ಸತ್ಸಂಗದಿಂದ ಜ್ಞಾನವನ್ನು ಪಡೆಯಬೇಕು: ಮಂಜುಳ ವೆಂಕಟೇಶ್
ವಿಜಯ ದರ್ಪಣ ನ್ಯೂಸ್…
ಸತ್ಸಂಗದಿಂದ ಜ್ಞಾನವನ್ನು ಪಡೆಯಬೇಕು: ಮಂಜುಳ ವೆಂಕಟೇಶ್

ವಿಜಯಪುರ: ಪಟ್ಟಣವು ದೇವಾಲಯ ನಗರಿ ಎಂದು ಪ್ರಸಿದ್ದಿ ಪಡೆದಿದ್ದು ಅನೇಕ ಧಾರ್ಮಿಕ ಸತ್ಸಂಗ ಕಾರ್ಯಕ್ರಮಗಳು ಯಶಸ್ವಿಯಾಗಿ ಮೂಡಿ ಬರುತ್ತಿವೆ ಎಂದು ಬಣ್ಣಿಸುತ್ತಾ ಸತ್ಸಂಗದಲ್ಲಿ ಭಾಗವಹಿಸಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಸಿದ್ದಿಯನ್ನು ಪಡೆಯಬೇಕೆಂದು ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳ ವೆಂಕಟೇಶ್ ತಿಳಿಸಿದರು.
ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ದ ಅರ್ಜುನ ನಿರ್ಮಿಸಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀಮದ್ ಭಗವದ್ಗೀತಾ ಪಾರಾಯಣ ಶ್ರೀ ಶ್ರೀ ಶ್ರೀ ಕೈವಾರ ಯೋಗಿನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ ದಾಸರ ಗೀತಾ ತತ್ವಾಮೃತ ರಸಧಾರೆಯ 246ನೇ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆ ಗೋಷ್ಠಿಯ 197ನೇ ಕಾರ್ಯಕ್ರಮವನ್ನು ದೇವಾಲಯ ವ್ಯವಸ್ಥಾಪಕ ಸಮಿತಿಯ ಸಹಕಾರದೊಂದಿಗೆ ಯಶಸ್ವಿಯಾಗಿ ಮೂಡಿ ಬಂದಿತು.
ಈ ಕಾರ್ಯಕ್ರಮದಲ್ಲಿ ಪತಾಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಷ್ಣು ಸಹಸ್ರನಾಮ ಹರಿನಾಮ ಪಠಣೆ ಮಾಡಿದರು
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷ ಜೆ.ಎಸ್. ರಾಮಚಂದ್ರಪ್ಪ ಮಾತನಾಡುತ್ತಾ ನಮ್ಮ ಸತ್ಸಂಗದಲ್ಲಿ ಮಾಸಿಕವಾಗಿ ಬಸವಣ್ಣ ಕನಕದಾಸ ಪುರಂದರದಾಸ ವಾಲ್ಮೀಕಿ ವಿಶ್ವಕರ್ಮ ಜಯಂತಿಗಳನ್ನು ಆಚರಿಸಿಕೊಂಡು ಬರುತ್ತಿದ್ದು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ರಮೇಶ್ ಸ್ವಾಮಿಗಳು, ಸಮಾಜ ಸೇವಕ ವೆಂಕಟೇಶ್, ದೇವನಹಳ್ಳಿ ತಾಲ್ಲೂಕು ಭಾರತೀಯ ಜನತಾ ಪಾರ್ಟಿ ಮಾಜಿ ಪ್ರಧಾನ ಕಾರ್ಯದರ್ಶಿ ಡಿ ಎನ್ ರವಿಕುಮಾರ್, ಕರ್ನಾಟಕ ಸರ್ಕಾರ ಆಹಾರ ಇಲಾಖೆಯ ಶಿರಸ್ತಿದಾರ ಸೂರ್ಯವಂಶಿ, ನಾರಾಯಣಸ್ವಾಮಿ, ಶ್ರೀ ಧರ್ಮರಾಯ ಸ್ವಾಮಿ ದೇವಾಲಯ ಅಧ್ಯಕ್ಷ ಕೆ ವಿ ಮುನಿರಾಜು, ಖಜಾಂಚಿ ತರಕಾರಿ ರಮೇಶ್, ಅಂಜಿನಪ್ಪ, ಶ್ರೀಮತಿ ದೀಪಾ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಐದು ಜನ ಬಡವರಿಗೆ ಕಂಬಳಿ ಮುತ್ತೈದೆಯರಿಗೆ ಸೀರೆ ಕುಬ್ಬಸ ಐದು ಜನ ಮಕ್ಕಳಿಗೆ ಭಗವದ್ಗೀತೆ ಪುಸ್ತಕ ಶಾಲಾ ಬ್ಯಾಗು ಮುತ್ತೈದೆಯರಿಗೆ ಅರಿಶಿನ ಕುಂಕುಮ ಬಳೆ ವಿತರಣೆ ಮಾಡಲಾಯಿತು.
ಸಂಗೀತ ನಿರ್ದೇಶಕ ಎಂ. ವಿ ನಾಯ್ಡು ತಬಲವಾದಕ ಅನಿಲ್ ಕುಮಾರ್ ಸಂಗೀತ ಸಂಯೋಜನೆಗಳೊಂದಿಗೆ ಟಿ. ಮಹಾತ್ಮಾಂಜನೇಯ, ನರಸಿಂಹಪ್ಪ, ಶ್ರೀಮತಿ ಸೀತಾಲಕ್ಷ್ಮಿ ಭಾಸ್ಕರ್, ಶ್ರೀಮತಿ ರಾಧಾಮಣಿ ರವರು ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
