ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ ಮತ್ತು ಪುಸ್ತಕ ಬಿಡುಗಡೆ
ವಿಜಯ ದರ್ಪಣ ನ್ಯೂಸ್…….
ವಿಸಿಎನ್ ಡಾಕ್ಟರ್ಸ್ ವೇಲ್ ಫೇರ್ ಅಸೋಸಿಯೇಷನ್: ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ ಮತ್ತು ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ
ವೈದ್ಯರ ಮೇಲೆ ಹಲ್ಲೆ, ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡಿದರೆ ಕಾನೂನು ಕ್ರಮ
ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ದಿಯಲ್ಲಿ ದೇಶದಲ್ಲಿಯೆ ಮೊದಲು ನಮ್ಮ ರಾಜ್ಯ-ಸಚಿವ ದಿನೇಶ್ ಗುಂಡೂರಾವ್
ರಾಜಾಜಿನಗರ ಬೆಂಗಳೂರು : ಫೇರಿಫೀಲ್ಡ್ ಮೇರಿಯಟ್ ಹೋಟೆಲ್ ಸಭಾಂಗಣದಲ್ಲಿ ಡಾಕ್ಟರ್ಸ್ ಡೇ( ವೈದ್ಯರ ದಿನಾಚರಣೆ) ಮತ್ತು ಸಾಧಕ ವೈದ್ಯರುಗಳಿಗೆ ಸನ್ಮಾನ , ಪುಸ್ತಕ ಬಿಡುಗಡೆ, ವೈದ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ರವರು,ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಪ್ಪರವರು ,ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣ, ನಿಕಟಪೂರ್ವ ವಿಸಿಎನ್ ಡಾಕ್ಟರ್ ವೇಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಸ್.ರಾಜುರವರು, ಚಲನಚಿತ್ರ ನಟರಾದ ಶ್ರೀನಿವಾಸಮೂರ್ತಿರವರು, ನಿವೃತ್ತ ಕೆ.ಸಿ ಜನರಲ್ ಸೂಪರಿಡೆಂಟ್ ಡಾ. ಶಂಕರಲಿಂಗಯ್ಯ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್,ಬೆಂಗಳೂರು ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ.ಜಯಕರ್ ಶೆಟ್ಟಿ ಮತ್ತು ವೈದ್ಯರುಗಳಾದ ಬಿ.ಟಿ.ರಮೇಶ್, ಶ್ರೀಮತಿ ಆಶಾ ಶ್ರೀಮತಿ ಜಯಶ್ರೀ, ದೀಪ ಬೆಳಗಿಸಿ ವೈದ್ಯರ ದಿನಾಚರಣೆಗೆ ಚಾಲನೆ ನೀಡಿದರು.
ಸಚಿವ ದಿನೇಶ್ ಗುಂಡೂರಾವ್ ರವರು ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರುವವರಿಗೆ ವೈದ್ಯರೀಗೆ ಗೌರವ ಸನ್ಮಾನ ಸಿಗಬೇಕು.
ವೈದ್ಯಕೀಯ ಕ್ಷೇತ್ರದ ಜನರಿಗೆ ಅವಶ್ಯಕತೆ ಹೆಚ್ಚಾಗುತ್ತಿದೆ, ಹೊಸ ತಂತ್ರಜ್ಞಾನ ಅವಿಷ್ಕಾರಗೊಂಡಿದೆ ಬಹುತೇಕ ಖಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ. ಮಾನವ ಅಂಗಾಂಗ ಹಾಳಾದರೆ ಬದಲಾಯಿಸುವ ಪರಿಸ್ಥಿತಿ ಬಂದಿದೆ. ಮನುಷ್ಯ ಜೀವಿತಾವಧಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ 90ವರ್ಷ ಬದುಕು ಸಾಗಿಸಬಹದು.
ರಾಜ್ಯ ದೇಶದಲ್ಲಿಯೆ ಮೊದಲನೇಯ ಸ್ಥಾನದಲ್ಲಿ ಇದ್ದೇವೆ. ವೈದ್ಯ ವೃತ್ತಿ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಉತ್ತಮ ಗೌರವಸ್ಥಾನ ವಿರುವ ವೈದ್ಯ ವೃತ್ತಿಯಾಗಿದೆ. ಸಮಾಜದಲ್ಲಿ ಎದುರಿಸುವ ವ್ಯವಸ್ಥೆ ಬೆಳಸಿಕೊಳ್ಳಬೇಕು.
ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಮಾಡಿದರೆ ಉಗ್ರ ಕ್ರಮ ಕೈಗೊಳ್ಳಲು ಕಾನೂನು ರೂಪಿಸಲಾಗಿದೆ.
ನೂತನ ಆಸ್ಪತ್ರೆಗಳು 6ತಿಂಗಳ ಒಳಗೆ ಸಂಪೂರ್ಣ ಪರವಾನಗಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಶಾಸಕ ಎಂ.ಕೃಷ್ಣಪ್ಪರವರು ಮಾತನಾಡಿ ನಮ್ಮ ಆರೋಗ್ಯ ರಕ್ಷಣೆ ಮಾಡುವ ವೈದ್ಯರುಗಳ ಸೇವೆಗೆ ಪುರಸ್ಕಾರ ನೀಡುವ ದಿನ ವೈದ್ಯರುಗಳು ದಿನಾಚರಣೆ.
ವೈದ್ಯರುಗಳು ಒತ್ತಡದಲ್ಲಿ ಜೀವನವಿದ್ದರು ರೋಗಿಗಳ ಆರೈಕೆ ಮಾಡುತ್ತಾರೆ. ವೈದ್ಯರುಗಳ ಕೊರತೆ ಇದೆ.ಸರ್ಕಾರಿ ವೈದ್ಯರುಗಳು ಪುರುಸೊತ್ತು ಇಲ್ಲದಂತೆ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ.
