ಆರೋಗ್ಯದ ಬಗ್ಗೆ  ಗಮನ ಹರಿಸಬೇಕು : ಡಾ.ಸಂದೀಪ್ ಪುವ್ವಾಡ್

ವಿಜಯ ದರ್ಪಣ ನ್ಯೂಸ್….

ಆರೋಗ್ಯದ ಬಗ್ಗೆ  ಗಮನ ಹರಿಸಬೇಕು : ಡಾ.ಸಂದೀಪ್ ಪುವ್ವಾಡ್

ಶಿಡ್ಲಘಟ್ಟ : ನಮ್ಮಲ್ಲಿ ಅನೇಕ ಮಂದಿ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದೆ ದುಡಿದು ಸಂಪಾದನೆ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳದೆ ಸಂಪಾದಿಸಿದ ಹಣದಿಂದ ಆರೋಗ್ಯವನ್ನು ಕೊಳ್ಳಲು ಆಗುವುದಿಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಿ ಎಂದು ಮಳ್ಳೂರು ಪುವ್ವಾಡ ಫೌಂಡೇಷನ್ ನ ಡಾ.ಸಂದೀಪ್‌ ಪುವ್ವಾಡ ತಿಳಿಸಿದರು.

ತಾಲ್ಲೂಕಿನ ಮಳ್ಳೂರು ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಸುಮಾರು 4 ಲಕ್ಷ ರೂ.ಗಳ ಮೌಲ್ಯದ ಔಷಧಿಗಳನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹ‌ರ್ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಅನೇಕ ಮಂದಿ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದೆ ದುಡಿದು ಸಂಪಾದನೆ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳದೆ ಸಂಪಾದಿಸಿದ ಹಣದಿಂದ ಆರೋಗ್ಯವನ್ನು ಕೊಳ್ಳಲು ಆಗುವುದಿಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದರು.

ರೈತರು, ಗ್ರಾಮಸ್ಥರು ಮತ್ತು ನಾಗರಿಕರು ತಮ್ಮ
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವ ಜತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಯೂ ಗಮನ ಹರಿಸಿ, ಉತ್ತಮ ಬದುಕು ರೂಪಿಸಿ ಎಂದರು.

ಯಾವುದೇ ವ್ಯಕ್ತಿ ತಮಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಡ ಮಾಡಬೇಡಿ, ನಿರ್ಲಕ್ಷ್ಯವನ್ನೂ ಮಾಡಬೇಡಿ ಮುಖ್ಯವಾಗಿ ಸ್ವಯಂ ಚಿಕಿತ್ಸೆಗೆ ಮುಂದಾಗಬೇಡಿ ಎಂದು ಮನವಿ ಮಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧವಾದ ಪ್ರಗತಿ ಆಗಿದೆ ಎಂದರು.

ಯಾವುದೇ ರೋಗವಾಗಲಿ ಆರಂಭದಲ್ಲೆ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಎಂತಹ ರೋಗವನ್ನಾದರೂ ಆರಂಭದಲ್ಲೆ ವಾಸಿ ಮಾಡಿಕೊಳ್ಳಬಹುದು ಎಂದರು.
ಈ ವೇಳೆ ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಿಂದ ಸಾರ್ವಜನಿಕ ಆಸ್ಪತ್ರೆಗೆ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಔಷಧಿಗಳನ್ನು ಕೊಡುಗೆಯಾಗಿ ನೀಡಿದರು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಔಷಧಿಗಳನ್ನು ಸ್ವೀಕರಿಸಿದರು.

ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್‌ ಟ್ರಸ್ಟ್‌ ನ ನಿರ್ದೇಶಕ ಹಾಗು ಪ್ರಗತಿಪರ ರೈತ ಬಿ.ಎನ್.ಸಚಿನ್ ಮಾತನಾಡಿ,ವೈದ್ಯ ಡಾ.ಸಂದೀಪ್ ಪುವ್ವಾಡ ಅವರ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಿ ಸಾಗಲಿ ಎಂದ ಅವರು ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ಭಾನುವಾರ ನಾನಾ ರೀತಿಯ ಉಚಿತ ಆರೋಗ್ಯ ತಪಾಸಣೆ ಮತ್ತು ಔಷದೋಪಚಾರ ಶಿಬಿರ ನಡೆಯಲಿದ್ದು ಸುತ್ತ ಮುತ್ತಲಿನ ಅನೇಕರಿಗೆ ಇದರಿಂದ ಅನುಕೂಲ ಆಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆ ಇರುವ ಹಲವು ರೀತಿಯ ಔಷಧಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದು ಇದರ ಸದುಪಯೋಗ ಅಗತ್ಯ ಇರುವ ಎಲ್ಲಾ ಅರ್ಹರಿಗೂ ಸಿಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್‌ ಟ್ರಸ್ಟ್‌ ನ ಬಿ.ಎನ್‌.ಸಚಿನ್,
ಪುವ್ವಾಡ ಫೌಂಡೇಷನ್ ಮತ್ತು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ಕಲಾವತಿವೀರಕುಮಾರ್, ಡಾ.ಪ್ರಿಯಾಂಕ, ಡಾ.ಸತ್ಯವಂಶಿಕೃಷ್ಣ,ಡಾ.ಮಂಜುನಾಥ್, ಡಾ.ವಿಶ್ಯ ಪ್ರಭು ಹಾಗು ಸ್ವಯಂಸೇವಕರು ಹಾಜರಿದ್ದರು.

