ಮಾವು ಬೆಳೆ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮು: ಸಸ್ಯ ಸಂರಕ್ಷಣಾ ಕ್ರಮ
ವಿಜಯ ದರ್ಪಣ ನ್ಯೂಸ್….
ಮಾವು ಬೆಳೆ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮು: ಸಸ್ಯ ಸಂರಕ್ಷಣಾ ಕ್ರಮ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ ಜಿಲ್ಲೆ ಡಿ.29:
ಪ್ರಸಕ್ತ ಸಾಲಿನ ಮಾವು ಬೆಳೆಯಲ್ಲಿ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮಿನಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಕ್ರಮಗಳು, ಔಷಧಿ ಸಿಂಪರಣೆ ಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಈ ಕ್ರಮಗಳನ್ನು ರೈತರು ಅನುಸರಿಸುವ ಮೂಲಕ ಮಾವು ಬೆಳೆ ಸಂರಕ್ಷಣೆಗೆ ಸಹಕಾರಿ ಆಗಲಿದೆ.
ಪ್ರಥಮ ಸಿಂಪರಣೆ:
ಹೂ ಬಿಡುವ ನಿಕಟ ಪೂರ್ವ ಹಂತ ಮತ್ತು ಹೂತೆನೆ ಹೊರಹೊಮ್ಮುವ ಹಂತದಲ್ಲಿ ಔಷಧಗಳ ಸಿಂಪರಣೆಯಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿಕಚ್ಚುವಿಕೆ ಕುಂಠಿತಗೊಂಡು ಇಳುವರಿಗೆ ತೀವ್ರ ಧಕ್ಕೆಯಾಗುತ್ತದೆ.
ಸಿಂಪರಣೆ ಮಾಡಬೇಕದ ಔಷಧಿಗಳು:-ಥೈಯೋಮೆಥೋಕ್ಸಾಮ್ (Thiamethoxam) 25 WG – 0.25 ಗ್ರಾಂ/ಲೀ ಮತ್ತು ನೀರಿನಲ್ಲಿ ಕರಗುವ ಗಂಧಕ (Wettable Sulphur) 80 WP : 3 ಗ್ರಾಂ/ಲೀ ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ (Lambdacyhalothrin) 5 EC:0.6 ಮಿ.ಲಿ./ಲೀ ಮತ್ತು ನೀರಿನಲ್ಲಿ ಕರಗುವ ಗಂಧಕ (Wettable Sulphur) 80 WP : 3 ಗ್ರಾಂ./ಲೀ.
ಎರಡನೇ ಸಿಂಪರಣೆ:
ಈ ಅವಧಿಯಲ್ಲಿ ಮುಖ್ಯವಾಗಿ ಭಾದಿಸುವ ಕೀಟಗಳಲ್ಲಿ ಜಿಗಿಹುಳು, ಥ್ರಿಪ್ಸ್, ಮೈಟ್ಸ್, ಹೂತೆನೆ ಕ್ಯಾಟರ್ ಪಿಲ್ಲರ್ ಇತ್ಯಾದಿಗಳು ಮತ್ತು ರೋಗಗಳಲ್ಲಿ ಪ್ರಮುಖವಾದವುಗಳು ಹೂತೆನೆ ಒಣಗುವ / ಕಪ್ಪಾಗುವ (Blossom blight) ರೋಗ, ಎಲೆಚಿಪ್ಪು ರೋಗ, ಬೂದಿ ರೋಗ ಇತ್ಯಾದಿಗಳು. ಈ ಹಂತದಲ್ಲಿ ಹೂತೆನೆ ಮತ್ತು ಹೂಗಳನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಂಡರೆ ಕಾಯಿ ಕಚ್ಚುವ ಪ್ರಮಾಣ ಮತ್ತು ನಂತರದ ಇಳುವರಿ ಹೆಚಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ಶಿಫಾರಸ್ಸು ಮಾಡಿದ ಸಿಂಪರಣಾ ಕ್ರಮಗಳನ್ನು ಅನುಸರಿಸುವುದು.
ಸಿಂಪರಣೆ ಮಾಡಬೇಕದ ಔಷಧಿಗಳು:-ಹೂತೆನೆ ಹೊರಡುವ ಹಾಗೂ ಹೂ ಅರಳುವ ಹಂತದಲ್ಲಿ ಡೆಲ್ಟಾಮೆಥ್ರಿನ್ (Deltamethrin) 2.8EC-1.0ಮಿ.ಲಿ/ಲೀ ಮತ್ತು ಹೆಕ್ಸಕೊನಜೋಲ್(Hexaconazole) 5% EC – 1.0ಮಿ.ಲಿ/ಲೀ ಅಥವಾ
ಅಜಾದಿರ್ಯೆಕ್ಟಿನ್ (Azadirachtin) 10 ̧000 PPM/1% :1.0ಮಿ.ಲಿ/ಲೀ ಮತ್ತು ಡೈಫೆಂಕೊನಜಾಲ್ (Difenconazole) 25 EC : 0.5 ಮಿ.ಲಿ./ಲೀ.
