--Ads--

ಮಹಾಲಯ ಅಮಾವಾಸ್ಯೆ ಪಿತೃಸ್ಮರಣೆಯ ಭಾವಗೀತೆ

On: October 10, 2026 7:07 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಹಾಲಯ ಅಮಾವಾಸ್ಯೆ
ಪಿತೃಸ್ಮರಣೆಯ ಭಾವಗೀತೆ

ಮಣ್ಣಲ್ಲಿ ಬೆರೆತರೂ ಮಾಸದ ನೆನಪು
ಮನದಲ್ಲಿ ಉಳಿದಿಹುದು ಪ್ರೀತಿಯ ಒಲುಮೆ
ಬದುಕಿಗೆ ಬೆಳಕಾದ ಹಿರಿಯರ ತ್ಯಾಗ,
ಬಾಳಿನ ದಾರಿಯಲಿ ಅವರದೇ ಭಾಗ
ತುತ್ತನುಣಿಸಿದ ಆ ಮಮತೆಯ ಕೈ
ಬದುಕನು ಕಲಿಸಿದ ಆ ಪ್ರೀತಿಯ ತಾಯಿ;
ಕಾಲವು ಕರೆದರೂ ಅಳಿಯದ ಬಾಂಧವ್ಯ
ನೆನಪಲಿ ಉಳಿಯುವುದು ಅವರ ದಿವ್ಯತ್ವ
ತರ್ಪಣದ ಜಲದಲ್ಲಿ ಕೃತಜ್ಞತೆಯ ಭಾವ
ಪಿತೃಗಳ ಸ್ಮರಣೆಯೇ ಸಂಸ್ಕೃತಿಯ ವೈಭವ
ಹಿರಿಯರ ಹಾದಿಯಲಿ ನಡೆಯುವ ಸಂಕಲ್ಪ
ಅವರ ನೆನಪಿನಲಿ ಬದುಕಿಗೆ ಸಾರ್ಥಕ್ಯ
ಪೂರ್ವಜರ ನೆನಪಿಗೆ ಭಕ್ತಿಯ ನಮನ
ಅವರ ತ್ಯಾಗಕ್ಕೆ ಹೃದಯದ ವಂದನ
ದೇಹವು ಮಣ್ಣಾದರೂ ಪ್ರೀತಿಯು ಅಮರ
ಹಿರಿಯರ ಸಂಸ್ಕಾರವೇ ಬದುಕಿಗೆ ಆಧಾರ
✍🏽 ಎಂ ಎಂ ದಾವೂದ್

WhatsApp

Join Now

Telegram

Join Now

Instagram

Join Now