ಯಾದವ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಶಿಡ್ಲಘಟ್ಟ : ತಾಲ್ಲೂಕಿನ ಯಾದವ ಸಂಘಕ್ಕೆ ನೂತನ ಪದಾಧಿಕಾರಿಗಳ ಪ್ರಕ್ರಿಯೆ ನಡೆಯಿತು ನಗರದ ಶ್ರೀ ಕೃಷ್ಣಸ್ವಾಮಿ ದೇವಾಲಯ ಸಭಾಂಗಣದಲ್ಲಿ ಯಾದವ ಸಮುದಾಯದ ಮುಖಂಡರು ಸಭೆ ಸೇರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ತಾಲ್ಲೂಕು ಯಾದವ(ಗೊಲ್ಲ) ಸಂಘದ ಅಧ್ಯಕ್ಷರಾಗಿ ಲಕ್ಷ್ಮಣ್, ಕರಿಯಪ್ಪನವರ ಮೂರ್ತಿ(ಉಪಾಧ್ಯಕ್ಷ), ವಿ.ದೇವರಾಜ್‌ (ಪ್ರಧಾನ ಕಾರ್ಯದರ್ಶಿ), ನವೀನ್ ಕುಮಾರ್(ಖಜಾಂಚಿ), ಎಸ್.ಎ.ನಾರಾಯಣಸ್ವಾಮಿ(ಗೌರವಾಧ್ಯಕ್ಷ) ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶ ದಿಂದ ಹಂಡಿಗನಾಳ ರಾಮಚಂದ್ರ, ಆನೂರು ನಾರಾಯಣ ಸ್ವಾಮಿ, ಪಿಲ್ಲಗುಂಡ್ಲಹಳ್ಳಿ ಶ್ರೀನಿವಾಸ್, ನಲ್ಲಿಮರದಹಳ್ಳಿ ಮುರಳಿ, ಅರಿಕೆರೆ ವೆಂಕಟೇಶ್, ಮುನಿರೆಡ್ಡಿ, ಕೆ.ಕೆ.ಪೇಟೆ ರಮೇಶ್,ಅಜ್ಜಕದಿರೇನಹಳ್ಳಿ ಅನಂದ್‌,ಬಚ್ಚಹಳ್ಳಿ ಶ್ರೀನಿವಾಸ್, ಚೊಕ್ಕನಹಳ್ಳಿ ವೆಂಕಟೇಶಪ್ಪ, ಪಲಿಚೇರ್ಲು ಜಯರಾಂ, ಕಾನೂನು ಸಲಹೆಗಾರರಾಗಿ ವಕೀಲ ಎಂ.ಮುನಿರಾಜ್, ಮಾಧ್ಯಮ ಸಲಹೆಗಾರರಾಗಿ ಚಿಕ್ಕತೇಕಹಳ್ಳಿ ಡಿ.ಶಿವಕುಮಾರ್ ಅವರನ್ನು ನೇಮಿಸಲಾಯಿತು.

ಯಾದವ ಯುವಕರ ಸಂಘದ ಅಧ್ಯಕ್ಷರಾಗಿ ಆರ್.ವಿಜಯ್ ಕುಮಾರ್, ವಿ.ನಾಗಚಂದ್ರ (ಪ್ರಧಾನ ಕಾರ್ಯದರ್ಶಿ),
ಸಿ.ರಮೇಶ್‌ (ಖಜಾಂಚಿ) ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ದೇವಾಲಯದ ಅಭಿವೃದ್ಧಿಗೆ ನನ್ನ ಪ್ರಯತ್ನ ಮೀರಿ ಶ್ರಮಿಸುತ್ತೇನೆ ನನ್ನ ಅಧಿಕಾರ ಅವಧಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಒಳ ಮೀಸಲಾತಿ ಸಮೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆಗೆ ಬಂದ ಸಮಯದಲ್ಲಿ ಎಲ್ಲಾ ಯಾದವ ಕುಲಬಾಂಧವರು ತಮ್ಮ ಜಾತಿ ನೋಂದಣಿ ಮಾಡಿಸುವಾಗ ಗೊಲ್ಲ ಜಾತಿ ಎಂದು ತಪ್ಪದೇ ನಮೂದಿಸಬೇಕು ಎಂದು ಮನವಿ ಮಾಡಿದರು.

ಯಾದವ ಕುಲಬಾಂಧವರು ನನ್ನ ಮೇಲೆ ಭರವಸೆಯನ್ನಿಟ್ಟು ಸಮುದಾಯದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು, ಅವರ ನಿರೀಕ್ಷೆಯಂತೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿ.ಅಶ್ವತ್ಥಪ್ಪ, ಸಮುದಾಯದ ಮುಖಂಡರಾದ ದೊಗರನಾಯಕನಹಳ್ಳಿ ವೆಂಕಟೇಶ್, ಟಿ.ಕೆ.ನಟರಾಜ್,ರಾಮಕೃಷ್ಣಪ್ಪ, ಅರಿಕೆರೆ ಮುನಿರಾಜು, ಲೋಡರ್ ರಾಮಚಂದ್ರಪ್ಪ,ಬೀರಪ್ಪನಹಳ್ಳಿ ದ್ಯಾವಪ್ಪ ,ನಲ್ಲಿಮರದಹಳ್ಳಿ ಚಂದ್ರು ಹಾಗು ಸಮುದಾಯದ ಮುಖಂಡರು ಹಾಜರಿದ್ದರು.