ಭಾರತದ ಪರಮಾಣು ಮತ್ತು ರಕ್ಷಣಾ ಸಾಮರ್ಥ್ಯವನ್ನು ಉತ್ತೇಜಿಸಲು ಕೋರ್ ಎನರ್ಜಿ ಸಿಸ್ಟಮ್ಸ್ ₹200 ಕೋಟಿ ರೂ ಸಂಗ್ರಹ
ವಿಜಯ ದರ್ಪಣ ನ್ಯೂಸ್….
ಭಾರತದ ಪರಮಾಣು ಮತ್ತು ರಕ್ಷಣಾ ಸಾಮರ್ಥ್ಯವನ್ನು ಉತ್ತೇಜಿಸಲು ಕೋರ್ ಎನರ್ಜಿ ಸಿಸ್ಟಮ್ಸ್ ₹200 ಕೋಟಿ ರೂ ಸಂಗ್ರಹ
ಆಗಸ್ಟ್ 7, 2025: ಭಾರತದ ಪರಮಾಣು ವಲಯದಲ್ಲಿ 25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ, ಮುಂಬೈ ಮೂಲದ ಇಂಜಿನಿಯರಿಂಗ್ ಸಂಸ್ಥೆಯಾದ ಕೋರ್ ಎನರ್ಜಿ ಸಿಸ್ಟಮ್ಸ್ ಲಿಮಿಟೆಡ್, ಹೊಸ ಸುತ್ತಿನ ಬಂಡವಾಳ ಹೂಡಿಕೆಯಲ್ಲಿ ₹200 ಕೋಟಿಗಳನ್ನು ಯಶಸ್ವಿಯಾಗಿ ಸಂಗ್ರಹಿಸಿದೆ. ಈ ಹೂಡಿಕೆಯ ನೇತೃತ್ವವನ್ನು ಪ್ರಮುಖ ಹೂಡಿಕೆದಾರರಾದ ಪಂಕಜ್ ಪ್ರಸೂನ್ ಮತ್ತು ಆಶಿಶ್ ಕಚೋಲಿಯಾ ವಹಿಸಿದ್ದು, ಇವರೊಂದಿಗೆ ಭಾರತದ ದೀರ್ಘಕಾಲೀನ ರಾಷ್ಟ್ರೀಯ ಗುರಿಗಳಿಗೆ ಅನುಗುಣವಾಗಿರುವ ಮಹತ್ವದ ಹೂಡಿಕೆದಾರರ ಒಕ್ಕೂಟವೂ ಸೇರಿದೆ.
ಭಾರತದಲ್ಲಿ ಪರಮಾಣು ಕೇಂದ್ರಿತ ಕಂಪನಿಯೊಂದಕ್ಕೆ ದೊರೆತ ಅತಿದೊಡ್ಡ ಹೂಡಿಕೆಗಳಲ್ಲಿ ಒಂದಾದ ಈ ಬಂಡವಾಳವು, ಈ ವಲಯದ ಬೆಳವಣಿಗೆಯ ಸಾಮರ್ಥ್ಯದ ಮೇಲೆ ಹೂಡಿಕೆದಾರರಿಗೆ ಹೊಸದಾಗಿ ಮೂಡಿರುವ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ.
ಈ ಹಣವನ್ನು ಕೋರ್ ಕಂಪನಿಯ ಮೂಲಸೌಕರ್ಯ, ಉತ್ಪಾದನೆ ಮತ್ತು RCD (ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿ) ಸಾಮರ್ಥ್ಯಗಳನ್ನು ವಿಸ್ತರಿಸಲು ಬಳಸಿಕೊಳ್ಳಲಾಗುವುದು. ಇದು ಭಾರತದ ಪರಮಾಣು ಶಕ್ತಿ ಮಾರ್ಗಸೂಚಿಗೆ ಅನುಗುಣವಾಗಿ ಬೃಹತ್ ಪ್ರಮಾಣದ ಪರಮಾಣು ಯೋಜನೆಗಳನ್ನು ಪೂರೈಸುವ ಕಂಪನಿಯ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಈ ಹೂಡಿಕೆಯು, ನಿಖರವಾದ ಪರಮಾಣು ಇಂಜಿನಿಯರಿಂಗ್ ಮತ್ತು ನಿರ್ಣಾಯಕ ಉಪಕರಣಗಳು ಹಾಗೂ ಘಟಕಗಳ ಹೈಟೆಕ್ ಉತ್ಪಾದನೆಯಲ್ಲಿ ಕೋರ್ ಕಂಪನಿಯ ಪರಿಣತಿಗೆ ವೇಗ ನೀಡಲಿದೆ. ಗಮನಾರ್ಹವಾಗಿ, ಪರಮಾಣು ಸ್ವಾವಲಂಬನೆ ಮತ್ತು ಸುಸ್ಥಿರ ಇಂಧನ ಭದ್ರತೆಯನ್ನು ಖಚಿತಪಡಿಸುವ ಗುರಿ ಹೊಂದಿರುವ ‘ಆತ್ಮನಿರ್ಭರ ಭಾರತ’ ಉಪಕ್ರಮದ ಪ್ರಮುಖ ಆಧಾರಸ್ತಂಭಗಳಾದ, ಭಾರತದ ಸಣ್ಣ ಮಾಡ್ಯುಲರ್ ರಿಯಾಕ್ಟರ್ ಮತ್ತು ಭಾರತ್ ಮಾಡ್ಯುಲರ್ ರಿಯಾಕ್ಟರ್ ಕಾರ್ಯಕ್ರಮಗಳನ್ನು ಬೆಂಬಲಿಸುವ ಪ್ರಯತ್ನಗಳನ್ನು ಇದು ಮತ್ತಷ್ಟು ಬಲಪಡಿಸುತ್ತದೆ.
