ವಿಜೃಂಭಣೆಯಿಂದ ಜರುಗಿದ ಇತಿಹಾಸ ಪ್ರಸಿದ್ಧಿ ಉಳ್ಳ ಜನ ಜಾಗೃತಿ ಸುತ್ತೂರು ಜಾತ್ರೆಗೆ ತೆರೆ
ವಿಜಯ ದರ್ಪಣ ನ್ಯೂಸ್….
ವಿಜೃಂಭಣೆಯಿಂದ ಜರುಗಿದ ಇತಿಹಾಸ ಪ್ರಸಿದ್ಧಿ ಉಳ್ಳ ಜನ ಜಾಗೃತಿ ಸುತ್ತೂರು ಜಾತ್ರೆಗೆ ತೆರೆ

ತಾಂಡವಪುರ: ಜನವರಿ -ಕಳೆದ ಆರು ದಿನಗಳಿಂದ ಜರುಗಿದ ಇತಿಹಾಸ ಪ್ರಸಿದ್ಧ ಉಳ್ಳ ಐತಿಹಾಸಿಕ ಜನಜಾಗೃತಿ ಸುತ್ತೂರು ಜಾತ್ರೆಗೆ ಇಂದು ಕೂಡ ಲಕ್ಷ ಲಕ್ಷ ಮಂದಿ ಭಕ್ತರು ಪಾಲ್ಗೊಂಡು ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿ ಸ್ವಾಮೀಜಿಯವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪೂಜಿ ಸಲ್ಲಿಸಿ ಸ್ವಾಮೀಜಿ ಅವರ ಕೃಪೆಗೆ ಪಾತ್ರರಾದರು
ಅವರು ಇಂದು ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗೀಗಳವರ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸುತ್ತೂರು ಮಠದ ಮಠಾಧೀಶರಾದ ಜಗದ್ಗುರು ಶ್ರೀ ಶಿವರಾತ್ರಿಶ್ವರ ದೇಶಿಕಂದ್ರ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ಹಿಂದೂ ನಡೆದ ಸಾಂಸ್ಕೃತಿಕ ಮೇಳ ಮತ್ತು ವಸ್ತು ಪ್ರದರ್ಶನ ಸಮಾರಂಭ ಸಮಾರಂಭದಲ್ಲಿ ಸಂಸ್ಕೃತಿಕ ಮೇಳ ಮತ್ತು ವಸ್ತು ಪ್ರದರ್ಶನದಲ್ಲಿ ಬಂದಂತಹ ಭಕ್ತಾರಿಗೆ ಮತ್ತು ಜನರಿಗೆ ಹರಿವು ಮತ್ತು ಜಾಗೃತಿ ಮೂಡಿಸುವಲ್ಲಿ ವಿವಿಧ ಇಲಾಖೆಗಳ ಹಾಗೂ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಿದ್ದು ಅವರಿಗೆ ಸಂಸ್ಥೆ ವತಿಯಿಂದ ಬಹುಮಾನ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿಗಳು ಮಹಾಂತ ರುದ್ರೇಶ್ವರ ಸ್ವಾಮೀಜಿಯವರು ಈ ದೇಶ ಶಾಂತಿ ನೆಮ್ಮದಿ ಆರೋಗ್ಯವಾಗಿದೆ ಎಂದರೆ ಅದಕ್ಕೆ ಇಂತಹ ಮಠಮಾನ್ಯಗಳೆ ಕಾರಣ ಏಕೆಂದರೆ ಇಂತಹ ಮಠಮಾನ್ಯಗಳು ತಮ್ಮ ಮಠದಲ್ಲಿ ಲಕ್ಷಾಂತರ ಭಕ್ತರ ಹಾಗೂ ಶಿಷ್ಯರನ್ನು ಬೆಳೆಸುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಿದೆ ಎಂದರು.