ಎಲ್ಲರು ಪ್ರೀತಿ, ವಿಶ್ವಾಸದಲ್ಲಿ ಜೀವನ ಸಾಗಿಸಬೇಕು. ಡಾಕ್ಟರ್ ಎಂದರೆ ನನಗೆ ಅವರ ಮೇಲೆ ಪ್ರೀತಿ ಹೆಚ್ಚು, ಅವರಿಗೆ ಏನೇ ತೊಂದರೆ ಅದರು ನಿಮ್ಮ ಜೊತೆ ನಿಲ್ಲುತ್ತೇನೆ. ವೈದ್ಯರುಗಳ ಕುರಿತು ಅಪಾರ ಅಭಿಮಾನವಿದೆ ಎಂದು ಹೇಳಿದರು.
ನಟ ಶ್ರೀನಿವಾಸಮೂರ್ತಿರವರು ಮಾತನಾಡಿ ಕಲಾವಿದರು, ವೈದ್ಯರುಗಳಿಗೆ ಸಮಯವಿರುವುದಿಲ್ಲ. ಎರಡನೇಯ ದೇವರು ಎಂದರೆ ವೈದ್ಯರು ರೋಗಿಗಳಿಗೆ.
ಮನುಷ್ಯನ ಹುಟ್ಟು ಸಾವು ಸಹಜ , ಅದರ ನಡುವೆ ನಾವು ಮಾಡುವ ಕೆಲಸವು ಶಾಶ್ವತವಾಗಿ ಉಳಿಯುತ್ತದೆ. ಕಲೆ ಎಲ್ಲರನ್ನು ಕೈ ಹಿಡಿದು ಕರೆಯುತ್ತದೆ ಅದರಲ್ಲಿ ಯಶ್ವಸಿ ಸಿಗುವುದು ಕೆಲವರಿಗೆ ಮಾತ್ರಎಂದು ಹೇಳಿದರು.
ಅಧ್ಯಕ್ಷರಾದ ಡಾ. ಎಸ್.ರಾಜುರವರು ಮಾತನಾಡಿ ವೈದ್ಯೊ ನಾರಾಯಣ ಹರಿ ಎಂದು ಜನರ ಭಾವನೆ, ರೋಗಿಯ ನೋವು, ಕಷ್ಟ ದುಖಃ ಹೋಗಲಾಡಿಸಲು ನಮಗೆ ದೇವರು ಶಕ್ತಿ ನಮಗೆ ಕೊಟ್ಟಿದ್ದಾನೆ.
ಹಣ ಗಳಿಸಿದರೆ ಶ್ರೀಮಂತರಾಗುವುದಿಲ್ಲ, ಆರೋಗ್ಯಗಳಿಸಿದವನೇ ನಿಜವಾದ ಶ್ರೀಮಂತ. ವೈದ್ಯರು 24ಗಂಟೆಯು, ರಜಾ ತೆಗೆದುಕೊಳ್ಳದೇ ರೋಗಿಗಳ ಸೇವೆ ಮಾಡಿ ಪ್ರಾಣ ಉಳಿಸುತ್ತಾರೆ.
ಸಾಧಕ ವೈದ್ಯರುಗಳನ್ನು ಸನ್ಮಾನಿಸುವುದು ಗುರುತಿಸುವ ದಿನವೇ ವೈದ್ಯರ ದಿನಾಚರಣೆ ಎಂದು ಹೇಳಿದರು.
ವೈದ್ಯರು, ಲೇಖಕರಾದ ಡಾ.ದಿವ್ಯಶ್ರೀ ಎಂ.ಆರ್. ರವರ ಅನಾಮಿಕ ಪುಸ್ತಕ ಲೋಕರ್ಪಣೆ ಮತ್ತು ವೈದ್ಯರುಗಳು ಮತ್ತು ಕುಟುಂಬದವರಿಂದ ಜಾನಪದ ಗೀತೆ, ಚಲನಚಿತ್ರ ಗೀತೆ, ಭರತನಾಟ್ಯ, ನಾಟಕ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು.
ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ವಿವಿಧ ಕ್ರೀಡೆಯಲ್ಲಿ ಗೆದ್ದ ವೈದ್ಯರು, ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವೈದ್ಯ ವೃತ್ತಿಯಲ್ಲಿ ಸಾಧನೆ ಮಾಡಿದ ಡಾ.ಶಂಕರಲಿಂಗಯ್ಯರವರಿಗೆ ಡಾ.ಎಮ್.ಸುನೀಲ್ ಬಾಬು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ನಂತರ ಡಾ.ಶ್ರೀನಿವಾಸ್, ಡಾ.ಗಾಯಿತ್ರಿ ಥಾಗಶ್ರೀ, ಡಾ.ಮಂಜುಳದೇವಿ, ಡಾ.ಮಂಜುನಾಥ್ ಜೆ ಮತ್ತು ಡಾ.ಪದ್ಮಾವತಿ, ಡಾ.ರಮೇಶ್ ಎ.ಸಿ, ಡಾ.ರಾಮು ಮತ್ತು ವಸಂತರಾಮು, ಡಾ.ಶಶಿಕಲಾ, ಡಾ.ಸೋಮನಾಥ್, ಡಾ.ಶ್ರೀನಿವಾಸ್ ವಿ, ಡಾ.ಸುಮಿತ್ರ, ಡಾ.ವಿಶ್ವನಾಥರೆಡ್ಡಿ, ಡಾ. ವ್ರಜೇಂದ್ರು ಬಿಬಿರವರಿಗೆ ವೈದ್ಯರ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು.