್ರೀ ವಿನಾಯಕ ಯುವಕರ ಗೆಳೆಯರ ಬಳಗದವ ಸಂಘದ ಮುಖಂಡರು ಪ್ರಾಧಿಕಾರಿಗಳು ಹಾಗೂ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಿಗಿ ಪೊಲೀಸ್ ಬಂದ ಬಸ್ ಅನ್ನು ಏರ್ಪಡಿಸಿ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು

@@@@@@@@@@@@@@@@@@@@@@

ವಿದ್ಯಾರ್ಥಿಗಳು  ಸ್ವಾಭಿಮಾನಿಗಳಾಗಿ ಬದುಕಿ: ಜೀಮಾರಹಳ್ಳಿ ರಂಗಸ್ವಾಮಿ

ತಾಂಡದಪುರ ಸೆಪ್ಟೆಂಬರ್  ವಿದ್ಯಾರ್ಥಿಗಳ ಸಮಾಜಕಾರ್ಯ ಶಿಬಿರ ಸಮಾರೋಪ ಸಮಾರಂಭದಲ್ಲಿ ಸ್ವಾಭಿಮಾನಿಗಳಾಗಿ ಬದುಕಲು ಇಂತಹ ಶಿಬಿರಗಳು ಬಹಳ ಮುಖ್ಯ ಎಂದು ಸುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜೀಮಾರಹಳ್ಳಿ ರಂಗಸ್ವಾಮಿ ಹೇಳಿದರು

ಅವರು ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಜಿ ಮರಳ್ಳಿ ಗ್ರಾಮದಲ್ಲಿ ಮೈಸೂರಿನ ಪೂಜಾ ಭಾಗವತ್ ಮಹಾಜನ ಸ್ನಾತಕೋತ್ತರ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳ ಸಮಾಜಕಾರ್ಯ ಶಿಬಿರ 2025ರ ಕಾರ್ಯಕ್ರಮವ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಸ್ವಾಮಿಯವರು ಮಾತನಾಡಿದರು.

ನಮ್ಮ ಗ್ರಾಮದಲ್ಲಿ ಕಳೆದ ಏಳು ದಿನಗಳಿಂದ ಮಹಾಜನ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮದ ಜನರ ಸಾಕ್ಷರತೆ ಆರೋಗ್ಯ ಆರ್ಥಿಕ ಸಾಕ್ಷರತೆ ಸಾಮಾಜಿಕ ಜವಾಬ್ದಾರಿ ಊರಿನ ವಿಸ್ತೀರ್ಣ ಹಾಳ ಅಗಲ ಹೀಗೆ ನಮ್ಮ ಜಿ ಮಾರಹಳ್ಳಿ ಗ್ರಾಮದ ಪ್ರತಿಯೊಂದು ನಾಗರೀಕರ ಸಂಬಂಧಪಟ್ಟ ವಿಚಾರಗಳನ್ನ ಸಮೀಕ್ಷೆ ಮಾಡಿ ಇದರೊಟ್ಟಿಗೆ ಪ್ರತಿದಿನ ಸಂಜೆ ಹಲವಾರು ಸಾಮಾಜಿಕ ಸಂದೇಶಗಳನ್ನು ಸಾರುವ ಬೀದಿ ನಾಟಕಗಳನ್ನು ಮಾಡುವುದರ ಮುಖಾಂತರ ಇನ್ನೊಬ್ಬರು ಬಡತನ ಸಾಕ್ಷರತೆ ಹೀಗೆ ಹಲವಾರು ವಿಚಾರಗಳನ್ನ ಜನರಿಗೆ ಮನಮುಟ್ಟುವಂತೆ ವಿದ್ಯಾರ್ಥಿಗಳು ತಿಳಿಸುತ್ತಾ ಬಂದಿದ್ದು ಇದರೊಟ್ಟಿಗೆ ಗ್ರಾಮದಲ್ಲಿ ಗ್ರಾಮಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಸಲುವಾಗಿ ಮತ್ತು ಸ್ವಚ್ಛತೆಯನ್ನು ಇದುವರೆಗೂ ಹಮ್ಮಿಕೊಂಡು ಉತ್ತಮವಾದ ಕಾರ್ಯಕ್ರಮ ಈ ಸಮಾಜ ಕಾರ್ಯ ಶಿಬಿರ ಆಗಿದೆ ಎಂದು ಹೇಳಿದರು.

ಇಂಥ ಉತ್ತಮ ಕಾರ್ಯಕ್ರಮಗಳನ್ನು ನಮ್ಮ ಗ್ರಾಮದ ಪ್ರಜ್ಞಾವಂತ ನಾಗರಿಕ ಬಂಧುಗಳು ಇದನ್ನ ತಿಳಿದುಕೊಂಡು ತಮ್ಮ ತಮ್ಮ ಬದುಕುಗಳನ್ನು ಸುಧಾರಣೆ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಇದೆ ಪ್ರತಿಯೊಂದು ಗ್ರಾಮದಲ್ಲೂ ಕೂಡ ಹಲವಾರು ಸಮಸ್ಯೆಗಳು ಇದ್ದೇ ಇರುತ್ತವೆ ವಿದ್ಯಾರ್ಥಿಗಳೇ ಆಗಲಿ ಗ್ರಾಮದ ಬಂಧುಗಳೇ ಆಗಲಿ ಪ್ರತಿಯೊಬ್ಬರು ಸ್ವಾಭಿಮಾನಿಯಾಗಿ ತಮ್ಮ ಬದುಕನ್ನು ಕಟ್ಟಿಕೊಂಡು ಬದುಕಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಸಂಯೋಜಕ ಜಿ ಎಲ್ ತ್ರಿಪುರಾಂತಕ ರವರು ಹಳ್ಳಿ ಜೀವನ ಹಾಗೂ ಆರೋಗ್ಯ ಕುರಿತಾಗಿ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸಾಮಾನ್ಯರಿಗೆ ಅದ್ಭುತವಾಗಿ ಗ್ರಾಮೀಣ ಭಾಷಾ ಸುಗಡಿನಲ್ಲಿ ಜನ ಜೀವನ ಆರೋಗ್ಯ ಆಹಾರ ನಮ್ಮ ಆಚಾರ ವಿಚಾರ ಮರೆತು ಇಂದು ಪ್ರತಿಯೊಬ್ಬರು ಅತಿ ಚಿಕ್ಕ ವಯಸ್ಸಿಗೆ ಅನಾರೋಗ್ಯದಿಂದ ಬಳಲುತ್ತಿರುವುದಕ್ಕೆ ಮೂಲ ಕಾರಣ ನಾವುಗಳೇ ಎಂಬುದನ್ನು ಸ್ಪಷ್ಟಪಡಿಸಿ ವಿಚಾರ ಮಂಡನೆ ವಿಚಾರಗಳನ್ನು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ. ಪ್ರತಿಮಾ ಪರಮೇಶ್ ಅವರು ಮಾತನಾಡಿ. ಗ್ರಾಮೀಣ  ಭಾಗದಲ್ಲಿ. ಹೆಚ್ಚು ಹೆಚ್ಚಾಗಿ. ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿದರೆ. ಪ್ರತಿ ಕುಟುಂಬದಲ್ಲೂ ವಿದ್ಯಾವಂತರಾದರೆ. ಕುಟುಂಬದ ಸರ್ವತೋಮುಖ ಅಭಿವೃದ್ಧಿಗೆ ಮಕ್ಕಳ ಓದಿಕೆಯಿಂದ ಅನುಕೂಲವಾಗುತ್ತದೆ.
ತಮ್ಮ ಮಕ್ಕಳನ್ನು ಶಾಲೆಗೆ ತಪ್ಪದೇ ಕಳಿಸಬೇಕೆಂದು. ಪೋಷಕರಲ್ಲಿ ಮನವಿ ಮಾಡಿಕೊಂಡರು.

ಈ ಸಮಾರಂಭದಲ್ಲಿ. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರತಿಮಾ ಬಿಳಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವಿ. ಗ್ರಾಮದ ಗೌಡರಾದ ಶಿವಪ್ರಸಾದ್. ತಾಲೂಕು ಮುಜರಾಯಿ ಇಲಾಖೆ ಅಧ್ಯಕ್ಷ. ಗುರುಸ್ವಾಮಿ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ. ಮಹೇಶ್. ಗ್ರಾಮ ಪಂಚಾಯತಿ ಸದಸ್ಯರಾದ. ಚೌಡಮ್ಮ. ಚಿಕ್ ಮಾದಮ್ಮ. ಕಲ್ಪನಾ.. ಶಿಬಿರದ ಮುಖ್ಯಸ್ಥರಾದ ಭಾವನ. ಯಜಮಾನ್ ಚಿಕ್ ಮಾದಯ್ಯ. ಜ್ಯೋತಿ. ರವಿ
ಜಗದೀಶ್. ಶಿಬಿರದ ವಿದ್ಯಾರ್ಥಿಗಳು.. ಬಾಲ್ಯ ವಿವಾಹ ತಡೆಗಟ್ಟಲು ಜಾಗೃತಿ ನಾಟಕವನ್ನು ಅಭಿನಯಿಸಿದರು.ಗ್ರಾಮದ ಎಲ್ಲ ಮುಖಂಡರು ಹಾಜರಿದ್ದರು..