ಮುಸ್ಲಿಂ ಸಮುದಾಯದ ಪರವಾಗಿ ಓಲೈಕೆ ಮಾಡುವುದು ಅಕ್ಷಮ್ಯ ಅಪರಾಧ :ಸೀಕಲ್ ರಾಮಚಂದ್ರಗೌಡ

ವಿಜಯ ದರ್ಪಣ ನ್ಯೂಸ್….

ಮುಸ್ಲಿಂ ಸಮುದಾಯದ ಪರವಾಗಿ ಓಲೈಕೆ ಮಾಡುವುದು ಅಕ್ಷಮ್ಯ ಅಪರಾಧ :ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : ದೇಶ ಮೊದಲು ಆಮೇಲೆ ರಾಜಕಾರಣ ಮಾತು, ಅದನ್ನು ಬಿಟ್ಟು ಮುಸ್ಲಿಂ ಸಮುದಾಯದ ಪರವಾಗಿ ರಾಜಕೀಯದ ಓಲೈಕೆ ಮಾತುಗಳನ್ನಾಡುತ್ತಿರುವುದ ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡರವರು ಬೇಸರ ವ್ಯಕ್ತಪಡಿಸಿದರು.
ನಗರದ ಬಿಜೆಪಿಯ “ಸೇವಾ ಸೌದ”ದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕಾಶ್ಮೀರದಲ್ಲಿ ನಡೆದ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದವರಿಗೆ ಆಗಿದ್ದರೆ ಸುಮ್ಮನೆ ಇರುತಿದ್ದರೆ ಸಿದ್ದರಾಮಯ್ಯ ರವರು ಭಾರತದಲ್ಲೇ ಇರುವುದಕ್ಕೆ ಲಾಯಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಶ್ಮೀರದ ಪಹಲ್ಗಾಮ್ ಮೇಲೆ ಉಗ್ರರ ದಾಳಿಯನ್ನೂ ಪ್ರಪಂಚಾದ್ಯಂತ ಖಂಡನೆ ಮಾಡುತ್ತಿರುವಾಗ ರಾಜ್ಯದಲ್ಲಿ ಜವಾಬ್ದಾರಿ ಸ್ಥಾನದ ಅಲಂಕರಿಸಿರುವ ಹಾಗು ಹಿರಿಯ ದುರೀಣರಾದ ಸಿದ್ದರಾಮಯ್ಯ ಅವರು ಮುಸ್ಲಿಂರ
ಪರವಾಗಿ ಓಲೈಕೆ ರಾಜಕಾರಣ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.

ಸಿದ್ದರಾಮಯ್ಯ ರವರಿಗೆ ತಲೆ ಕೆಟ್ಟಿದಂತಿದೆ ದೇಶದ ಬಗ್ಗೆ ಅಭಿಮಾನದ ಮಾತುಗಳನ್ನು ಬಿಟ್ಟು ರಾಜಕಾರಣದ ಮಾತುಗಳನ್ನಾಡುತ್ತಿರುವುದು ನಮ್ಮ ರಾಜ್ಯದ ದುರಂತ ಎಂದರು.

ಈ ವೇಳೆ ಗ್ರಾಮಾಂತರ ಮಂಡಲ ಅಧ್ಯಕ್ಷ ಸಿಕಲ್ ಆನಂದ್ ಗೌಡ,ಮಾಜಿ ಅಧ್ಯಕ್ಷ ಕಂಬದಹಳ್ಳಿ ಎಸ್. ಸುರೇಂದ್ರಗೌಡ, ನಗರ ಸಭೆ ಸದಸ್ಯ ನಾರಾಯಣಸ್ವಾಮಿ,
ದೇವರಮಳ್ಳೂರು ಬಾಲಕೃಷ್ಣ, ಮಧು,ನಗರದ ಸಂಜೀವಪ್ಪ, ರಾಮಕೃಷ್ಣಪ್ಪ, ಸುಬ್ರಮಣಿ ಮುಂತಾದವರು ಉಪಸ್ಥಿತರಿದ್ದರು.