ಅಲ್ಲದೆ ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿದ್ದಾರೆ ಅದಕ್ಕೆ ಮೂಲ ಕಾರಣ ನಮ್ಮ ಸುತ್ತೂರು ಮಠದ ಶ್ರೀ ಶ್ರೀಗಳು ಕಾರಣ ಸುತ್ತೂರು ಜಾತ್ರೆ ಬರೀ ಜಾತ್ರೆಯಲ್ಲ ಈ ಜಾತ್ರೆಯಲ್ಲಿ ರೈತರು ಕೃಷಿ ಕಾರ್ಮಿಕರು ಶಿಕ್ಷಣ ಆರೋಗ್ಯ ಸಂಸ್ಕೃತಿ ಕಲೆ ದೇಶಿ ಆಟಗಳು ಇನ್ನು ಮುಂತಾದ ನಮ್ಮ ಪರಂಪರೆಯ ಇತಿಹಾಸವುಳ್ಳ ಎಲ್ಲಾ ಈ ಜಾತ್ರೆ ಒಳಗೆ ಅಡಕವಾಗಿದ್ದು ಬಂದಂತ ಭಕ್ತರು ರೈತರು ಸಾರ್ವಜನಿಕರು ಸುತ್ತೂರು ಜಾತ್ರೆಯಲ್ಲಿ ಏನೆಲ್ಲ ಅಡಕವಾಗಿದೆ ಎಂಬುದನ್ನ ಹರಿದುಕೊಂಡು ಅವರು ಕೂಡ ಸುತ್ತೂರು ಶೀಘ್ರ ಮಾರ್ಗದರ್ಶನದಲ್ಲಿ ಮುನ್ನಡೆದರೆ ತಾವು ಕೂಡ ಪ್ರಗತಿ ಸಾಯಿಸಬಹುದು ಎಂದು ಸುತ್ತೂರು ಶ್ರೀಗಳು ಈ ಜಾತ್ರೆಯಲ್ಲಿ ತೋರಿಸಿಕೊಟ್ಟಿದ್ದಾರೆ .
ಅಲ್ಲದೆ ನಾವು ಒಳ್ಳೆಯವರನ್ನು ಬೆಳೆಯುವ ಬಿಡುವುದಿಲ್ಲ ಅಂದರೆ ದೇಶದ ಶಾಂತಿಗಾಗಿ ಬುದ್ಧ ಬಸವಣ್ಣಯೇಸು ಕೃಷ್ಣ ದೇಶಕ್ಕಾಗಿ ಮಹಾತ್ಮ ಗಾಂಧೀಜಿ ಸೇರ್ದಂತೆ ಇನ್ನು ಮುಂತಾದ ಅನೇಕರನ್ನು ನಾವೇ ಕೊಂದೆವು ಅಂದರೆ ದೇಶಕ್ಕಾಗಿ ಯಾರು ಒಳ್ಳೆಯದನ್ನು ಸಮಾಜಕ್ಕಾಗಿ ಯಾರು ಒಳ್ಳೆಯದನ್ನು ಮಾಡುತ್ತಾರೆ ಅಂತವರ ವಿರುದ್ಧ ಯಾವುದಾದರೂ ಒಂದು ಕೆಟ್ಟ ವಿಚಾರವನ್ನು ಇಟ್ಟುಕೊಂಡು ಅವರನ್ನು ತುಳಿಯುವಂತ ಕೆಲಸವನ್ನ ಈ ನಮ್ಮ ದೇಶದಲ್ಲಿ ಇನ್ನೂ ಕೂಡ ನಡೆಯುತ್ತಿದೆ ಎಂದು ಸ್ವಾಮೀಜಿಗಳು ತಮ್ಮ ವಿಷಾದ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಸುತ್ತೂರು ಮಠಾಧಿಸಲಾದ ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಜಿಗಳು ಪರಮ ಪೂಜ್ಯ ಗುರುಗಳಾದ ಶ್ರೀ ಗುರುಬಸವ ಸ್ವಾಮೀಜಿಗಳು ಮಹಾಂತ ರುದ್ರೇಶ್ವರ ಸ್ವಾಮೀಜಿಗಳು ಶಾಸಕ ಎಆರ್ ಕೃಷ್ಣಮೂರ್ತಿ ಶ್ರೀವತ್ಸ ರಮೇಶ್ ಬಂಡಿ ಸಿದ್ದೇಗೌಡ ಹಾಗೂ ಕೆ ಬ ಶ್ರೀನಿವಾಸ್ ರೆಡ್ಡಿ
