ವಾಲ್ಮೀಕಿ ಮಹರ್ಷಿಗಳ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ದರ್ಶನ್ ಧ್ರುವನಾರಾಯಣ್
ವಿಜಯ ದರ್ಪಣ ನ್ಯೂಸ್…
ವಾಲ್ಮೀಕಿ ಮಹರ್ಷಿಗಳ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ದರ್ಶನ್ ಧ್ರುವನಾರಾಯಣ್

ವಾಲ್ಮೀಕಿ ಮಹರ್ಷಿಗಳ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಶಾಸಕ ದರ್ಶನ್ ಧ್ರುವನಾರಾಯಣ್ ತಾಂಡವಪುರ ಡಿಸೆಂಬರ್ 2 ವಾಲ್ಮೀಕಿ ಮಹರ್ಷಿಗಳ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬ ಯುವಕರು ತಮ್ಮ ಜೀವನದಲ್ಲಿಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಆಗುತ್ತದೆ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು. ಅವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ನಂಜನಗೂಡು ವಿಧಾನಸಭಾ ಕ್ಷೇತ್ರದ ಹುರ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಯುವಕರ ಬಳಗದ ವತಿಯಿಂದ ಅಯೋಜಿಸಿದ ಶ್ರೀ ವಾಲ್ಮೀಕಿ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದಂತಹ ಅಮರ ಕಾವ್ಯವನ್ನು ರಚಿಸಿ ಮಾನವೀಯತೆಯಿಂದ ಬದುಕಲು ದಾರಿ ದೀಪ ತೊರಿಸಿಕೊಟ್ಟ ಒಬ್ಬ ಮಹಾನ್ ವ್ಯಕ್ತಿ.ವಾಲ್ಮೀಕಿ ಅವರು ತೊರಿದ ಅದರ್ಶ ನೀತಿ ಪಾಠಗಳನ್ನು ಯುವ ಜನಾಂಗ ತಮ್ಮ ಬದುಕಿನಲ್ಲಿ ಅಳವಡಿಕೊಂಡಾಗ ನಮ್ಮ ಬದಕು ಅದರ್ಶಮಾಯವಾಗುವ ಜೊತೆಗೆ ವಾಲ್ಮೀಕಿ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ. ಎಂದರು.
ರಾಮಾಯಣ ಮಹಾಕಾವ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿರುತ್ತದೆ ಎಂದರು. ಮಾಜಿ ಶಾಸಕ ಬಿ ಹರ್ಷವರ್ಧನ್ ಮಾತನಾಡಿ ವಾಲ್ಮೀಕಿ ಮಹರ್ಷಿ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ವಿರೋಧಿಸಿ ಇಂದಿನ ಜಾತಿಯನ್ನು ಪ್ರತಿಪಾದಿಸುವವರನ್ನು ಖಂಡಿಸಬೇಕು.ವಾಲ್ಮೀಕಿ ಮಹರ್ಷಿಗಳ ಸಂದೇಶಗಳನ್ನು ಇಡೀ ವಿಶ್ವಕ್ಕೆ ಸಾರುವ ಕೆಲಸ ಮಾಡಬೇಕು ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಶ್ರೇಷ್ಠವಾದ ರಾಮಾಯಣವಾಗಿದೆ ಪ್ರತಿಯೊಬ್ಬರು ರಾಮಾಯಣ ತಿಳಿದು ಬದುಕುವ ಕಾರ್ಯ ಮಾಡಬೇಕಾಗಿದೆ ಎಂದು ಎಂದರು.
ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್ ಮಹದೇವಯ್ಯ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ಹುಟ್ಟಿರುವ ಈ ಪುಣ್ಯ ಭೂಮಿಯಲ್ಲಿ ನಾವುಗಳು ಜನಿಸಿದ್ದು ಹೆಮ್ಮೆ ಪಡುವಂತಹದ್ದು ಮನುಷ್ಯ ಅಳಿದರು ರಾಮಾಯಣ ಮಹಾಭಾರತ ಮಹಾ ಕಾವ್ಯಗಳು ಅಳಿಯುವುದಿಲ್ಲ ಈ ಮಹಾಕಾವ್ಯಗಳು ಸರ್ವಕಾಲಿಕ ಕೃತಿಗಳಾಗಿವೆ ಪ್ರತಿಯೊಬ್ಬರು ರಾಮಾಯಣವನ್ನು ಓದಬೇಕು ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗಳು ಅದರ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು ಬಿಜೆಪಿ ಜಿಲ್ಲಾ ಗ್ರಾಮಾಂತರ ಅದ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ,ಕೆ ಮಾರುತಿ,ಗ್ರಾ ಪಂ ಅದ್ಯಕ್ಷೆ ತಾಯಮ್ಮ,ಕಾಟೂರು ಶಿವರಾಜು, ನಿಂಗರಾಜು,ಶಂಭುಲಿಂಗನಾಯಕ,ಪುಟ್ಟಸ್ವಾಮಿ, ನಾಗೇಂದ್ರ, ಕುಮಾರ್, ದೇಬೂರು ಆಶೋಕ್,ಸೇರಿದಂತೆ ವಾಲ್ಮೀಕಿ ಯುವ ಬಳಗದವರು ಗ್ರಾಮಸ್ಥರು ಹಾಜರಿದ್ದರು ಈ ವೇಳೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ತಾಂಡವಪುರ ಗ್ರಾಮದಲ್ಲಿ ಮಲ್ಲನ ಮೂಲೆ ಮಠದಿಶರಾದ ಶ್ರೀ ಚನ್ನಬಸವ ಸ್ವಾಮೀಜಿಯವರ ಸ್ಮರಣೆ

ತಾಂಡವಪುರ ಡಿಸೆಂಬರ್ 2 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಸಿರುವ ತಾಂಡವಪುರ ಗ್ರಾಮದ ಬಳಿ ಇರುವ ಶ್ರೀ ಕ್ಷೇತ್ರ ಮಲ್ಲನ ಮೂಲೆ ಮಠದ ಮಠಾಧೀಶರಾದ ಶ್ರೀ ಚನ್ನಬಸವ ಸ್ವಾಮೀಜಿ ಅವರು ಇತ್ತೀಚಿಗೆ ನಿಧನ ಹೊಂದಿದ್ದು ತಾಂಡವಪುರ ಗ್ರಾಮದಲ್ಲಿ ದಿವಂಗತ ಚನ್ನಬಸವ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಅವರನ್ನು ಗ್ರಾಮಸ್ಥರು ಸ್ಮರಿಸಿಕೊಂಡರು.
ಶ್ರೀ ಚನ್ನಬಸವ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಚಂದುಳ್ಳಿ ಮಠದ ಶಿವಕುಮಾರ ಸ್ವಾಮೀಜಿ ಅವರು ಪುಷ್ಪ ರಚನೆ ಮಾಡಿ ಮಾತನಾಡುತ್ತಾ ಚೆನ್ನಬಸವ ಸ್ವಾಮೀಜಿಗಳು ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳಿಗೆ ಅನ್ನದಾಸೋಹ ನೀಡುವ ಮೂಲಕ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳಿಗೆ ಚಿರಪರಿತರಾಗಿದ್ದರು ಮಠಕ್ಕೆ ಬಂದಂತ ಭಕ್ತಾದಿಗಳಿಗೆ ಮಠದಿಂದ ಭಕ್ತಾದಿಗಳು ಹಸಿದು ಹೋಗಬಾರದು ಎಂದು ಅನ್ನದಾಸೋಹ ಮಾಡುವ ಮೂಲಕ ಅನ್ನದಾತ ಎಂದು ಭಕ್ತಾದಿಗಳು ಕರೆಯುತ್ತಿದ್ದರು.
ಇವತ್ತು ಶ್ರೀಗಳು ನಮ್ಮನ್ನು ಹಗಲಿ ಶಿವನ ಪಾದವನ್ನು ಸೇರಿದ್ದಾರೆ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಆ ಶಿವನಲ್ಲಿ ಪ್ರಾರ್ಥನೆ ಸಲ್ಲಿಸೋಣ ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಸಾಗೋಣ ಎಂದರು .
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರು ವೀರಶೈವ ಮುಖಂಡರು ವಿವಿಧ ಸಂಘ ಸಂಸ್ಥೆಯ ಮುಖಂಡರುಗಳು ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಿಕೊಂಡರು.