ಐಸಿಎಂಎಸ್‌ನ ಹಿರಿಯ ಉಪಾಧ್ಯಕ್ಷೆ ಆಮಿ ಬೆಲೋರ್ಕರ್ ಮಾತನಾಡಿ “ಕೋರ್ ಎನರ್ಜಿ ಸಿಸ್ಟಮ್ಸ್ ಡೀಪ್ ಟೆಕ್ ಅನ್ನು ಪ್ರೋತ್ಸಾಹಿಸುತ್ತದೆ ಮತ್ತು ಎಮ್‌ಡಿಎವಿಎಫ್ ಯಾವುದನ್ನು ಬೆಂಬಲಿಸಬೇಕು ಎಂದು ವಿನ್ಯಾಸಗೊಳಿಸಲ್ಪಟ್ಟಿದೆಯೋ ಅದನ್ನು ಬೆಂಬಲಿಸುವ ದೇಶೀಯ ಸಂಸ್ಥೆಯಾಗಿದೆ. ಪರಮಾಣು ಮತ್ತು ರಕ್ಷಣಾ ವಲಯದಂತಹ ಸೂಕ್ಷ್ಮ ಡೊಮೇನ್‌ಗಳಲ್ಲಿ ಅವರು ಮಾಡಿದ ಸಾಧನಗಳು ಮಹತ್ವದ ಬಂಡವಾಳದಿಂದ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಸೂಚಿಸುತ್ತದೆ.”
ಒಂದು ಮಹತ್ವದ ಪ್ರಾಜೆಕ್ಟ್ ಅನ್ನು ಪೂರ್ತಿಗೊಳಿಸುವ ನಿಟ್ಟಿನಲ್ಲಿ ಕೋರ್ ಮುನ್ನಡೆಯುತ್ತಿದೆ. 1969 ರಲ್ಲಿ ಆರಂಭವಾದ ತಾರಾಪುರದಲ್ಲಿನ ಅತಿ ಹಳೆಯ ನ್ಯೂಕ್ಲಿಯರ್ ಘಟಕವನ್ನು ಇದು ನವೀಕರಿಸುತ್ತಿದೆ. ಇದೇ ಮೊದಲ ಬಾರಿಗೆ ಇಂಥ ಇಂಜಿನಿಯರಿಂಗ್ ಯೋಜನೆಯನ್ನು ಇದು ಕೈಗೆತ್ತಿಕೊಂಡಿದ್ದು, ಜಗತ್ತಿನಲ್ಲಿ ಹಿಂದೆಂದೂ ಇಂತಹ ಯೋಜನೆ ನಡೆದಿರಲಿಲ್ಲ. ಇದರಲ್ಲಿ ಘಟಕದ ಕಾರ್ಯಾಚರಣೆಯ ಅವಧಿಯನ್ನು ಹೆಚ್ಚಿಸಲಾಗುತ್ತದೆ ಮತ್ತು ಪರಮಾಣು ಬಾಳಿಕೆ ಅವಧಿ ವಿಸ್ತರಣೆ ತಂತ್ರಜ್ಞಾನಗಳಲ್ಲಿ ಭಾರತವನ್ನು ಮುಂಚೂಣಿ ಹಂತಕ್ಕೆ ಕೊಂಡೊಯ್ಯಲಿದೆ.
ಕೋರ್‌ನ ವ್ಯವಸ್ಥಾಪಕ ನಿರ್ದೇಶಕ ನಾಗೇಶ್ ಬಸರ್ಕರ್ ಮಾತನಾಡಿ “ಸುರಕ್ಷತೆ, ಗುಣಮಟ್ಟ ಮತ್ತು ನಿಖರತೆಯಲ್ಲಿ ರಾಜಿ ಇಲ್ಲದ ಗಮನ ಕೇಂದ್ರೀಕರಣವನ್ನು ಪರಮಾಣು ವಲಯವು ಬೇಡುತ್ತದೆ. ಭಾರತದ ನಾಗರಿಕ ಪರಮಾಣು ಭವಿಷ್ಯವನ್ನು ರೂಪಿಸಲು ನಮ್ಮ ಬದ್ಧತೆಗೆ ಉತ್ತಮ ಬೆಂಬಲವನ್ನು ಈ ಹೂಡಿಕೆಯು ನೀಡುತ್ತದೆ.”