ವಿಜಯ ದರ್ಪಣ ನ್ಯೂಸ್……..
ಐದು ಗ್ಯಾರಂಟಿ ಆರನೇ ಗ್ಯಾರಂಟಿ ಬೆಲೆ ಏರಿಕೆ

*ಐದು ಗ್ಯಾರಂಟಿ ಕೊಟ್ಟರು
*ಆರು ದಿಕ್ಕಿಗೂ ಪ್ರಚಾರ ಮಾಡಿದರು
*ನಂದಿನಿ ಹಾಲಿನ ದರ ಏರಿಸಿ
*ಚಹಾ ಕುಡಿಯುವ ಆಸೆಗೂ ನೀರು ಸುರಿದರು
*ಹೆಂಡತಿಗೆ ಬಸ್ಸು ಫ್ರೀ ಅಂತೆ
*ಗಂಡನಿಗೆ ಟಿಕೆಟ್ ದರ ಏರಿಕೆ ಅಂತೆ
*ಹೆಂಡತಿ ಕೇಳಿದಳು – ಬಸ್ಸಿಗೆ ದುಡ್ಡಿಲ್ಲವಲ್ಲ?
*ಗಂಡ ಹೇಳಿದ ನಿನ್ನ ಪ್ರಯಾಣ ಫ್ರೀ ನನ್ನ ಜೇಬಿಗೆ ಮಾತ್ರ ಸ್ವಾತಂತ್ರ್ಯವಿಲ್ಲವಲ್ಲ
*ರೈತನ ಹೆಸರಿನಲ್ಲಿ ಹಣದ ಘೋಷಣೆ
*ರೈತನ ಮಗನ ಜೇಬಿಗೆ ಬೆಲೆ ಏರಿಕೆಯ ಶೋಷಣೆ
*ಹಾಲು ಕೊಡುವ ರೈತನಿಗೂ ಲೆಕ್ಕವಿಲ್ಲ
*ಹಾಲು ಕೊಳ್ಳುವ ಗ್ರಾಹಕನಿಗೂ ನೆಮ್ಮದಿಯಿಲ್ಲ
*ಗ್ಯಾರಂಟಿ ಕೊಟ್ಟಾಗ ಚಪ್ಪಾಳೆ
*ದರ ಏರಿಸಿದಾಗ ಜನರ ಗೋಳಾಟ
*ಉಚಿತದ ಲೆಕ್ಕ ಸರ್ಕಾರದ ಖಾತೆ*
*ಬೆಲೆ ಏರಿಕೆಯ ಬಿಲ್ ಜನರ ಮನೆ ಬಾಗಿಲಿಗೆ
*ಕೊನೆಗೆ ಒಂದೇ ಪ್ರಶ್ನೆ
*ಐದು ಗ್ಯಾರಂಟಿ ಯಾರಿಗೆ ಬಂತು?
*ಬೆಲೆ ಏರಿಕೆಯ ಭಾಗ್ಯ ಯಾರಿಗೆ ಬಂತು?
*ಫ್ರೀ ಬಸ್ಸಿನ ಸ್ವಾತಂತ್ರ್ಯ ಯಾರಿಗೆ ಬಂತು?
*ಜೇಬು ಖಾಲಿ ಮಾಡಿಕೊಂಡ ಸ್ವಾತಂತ್ರ್ಯ ಯಾರಿಗೆ ಬಂತು?
*ಎಲ್ಲಿಗೆ ಬಂತು? ಯಾರಿಗೆ ಬಂತು?
*47ರ ಸ್ವಾತಂತ್ರ್ಯ ಯಾರಿಗೆ ಬಂತು?
✍🏽ಎಂ ಎಂ ದಾವುದ್
9945375180











