ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ  ಜೆಡಿಎಸ್ ಬೆಂಬಲಿಗರು ಜಯಭೇರಿ

ವಿಜಯ ದರ್ಪಣ ನ್ಯೂಸ್…

ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ  ಜೆಡಿಎಸ್ ಬೆಂಬಲಿಗರು ಜಯಭೇರಿ

ಶಿಡ್ಲಘಟ್ಟ : ಸಹಕಾರಿ ಬ್ಯಾಂಕ್ ನಲ್ಲಿ ಇಲ್ಲಿಯ ತನಕ ಈ ಭಾಗದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವುದಿಲ್ಲ ಈ ಬಾರಿ ಅತ್ಯಂತ ಹೆಚ್ಚಿನ ಮತಗಳನ್ನು ಪಡೆದು ಜೆಡಿಎಸ್ ಬೆಂಬಲಿತ ಸದಸ್ಯರು ಗೆದ್ದಿದ್ದು , ತಾವುಗಳು ರೈತರಿಗೆ ಉತ್ತಮವಾದಂತಹ ಸೌಲಭ್ಯಗಳನ್ನು ನೀಡಿ ಸಹಕಾರಿ ಬ್ಯಾಂಕಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ತಾಲ್ಲೂಕಿನ ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತರಾದ ಜೆಡಿಎಸ್ ಬೆಂಬಲಿತ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರನ್ನು ಮೇಲೂರಿನ ತಮ್ಮ ಗೃಹ ಕಚೇರಿಯಲ್ಲಿ ಅಭಿನಂದಿಸಿ ಅವರು ಮಾತನಾಡಿದರು.

ಸಹಕಾರಿ ಬ್ಯಾಂಕ್‌ಗಳಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳುವ ಜವಾಬ್ದಾರಿ ಗೆದ್ದ ನಿರ್ದೇಶಕರದ್ದು ಈ ಹಿಂದೆ ಸಾದಲಿ ಸಹಕಾರಿ ಬ್ಯಾಂಕ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿತ್ತು ಅವರು ನಡೆಸಿದ ಆಡಳಿತ ಇಷ್ಟವಾಗದೆ ಇದೀಗ ಜೆಡಿಎಸ್ ಬೆಂಬಲಿತರಿಗೆ ಅಧಿಕಾರವನ್ನು ಮತದಾರರು ಕೊಟ್ಟಿದ್ದು ಮತದಾರರ ವಿಶ್ವಾಸ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಉತ್ತಮ ಆಡಳಿತ ನಡೆಸಬೇಕೆಂದು ಮನವಿ ಮಾಡಿದರು.

ಸಹಕಾರಿ ಬ್ಯಾಂಕ್ ನಲ್ಲಿ ಗೆದ್ದಿರುವಂತಹ ನಿರ್ದೇಶಕರು ನಿರಂತರವಾಗಿ ರೈತರ ಸೇವೆಯಲ್ಲಿ ತೊಡಗಿಕೊಳ್ಳಬೇಕು ಹಾಗು ಬ್ಯಾಂಕ್ ನಿಂದ ಪಡೆದ ಸಾಲವನ್ನು ರೈತರು ಸದುಪಯೋಗ ಪಡಿಸಿಕೊಂಡು ನಿಗದಿತ ಸಮಯಕ್ಕೆ ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ನೂತನ ನಿರ್ದೇಶಕ ಕೃಷ್ಣಾರೆಡ್ಡಿ ಮಾತನಾಡಿ,ರೈತರು ಸಹಕಾರಿ ಸಂಘದಿಂದ ಪಡೆಯುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವುದರ ಜತೆಗೆ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಏಳಿಗೆಗೆ ಸಹಕರಿಸಬೇಕು ಎಂದರು.

