ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಪೀಳಿಗೆಯು ನಮ್ಮ ಸಂಸ್ಕೃತಿಯನ್ನು  ನಿರ್ಲಕ್ಷಿಸುತ್ತಿದ್ದಾರೆ

ವಿಜಯ ದರ್ಪಣ ನ್ಯೂಸ್…

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಪೀಳಿಗೆಯು ನಮ್ಮ ಸಂಸ್ಕೃತಿಯನ್ನು  ನಿರ್ಲಕ್ಷಿಸುತ್ತಿದ್ದಾರೆ

ಶಿಡ್ಲಘಟ್ಟ : ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ನಮ್ಮ ಯುವ ಪೀಳಿಗೆಯು ನಮ್ಮ ಸಂಸ್ಕೃತಿ, ಹಬ್ಬ ಹರಿದಿನಗಳನ್ನು ನಿರ್ಲಕ್ಷಿಸುತ್ತಿದ್ದಾರೆ ನಮ್ಮ ಹಿರಿಯರು ಹಾಗೂ ಸಂಪ್ರದಾಯವನ್ನು ಗೌರವಿಸುವ ಮನೋಭಾವ ಎಲ್ಲೋ ಒಂದಷ್ಟು ಕಡಿಮೆ ಆಗುತ್ತಿದೆ ಎನ್ನುವುದನ್ನು ಸಮಾಜದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಘಟನೆಗಳು ಬಿಂಬಿಸುತ್ತಿವೆ ಎಂದು ಶ್ರೀಧರಾಚಾರಿ ತಿಳಿಸಿದರು.

ಗೌರಿಬಿದನೂರಿನ ತೊಂಡೆಬಾವಿಯಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಹೊರಟ 25 ನೇ ವರ್ಷದ ಪಾದಯಾತ್ರಿಗಳ ತಂಡದ ನೇತೃತ್ವ ವಹಿಸಿ ಮಾರ್ಗಮಧ್ಯೆ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೈ. ಹುಣಸೇನಹಳ್ಳಿ ಯಲ್ಲಿ ಭಕ್ತರನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಯುವ ಪೀಳಿಗೆಯು ನಮ್ಮ ಸಂಸ್ಕೃತಿ, ಆಚಾರ ವಿಚಾರ, ಹಬ್ಬ ಹರಿದಿನಗಳು ಹಾಗೂ ಸಂಪ್ರದಾಯಗಳನ್ನು ಪಾಲಿಸ ಬೇಕು ಆ ಮೂಲಕ ಸುಸಂಸ್ಕೃತ ಬದುಕು ನಮ್ಮದಾಗಬೇಕು ಎಂದು ತಿರುಪತಿಯ ಪಾದಯಾತ್ರಿ ,ತೊಂಡೆಬಾವಿಯಿಂದ ಆರಂಭಿಸಿರುವ ಪಾದಯಾತ್ರೆಯಲ್ಲಿ ಮಂಚೇನಹಳ್ಳಿ, ತೊಂಡೆಬಾವಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸುಮಾರು 150 ಕ್ಕೂ ಹೆಚ್ಚು ಭಕ್ತರು ಕಾಲ್ನಡಿಗೆ ಮೂಲಕ ತಿರುಪತಿಗೆ ತೆರಳಿ, ಡಿ.23 ರಂದು ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ ಎಂದರು.

ದಾರಿಯುದ್ದಕ್ಕೂ ತಿಮ್ಮಪ್ಪನ ನಾಮಸ್ಮರಣೆ ಮಾಡುತ್ತಾ, ಮಾರ್ಗಮಧ್ಯೆ ಅಲ್ಲಲ್ಲಿ ವಿರಮಿಸಿ, ಸ್ಥಳೀಯರೊಂದಿಗೆ ಧಾರ್ಮಿಕ ವಿಚಾರ ಚರ್ಚಿಸಿ ಮುಂದಕ್ಕೆ ಸಾಗಲಿದ್ದಾರೆ. ಈ ಬಾರಿ ಪಾದಯಾತ್ರೆಯಲ್ಲಿ ವಿಶೇಷವಾಗಿ ವೃದ್ಧರು ಭಾಗವಹಿಸುತ್ತಿರುವುದರಿಂದ ಮೊದಲ ಬಾರಿಗೆ ಅಂಬುಲೆನ್ಸ್ ಸಹ ಪಾದಯಾತ್ರೆಕರ ಜೊತೆಯಲ್ಲಿ ಸಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀಧರಾಚಾರಿ, ಮಾರ್ಕೆಟ್ ಮೋಹನ್, ವಿಜಯಶೇಖರ್ ರೆಡ್ಡಿ,ಬಚ್ಚಹಳ್ಳಿ, ವೆಂಕಟೇಶ,ಮುರಳಿ, ಕೃಷ್ಣಮೂರ್ತಿ, ಸುಧಾಕರ್ ರೆಡ್ಡಿ,ಸತೀಶ್, ನರಸಿಂಹಮೂರ್ತಿ, ಸಂತೊಷ್,ಲಕ್ಷ್ಮೀಪತಿ, ಆದಿನಾರಯಣಪ್ಪ,ಅಶೋಕ್, ಶ್ರೀನಿವಾಸರೆಡ್ಡಿ, ಸೇರಿದಂತೆ 150 ಕ್ಕೂ ಹೆಚ್ಚು ಮಂದಿ ಕಾಲ್ನಡಿಗೆಯಲ್ಲಿ ತಿರುಪತಿಯತ್ತ ಸಾಗಿದರು.