--Ads--

ಶ್ರೀರಂಗಪಟ್ಟಣ ದಸರಾ: ಆಚರಣೆಗೆ ಸಿದ್ಧತೆ, ಆಕರ್ಷಕ ಲೋಗೋ ಬಿಡುಗಡೆ

On: September 26, 2026 1:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಐತಿಹಾಸಿಕ 416ನೇ ಶ್ರೀರಂಗಪಟ್ಟಣ ದಸರಾ: ಅ. 15ರಂದು ಉದ್ಘಾಟನೆ, 11ರಿಂದ ಕಾವೇರಿ ಆರತಿ

ಶ್ರೀರಂಗಪಟ್ಟಣ ದಸರಾ: ಆಚರಣೆಗೆ ಸಿದ್ಧತೆ, ಆಕರ್ಷಕ ಲೋಗೋ ಬಿಡುಗಡೆ

ಮಂಡ್ಯ ಸೆ.26 :ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಅಕ್ಟೋಬರ್ 15ರಂದು ನಟ ವಿ.ರವಿಚಂದ್ರನ್ ಅವರು ಉದ್ಘಾಟಿಸಲಿದ್ದು, ಅ.11ರಂದು ಕೆಆರ್‌ಎಸ್‌ ಜಲಾಶಯದ ಸಮೀಪ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀರಂಗಪಟ್ಟಣ ದಸರಾವು ಈ ಬಾರಿಯೂ ಸಂಪ್ರದಾಯಬದ್ಧವಾಗಿ ನಡೆಯಲಿದೆ ಎಂದರು.

ಶ್ರೀರಂಗಪಟ್ಟಣ ದಸರಾ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದರೂ, ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಗಳಲ್ಲಿ ಯಾವುದೇ ಕಡಿತ ಮಾಡುವುದಿಲ್ಲ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಮೈಸೂರು ಮಾದರಿಯಲ್ಲೇ ದಸರಾ ಆರಂಭಕ್ಕೂ ಎರಡು ದಿನ ಮುನ್ನ ‘ಯುವ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 12 ಮತ್ತು 13 ರಂದು ಯುವ ಸಂಭ್ರಮ ಹಾಗೂ ಅಕ್ಟೋಬರ್ 15 ರಿಂದ 18ರ ವರೆಗೆ ದಸರಾ ಮಹೋತ್ಸವ ನಡೆಯಲಿದೆ ಎಂದು ವಿವರಿಸಿದರು.

ಕಾವೇರಿ ಆರತಿ ಆರು ದಿನ
ಶ್ರೀರಂಗಪಟ್ಟಣದ ಕೆಆರ್‌ಎಸ್‌ ಜಲಾಶಯದ ಬಳಿ ಅಕ್ಟೋಬರ್ 11ರಿಂದ ಆರಂಭವಾಗಲಿರುವ ಕಾವೇರಿ ಆರತಿಯನ್ನು ಮುಖ್ಯಮಂತ್ರಿಗಳೇ ಉದ್ಘಾಟಿಸಲಿದ್ದು, ಒಟ್ಟು 6 ದಿನಗಳ ಕಾಲ ಕಾರ್ಯಕ್ರಮ ಜರುಗಲಿದೆ.
ಕಳೆದ ವರ್ಷ ಮೊದಲ ಬಾರಿಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆರಂಭಿಸಲಾಗಿತ್ತು. ಇಂತಹ ಸಾಂಪ್ರದಾಯಿಕ ಆಚರಣೆಗಳು ನಿಲ್ಲಬಾರದು ಹಾಗೂ ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವರು ವಿವರಿಸಿದರು.

ಸುದ್ದಿಗೋಷ್ಠಿಗೂ ಮುನ್ನ ಸಚಿವರೊಟ್ಟಿಗೆ ವೇದಿಕೆ ಗಣ್ಯರು ಶ್ರೀರಂಗಪಟ್ಟಣ ದಸರಾದ ಲೋಗೋ ಬಿಡುಗಡೆಗೊಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಡ್ಯ ಶಾಸಕ ರವಿ ಗಾಣಿಗ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ, ಜಿ.ಪಂ. ಸಿಇಒ ನಂದಿನಿ ಇತರರಿದ್ದರು.