ಜಿ ಮರಿಸ್ವಾಮಿ ಎ ಪಾಪರೆಡ್ಡಿ ಹಾಗೂ ನಳಂದ ಶಿಕ್ಷಣ ಸಂಸ್ಥೆಯ ಎಸ್ ಎಲ್ ಎನ್ ಸಾತಪ್ಪನ್ ಮೂಡ ಮಾಜಿ ಅಧ್ಯಕ್ಷ ರಾಜೀವ್ ಹಾಗೂ ಸಾಂಸ್ಕೃತಿಕ ಮೇಳದ ದಯಾನಂದ ಸ್ವಾಮಿ ವಸ್ತು ಪ್ರದರ್ಶನದ ಜಿ ಮಾದೇವಸ್ವಾಮಿ ಎಸ್ ಬಸವರಾಜು ಸಿದ್ದ ಮಲ್ಲಿಕಾರ್ಜುನ ಸೇರದಂತೆ ಇನ್ನು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಇದೆ ವೇಳೆ ವಿವಿಧ ಇಲಾಖೆಗಳಲ್ಲಿ ಏರ್ಪಡಿಸಿದ್ದ ವಸ್ತು ಪ್ರಸನ್ನದಲ್ಲಿ ಬಹುಮಾನಗಳಿಸಿದ ವಿಜೇತರಿಗೆ ಬಹುಮಾನವನ್ನು ವಿತರಿಸಿ ಗೌರವಿಸಿ ಪ್ರೋತ್ಸಾಹ ನೀಡಲಾಯಿತು.
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಲೋಕಸಭಾ ಸದಸ್ಯ ಅನಿಲ್ ಬೋಸ್

ತಾಂಡವಪುರ ಜನವರಿ 20 ಸುತ್ತೂರು ಜಾತ್ರಾ ಮಹೋತ್ಸವ ಕೊನೆಯ ದಿನವಾದ ಇಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್ ಅವರು ಭಾಗವಹಿಸಿ, ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳ ಗದುಗೆಯ ದರ್ಶನ ಪಡೆದು, ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಇದೆ ವೇಳೆ ಸುದ್ದಿದರೊಂದಿಗೆ ಮಾತನಾಡಿದ ಸುನಿಲ್ ಬೋಸ್ ರವರು ಸಾವಿರಾರು ವರ್ಷಗಳ ಇತಿಹಾಸವಿರುವ ಈ ಮಠವು ಕೇವಲ ಧಾರ್ಮಿಕ ಕೇಂದ್ರವಷ್ಟೇ ಅಲ್ಲದೆ, ‘ಅನ್ನ ದಾಸೋಹ’ ಮತ್ತು ‘ಅಕ್ಷರ ದಾಸೋಹ’ದ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಕ್ಷೇತ್ರವಾಗಿದೆ.. ಅಲ್ಲದೆ ಈ ಜಾತ್ರೆಯು ಜನರಲ್ಲಿ ಜಾಗೃತಿ ಮೂಡಿಸುವಂತಹ ಜಾತ್ರೆಯಾಗಿದ್ದು ಈ ಜಾತ್ರೆಯಲ್ಲಿ ನಾವು ಭಾಗವಹಿಸಿ ತಿಳಿದುಕೊಳ್ಳುವುದು ಕಲಿಯುವುದು ಬಹಳಷ್ಟು ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕಂಠೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಇಂದನ್ ಬಾಬು ಗಿರೀಶ್ ಹೆಜ್ಜೆಗೆ ಕೃಷ್ಣ ಗುತ್ತಿಗೆದಾರ ರವಿ ಸೇರಿದಂತೆ ಮುಂತಾದವರು ಹಾಜರಿದ್ದರು
