ಓಜೋನ್ ಸಂರಕ್ಷಣೆಗೆ ಅರಿವು ಅಗತ್ಯ: ಡಾ. ಶೋಭಾ ಮಲ್ಹಾರಿ
ವಿಜಯ ದರ್ಪಣ ನ್ಯೂಸ್…..
ಓಜೋನ್ ಸಂರಕ್ಷಣೆಗೆ ಅರಿವು ಅಗತ್ಯ: ಡಾ. ಶೋಭಾ ಮಲ್ಹಾರಿ
ದೊಡ್ಡಬಳ್ಳಾಪುರ : ಓಜೋನ್ ಪರಿದೆ ಹರಿದು ಹೋಗದಂತೆ ಜಾಗೃತಿ ವಹಿಸಲು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರಗೌಡ ಹೇಳಿದರು.
ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ “ವಿಶ್ವ ಪರಿಸರ ಸಂರಕ್ಷಣೆಯ ದಿನಾಚರಣೆ ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಓಜೋನ್ ಪರಿದೆ ಹಾಳಾದ್ರೆ ಪರಿಸರ ನಾಶವಾಗಿ ಮಾನವ ಸಂಕುಲಕ್ಕೆ ಹಾನಿ ಸಂಭವಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕಿ ಡಾ. ಶೋಭಾ ಮಲ್ಹಾರಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಅಗತ್ಯ. ಅದುವೇ ಬದುಕಿನ ಅವಿಭಾಜ್ಯ ಅಂಗ. ಭವಿಷ್ಯದಲ್ಲಿ ಪರಿಸರ ನಾಶವಾದ್ರೆ ಜೀವ ಸಂಕುಲ ಅವನತಿ ಹೊಂದುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಜಾಗೃತಿ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರಿಂದ ರೂಪಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸಮುದಾಯ ಪಾಲ್ಗೊಂಡಿದ್ದರು.