ಪ್ರತಿಷ್ಠೆಯ ಚುನಾವಣೆ ಎಂದೇ ಬಿಂಬಿಸಲಾಗಿದ್ದ ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ 12 ಜನ ನಿರ್ದೇಶಕರಲ್ಲಿ 10 ಜನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದು ನಿರ್ದೇಶಕರಾಗಿ ಆಯ್ಕೆಯಾದರೆ 2 ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಸಿ.ಅಶ್ವತ್ ,ಕೆ.ಉಮಾಶಂಕರ್,
ಡಿ.ಎ.ಕೃಷ್ಣಪ್ಪ, ಆರ್.ತ್ಯಾಗರಾಜು, ಮಹಿಳಾ ಮೀಸಲು ಕ್ಷೇತ್ರದಿಂದ ಮಂಜುಳಮ್ಮ, ಸುಬ್ಬರತ್ನಮ್ಮ,ಪರಿಶಿಷ್ಟ ಜಾತಿ ಮೀಸಲು ನರಸಿಂಹಮೂರ್ತಿ, ಪರಿಶಿಷ್ಟ ಪಂಗಡ ಮೀಸಲು ಎಸ್.ಎನ್.ಅಶ್ವಥ್ಥನಾರಾಯಣ,ಹಿಂದುಳಿದ ವರ್ಗ ಎ.ಮೀಸಲು ಕ್ಷೇತ್ರ ವೆಂಕಟೇಶ್ ,ಹಿಂದುಳಿದ ವರ್ಗ ಬಿ.ಮೀಸಲು‌ ಎನ್.ಕೃಷ್ಣಾರೆಡ್ಡಿ, ಸಾಲಗಾರರಲ್ಲದ ಕ್ಷೇತ್ರದಿಂದ ಡಿ.ಆರ್.ಅಶ್ವಥನಾರಾಯಣಸ್ವಾಮಿ, ಠೇವಣಿದಾರರ ಕ್ಷೇತ್ರದಿಂದ ಕೆ‌.ವಿ.ನಂಜಪ್ಪ ಆಯ್ಕೆಯಾದ ನಿರ್ದೇಶಕರು.

ತಾಲ್ಲೂಕಿನ ಸಾದಲಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ 12 ಹೊಸ ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಂ.ಮಂಜುನಾಥ್ ತಿಳಿಸಿದರು.

№#########₹₹##################

ಪ್ರಗತಿಪರ ಹೋರಾಟಗಾರರ ಸಂಘದಿಂದ ನವಂಬರ್ 29ಕ್ಕೆ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ.

ಶಿಡ್ಲಘಟ್ಟ : ನವೆಂಬರ್ 29ರಂದು ನಗರದ ಕೋಟೆ ಸರ್ಕಲ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ನೆರವೇರಿಸಲು ಪ್ರಗತಿಪರ ಹೋರಾಟಗಾರರ ಸಂಘದಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಗತಿಪರ ಹೋರಾಟಗಾರರ ಸಂಘದ ಅಧ್ಯಕ್ಷ ವಿಸ್ಡಂ ನಾಗರಾಜ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋಟೆ ವೃತ್ತದಲ್ಲಿ ರಾಜ್ಯೋತ್ಸವದ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಬಿ.ಎನ್.ರವಿಕುಮಾರ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಲ್ ಚೌಕ್ಸ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಕನ್ನಡ ಚಲನಚಿತ್ರ ಕ್ಷೇತ್ರದ ಜೂನಿಯರ್ ಕಲಾವಿದರೂ ಕಾರ್ಯಕ್ರಮಕ್ಕೆ ಹಾಜರಾಗಲಿದ್ದು ,ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ, ರಸ ಸಂಜೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕಳೆದ ವರ್ಷ ರಾಜ್ಯೋತ್ಸವ ನಡೆಸಿ ಉಳಿದ ಹಣದ ಜೊತೆಗೆ ಸಂಘಟನೆಯ ಪದಾಧಿಕಾರಿಗಳು ಸ್ವಂತವಾಗಿ ಹಣ ಭರಿಸಿ ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ, ಸಾರ್ವಜನಿಕರಿಂದ ಯಾವುದೇ ದೇಣಿಗೆ ಸಂಗ್ರಹಣೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಚನ್ನೇಗೌಡ, ಉಪಾಧ್ಯಕ್ಷ ಸಿ.ಎಂ.ಬೈರೇಗೌಡ, ಕಾರ್ಯದರ್ಶಿ ಶೆಟ್ಟಿಹಳ್ಳಿ ರವಿಪ್ರಕಾಶ್, ಖಜಾಂಚಿ ಅಹಮದ್‌, ಮನೋಜ್ ಕುಮಾರ್, ಮಧುಲತಾ, ಪ್ರದೀಪ್, ಸುಬ್ರಮಣಿ, ಎಸ್.ಆ‌ರ್.ಮಂಜುನಾಥ್
,ಸೋಮು,ಶ್ರೀಧರ್, ದ್ಯಾವಪ್ಪ, ಶ್ರೀನಿವಾಸ್, ಚೆಲುವರಾಜ್ ಮುಂತಾದವರು ಹಾಜರಿದ್ದರು.