ನಗರಸಭೆ ಪೌರಾಯುಕ್ತೆ ಅಮೃತ ಗೌಡ ರವರಿಗೆ ಬಾಗೀನ ನೀಡಿ ಧೈರ್ಯ ತುಂಬಿದ ಕರವೇ ಸಿಂಹ ಸೇನೆ ಪದಾಕಾರಿಗಳು
ವಿಜಯ ದರ್ಪಣ ನ್ಯೂಸ್….
ನಗರಸಭೆ ಪೌರಾಯುಕ್ತೆ ಅಮೃತ ಗೌಡ ರವರಿಗೆ ಬಾಗೀನ ನೀಡಿ ಧೈರ್ಯ ತುಂಬಿದ ಕರವೇ ಸಿಂಹ ಸೇನೆ ಪದಾಕಾರಿಗಳು

ಶಿಡ್ಲಘಟ್ಟ : ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಜಿಲ್ಲಾ ಕಾರ್ಯಕರ್ತರು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಅರಿಶಿನ ಕುಂಕುಮ ಫಲ ತಾಂಬೂಲ ರೇಷ್ಮೆ ಸೀರೆ ನೀಡಿ ಸಾಂತ್ವನ ಹೇಳಿದರಲ್ಲದೆ ನಾವೆಲ್ಲರೂ ನಿಮ್ಮ ಜತೆಗಿದ್ದೇವೆ ಎಂದು ಧೈರ್ಯ ತುಂಬಿದರು.
ಕರವೇ ಸಿಂಹ ಸೇನೆ ಅಧ್ಯಕ್ಷ ಶ್ರೀನಿವಾಸ ಗೌಡ ಹಾಗೂ ಮಹಿಳಾ ಕಾರ್ಯಕರ್ತರು ನಗರಸಭೆ ಕಚೇರಿಗೆ ಆಗಮಿಸಿ ಪೌರಾಯುಕ್ತೆ ಜಿ.ಅಮೃತ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಯಾವುದಕ್ಕೂ ಎದೆಗುಂದಬೇಡಿ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬಿದರು.
ಅರಿಶಿಣ ಕುಂಕುಮ ಸ್ವೀಕರಿಸಿದ ಜಿ.ಅಮೃತ ಅವರು ಕೆಲ ಕಾಲ ಭಾವೋಧ್ವೇಗಕ್ಕೆ ಒಳಗಾದರು, ಕಣ್ಣಂಚಿನಲ್ಲಿ ಕಣ್ಣೀರು ಜಿನುಗಿತು. ನಿಮ್ಮೆಲ್ಲರ ಸಹಕಾರ, ನೀಡುತ್ತಿರುವ ಧೈರ್ಯದಿಂದ ನಾನು ಮತ್ತು ನಮ್ಮ ಸಿಬ್ಬಂದಿಯಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮನೋಸ್ಥೈರ್ಯ ಬಂದಿದೆ ಎಂದು ನುಡಿದರು.