ಲೋಗೋ ವಿಶೇಷಗಳೇನು?
ಲೋಗೋದ ಮೇಲ್ಭಾಗದಲ್ಲಿ ಭವ್ಯವಾದ, ಚಿನ್ನದ ಬಣ್ಣದ ಕಲಾತ್ಮಕ ಗೋಪುರವಿದೆ. ಇದು ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.ಗೋಪುರದ ಕೆಳಗೆ ಮತ್ತು ವೃತ್ತದ ಮೇಲ್ಭಾಗದಲ್ಲಿ “416ನೇ” ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಇದು ಶ್ರೀರಂಗಪಟ್ಟಣ ದಸರಾ ಉತ್ಸವವು ತನ್ನ 416ನೇ ವರ್ಷದ ಐತಿಹಾಸಿಕ ಆಚರಣೆಯಲ್ಲಿದೆ ಎಂಬುದನ್ನು ಸೂಚಿಸುತ್ತದೆ.

ಲೋಗೋದ ಮಧ್ಯಭಾಗದಲ್ಲಿ ಕಡು ಹಸಿರು ಬಣ್ಣದ ಹಿನ್ನೆಲೆಯಿರುವ ವೃತ್ತಾಕಾರದ ವಿನ್ಯಾಸವಿದೆ. ಇದರೊಳಗೆ ಚಿನ್ನದ ಬಣ್ಣದಲ್ಲಿ ಸುಂದರವಾಗಿ ಅಲಂಕೃತಗೊಂಡ ಆನೆ ಮತ್ತು ಅದರ ಮೇಲಿರುವ ಜಂಬೂಸವಾರಿ ಅಂಬಾರಿಯ ಚಿತ್ರಣವಿದೆ. ಆನೆಯನ್ನು ಮುನ್ನಡೆಸುತ್ತಿರುವ ಮಾವುತನನ್ನೂ ಇದರಲ್ಲಿ ಕಾಣಬಹುದು.

ಕೇಂದ್ರ ವೃತ್ತದ ಸುತ್ತಲೂ ಕೆಂಪು ಮತ್ತು ಚಿನ್ನದ ಬಣ್ಣದ ಸಾಂಪ್ರದಾಯಿಕ ವಿನ್ಯಾಸದ ಅಂಚು (Border) ಇದೆ. ಇದರ ಎರಡೂ ಬದಿಗಳಲ್ಲಿ ರಾಜಮನೆತನದ ಶೈಲಿಯ ಚಿನ್ನದ ಕಂಬಗಳು/ಕಳಸಗಳು ಮತ್ತು ಹಸಿರು ಎಲೆಗಳ ಕಲಾಕೃತಿಯನ್ನು ಅಳವಡಿಸಲಾಗಿದೆ.

ಕೆಳಭಾಗದಲ್ಲಿ ಕಡು ಕೆಂಪು (ಮರೂನ್) ಬಣ್ಣದ ಆಕರ್ಷಕ ನಾಮಫಲಕವಿದೆ. ಇದರಲ್ಲಿ ಮೇಲ್ಭಾಗದಲ್ಲಿ “ಶ್ರೀರಂಗಪಟ್ಟಣ” ಎಂದು ಬಿಳಿ ಅಕ್ಷರಗಳಲ್ಲಿ ಬರೆಯಲಾಗಿದೆ. ಮಧ್ಯದಲ್ಲಿ “ದಸರಾ” ಎಂಬ ಪದವನ್ನು ಬಹಳ ಎದ್ದು ಕಾಣುವಂತೆ 3D ಶೈಲಿಯ ದೊಡ್ಡ ಚಿನ್ನದ ಅಕ್ಷರಗಳಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ಲೋಗೋವು ಶ್ರೀರಂಗಪಟ್ಟಣದ ಸಾಂಸ್ಕೃತಿಕ ಪರಂಪರೆ, ರಾಜಮನೆತನದ ಗತ್ತು ಮತ್ತು ನಾಡಹಬ್ಬ ದಸರಾದ ವೈಭವವನ್ನು ಚಿನ್ನ, ಕಡು ಹಸಿರು ಮತ್ತು ಕೆಂಪು ಬಣ್ಣಗಳ ಸಂಯೋಜನೆಗೊಂಡಿದೆ.

WhatsApp

Join Now

Telegram

Join Now

Instagram

Join Now