ಮೂರನೇ ಸಿಂಪರಣೆ:
ಹೂ ಸಂಪೂರ್ಣ ಅರಳಿದ ಮತ್ತು ಪರಾಗಸ್ಪರ್ಶ ಹಂತ, ಕಾಯಿ ಕಚ್ಚುವ ಹಂತದಲ್ಲಿ ಸಿಂಪರಣೆ ಮಾಡಬೇಕದ ಔಷಧಿಗಳು:-ಲಾಂಬ್ಡಾಸೈಹ್ಯಾಲೋಥ್ರೀನ್ (Lambda cyhalothrin) 5 EC-0.6 ಮಿ.ಲಿ/ಲೀ ಮತ್ತು ಕಾರ್ಬನ್ ಡೈಜಿಂ 12%+ಮ್ಯಾಂಕೋಜಬ್ 63% (Carbendazim 12%+ Mancozeb 63%) WP-2.0 ಗ್ರಾಂ/ಲೀ ಅಥವಾ
ಟಾಲ್ಫೆನ್ಫೈರಾಡ್ (Tolfenpyrad) 15 EC-1.0 ಮಿ.ಲಿ/ಲೀ ಮತ್ತು ಕಾರ್ಬನ್ಡೈಜಿಂ 12%+ಮ್ಯಾಂಕೋಜಬ್ 63% (Carbendazim 12%+ Mancozeb 63%) WP -2.0 ಗ್ರಾಂ/ಲೀ. ಮೇಲಿನ ಅನುಸರಣಾ ಕ್ರಮಗಳನ್ನು ಪಾಲಿಸುವುದರಿಂದ ಈಗಾಗಲೇ ತಿಳಿಸಿರುವ ಕೀಟ ಮತ್ತು ರೋಗಗಳಲ್ಲದೇ ಹೂ ಬಿಡುವ ಮತ್ತು ಕಾಯಿ ಕಚ್ಚುವ ಅವಧಿಯಲ್ಲಿ ಕಾಣಬರುವ ಓಟೆ ಕೊರಕ, ಊಜುಹುಳು, ಕಾಡಿಗೆ ರೋಗ, ಚಿಬ್ಬು ರೋಗಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು.
ವಿಶೇಷ ಸೂಚನೆ:
ಮೂರು ಹಂತದ ಪ್ರತಿ ಲೀಟರ್ ಸಿಂಪರಣಾ ದ್ರಾವಣಗಳಿಗೆ 0.5 ಮಿ.ಲೀ ಶಾಂಪೂ ಅಥವಾ ಅಂಟನ್ನು (Sticker) ಬೆರೆಸಿ ಸಿಂಪರಿಸಬೇಕು, ಇದರಿಂದ ಸಿಂಪಡಿಸಿದ ದ್ರಾವಣ ಎಲೆ/ ಹೂ ಗಳಿಗೆ ಚೆನ್ನಾಗಿ ಅಂಟಿಕೊಳ್ಳುತ್ತದೆ.
ಸಾಮಾನ್ಯವಾಗಿ ಹೂ ಬಿಟ್ಟಾಗ ಮತ್ತು ಪರಾಗಸ್ಪರ್ಷ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು ಏಕೆಂದರೆ, ಗಂಧಕವು ಪರಾಗಸ್ಪರ್ಷ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂಗಳು ಮತ್ತು ಎಳೆಯ ಕಚ್ಚಿದ ಕಾಯಿಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಆದಾಗ್ಯೂ ಪರಿಸ್ಥಿಯ ಅನಿವಾರ್ಯತೆಯನ್ನು ಗಮನಿಸಿ ಸದರಿ ಶಿಫಾರಸ್ಸು ಮಾಡಿದ ಸಿಂಪರಣಾ ಕ್ರಮಗಳನ್ನು ಅನುಸರಿಸಬಹುದಾಗಿದೆ.
ಒಂದೇ ರೀತಿಯ ಕೀಟ/ರೋಗ ನಾಶಕಗಳನ್ನು ಪದೇ ಪದೇ ಪುನರಾವರ್ತಿಸಿದಲ್ಲಿ ಕೀಟ/ರೋಗಕಾರಕ ಸೂಕ್ಷ್ಮ ಜೀವಿಗಳು ಕೀಟ/ರೋಗ ನಾಶಕಗಳು ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಆದುದರಿಂದ ಅನುಕ್ರಮವಾಗಿ ಕೀಟ/ರೋಗ ನಾಶಕಗಳ ಬದಲಾವಣೆ ಮಾಡುವುದು ಅವಶ್ಯಕ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಮಲ್ಲಿಕಾರ್ಜುನ ಬಾಬು ಬಿ.ಎಂ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೇವನಹಳ್ಳಿ-(ಮೊ)9480461234 .
ಶಶಿಕಲಾ ಟಿ.ಆರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೊಡ್ಡಬಳ್ಳಾಪುರ- (ಮೊ) 9482129648.
ದೀಪಾ ಎಂ.ಎಸ್ , ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊಸಕೋಟೆ- (ಮೊ) 9880210892.
ಹರೀಶ್ ಆರ್. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ನೆಲಮಂಗಲ (ಮೊ) 9880461607.
ಕೋಟ್
ಸಾಮಾನ್ಯವಾಗಿ ಹೂ ಬಿಡುವ ಹಂತದಲ್ಲಿ ಯಾವುದೇ ಕೀಟನಾಶಕಗಳನ್ನು ಉಪಯೋಗಿಸಬಾರದು ಕಾರಣ ಪರಾಗಸ್ಪರ್ಶ ಮಾಡುವ ಕೀಟಗಳಾದ ಜೇನು, ಇತರೆ ಉಪಯುಕ್ತ ಕೀಟಗಳು ನಾಶವಾಗುವ ಸಾಧ್ಯತೆಯಿರುತ್ತದೆ. ಆದಾಗ್ಯೂ ಪರಿಸ್ಥಿತಿಯ ಅನಿವಾರ್ಯತೆಯನ್ನು ಗಮನಿಸಿ ಶಿಫಾರಸ್ಸು ಮಾಡಿದ ಸಿಂಪರಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆ, ಜಂಟಿ ನಿರ್ದೇಶಕ ಗುಣವಂತ ತಿಳಿಸಿದ್ದಾರೆ .
