ಖಾದ್ರಿ ಶಾಮಣ್ಣನವರ ಆದರ್ಶಗಳನ್ನು ಪಾಲಿಸಬೇಕು: ಚಂದ್ರಶೇಖರ್ ಹಡಪದ್
ವಿಜಯ ದರ್ಪಣ ನ್ಯೂಸ್…
ಖಾದ್ರಿ ಶಾಮಣ್ಣನವರ ಆದರ್ಶಗಳನ್ನು ಪಾಲಿಸಬೇಕು: ಚಂದ್ರಶೇಖರ್ ಹಡಪದ್

ವಿಜಯಪುರ : ಸ್ವಾತಂತ್ರ್ಯ, ಸಮಾನತೆ, ಗಾಂಧಿವಾದ, ಸರ್ವೋದಯ ತತ್ವಗಳ ಸಾಕಾರ ಮೂರ್ತಿಯಂತಿದ್ದ ಬಹುಮುಖ ವ್ಯಕ್ತಿತ್ವದ ಖಾದ್ರಿ ಶಾಮಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ, ಕರ್ನಾಟಕದ ಏಕೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದಿದ್ದರು. ಕಾಗೋಡು ಸತ್ಯಾಗ್ರಹ, ಗೋಕಾಕ ಚಳವಳಿಗಳ ಪ್ರತಿಬಿಂಬದಂತಿದ್ದ ಖಾದ್ರಿ ಶಾಮಣ್ಣನವರೆಂದು ಅಖಿಲ ಕರ್ನಾಟಕ ಮಿತ್ರ ಸಂಘದ ಚಿ.ಮಾ.ಸುಧಾಕರ ಪ್ರಸ್ತಾವಿಕವಾಗಿ ನುಡಿದರು.
ವಿಜಯಪುರ ಪಟ್ಟಣದ ಕೇಶವ ಸ್ವಾಮಿ ಗುಡಿ ಬೀದಿಯಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಖಾದ್ರಿ ಶಾಮಣ್ಣನವರ ಶತಮಾನೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ಖಾದ್ರಿ ಶಾಮಣ್ಣನವರ ಬಗ್ಗೆ ಉಪನ್ಯಾಸ ನೀಡುತ್ತಾ ಮೈಸೂರು ಜಿಲ್ಲೆಯ ಮೇಲುಕೋಟೆಯಲ್ಲಿ 1945ರ ಜನವರಿ 18ರಂದು ಜನಿಸಿದ್ದ ಅವರು ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಿಂದ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಅವರು ನಂತರ 1966ರಲ್ಲಿ ಭಾರತೀಯ ವಾರ್ತಾ ಸೇವೆ ಸೇರಿ, ಆಕಾಶವಾಣಿ¬, ದೂರದರ್ಶನ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಯೋಜನಾ (ಮಾಸಿಕ), ಕೇಂದ್ರ ಸರ್ಕಾರದ ಪ್ರಕಾಶನ ವಿಭಾಗ, ವಾರ್ತಾ ಶಾಖೆ, ಚಲನಚಿತ್ರ ಪ್ರಮಾಣೀಕರಣ ಸಂಸ್ಥೆಗಳಲ್ಲಿ ಕನ್ನಡಪ್ರಭ ಪ್ರಜಾಮತ ದಲ್ಲಿ ಉತ್ತಮವಾದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಘನ ಸರ್ಕಾರವು ಖಾದ್ರಿ ಶಾಮಣ್ಣನವರ ಸ್ಮರಣಾರ್ಥವಾಗಿ ಪ್ರತಿಕೋದ್ಯಮಿಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.

ಮುಖ್ಯೋಪಾಧ್ಯಾಯರಾದ ಮನೋಹರ್ ಮಾತನಾಡುತ್ತಾಖಾದ್ರಿ ಶಾಮಣ್ಣ ಕಂದಾಚಾರದ ವಿರುದ್ಧ, ಸಂಪ್ರದಾಯದ ವಿರುದ್ಧ ಬಂಡೆದ್ದರು. ಬಲಾತ್ಕಾರವಾಗಿ ಉಪನಯನ ಮಾಡಿದಾಗ, ಜನಿವಾರ ಕಿತ್ತೆಸದು ಹೊರಬಂದರು. ಅವರೊಬ್ಬ ಹುಟ್ಟಾ ಸಮಾಜವಾದಿ. ಸ್ವಾಭಾವಿಕವಾಗಿಯೇ ಅಂದಿನ ಸಮಾಜವಾದಿ ಚಳವಳಿಯ ಹಿರಿಯರಾದ ಜಯಪ್ರಕಾಶ್ ನಾರಾಯಣ್, ಲೋಹಿಯಾ ಕಡೆಗೆ ಹೆಚ್ಚು ಆಕರ್ಷಿತರಾದರು
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿಶ್ವನಾಥ್ ಮಾಮ ಗೌರವ ಕಾರ್ಯದರ್ಶಿ ಮುನಿರಾಜು ಛಾಯಾಗ್ರಹಕ ಮುರುಳಿ ಮಗು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
