ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ರದ್ದುಗೊಳಿಸಿ: ಸಿ.ಮುನಿಯಪ್ಪ ಅಗ್ರಹ

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ  ಕನ್ನಡ ಭಾಷೆಗೆ ಅವಮಾನ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ರದ್ದುಗೊಳಿಸಬೇಕೆಂದು ಭಾರತ ಜನ ಜಾಗೃತಿ ಸೇನೆ ರಾಜ್ಯಧ್ಯಕ್ಷ ಸಿ ಮುನಿಯಪ್ಪ ಆಗ್ರಹ ಮಾಡಿದರು .

ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ  ಕನ್ನಡ ನಾಡಿನಲ್ಲಿರುವ ಏಳುಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದು, ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡ ನೆಲ ಜಲ ಅನುಭವಿಸಿ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿ ಬೆಂಗಳೂರಿನ ಕನ್ನಡಿಗರ ಮತದಿಂದ ವಿಧಾನಸಭೆಗೆ ಆಯ್ಕೆಯಾದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕನ್ನಡವನ್ನು ನನ್ನ ತಾಯಿ ಸಮಾನ ಕನ್ನಡವನ್ನು ಪ್ರೀತಿಸುವ ಕನ್ನಡಿಗ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸಚಿವರ ಪ್ರಮಾಣ ವಚನ  ಸ್ವೀಕಾರ  ಸಮಾರಂಭದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದೆ ಆಂಗ್ಲ  ಭಾಷೆಯಲ್ಲಿ ಸ್ವೀಕರಿಸಿರುವದು  ಕನ್ನಡಕ್ಕೆ ಅವಮಾನ ಆಗಿದೆ.

ಕರ್ನಾಟಕದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸಚಿವರುಗಳು ಕನ್ನಡದಲ್ಲಿ ಪ್ರಮಾಣವಚನ ಮಾಡಿದ್ದಾರೆ. ಜಮೀರ್ ಅಹ್ಮದ್ ಖಾನ್  ಕರ್ನಾಟಕದ ಕನ್ನಡಿಗರಿಗೆ ಮಾಡಿರುವ ಅವಮಾನ ಇವರನ್ನು ಸಚಿವ ಸಂಪುಟದಿಂದ ರದ್ದುಗೊಳಿಸಬೇಕೆಂದು ಭಾರತ ಜನ ಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಸಿ. ಮುನಿಯಪ್ಪ  ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕನ್ನಡ ಭಾಷೆ ಬರದ ಸಚಿವರು, ಐಎಎಸ್, ಐಪಿಎಸ್, ಅಧಿಕಾರಿಗಳನ್ನು ತಮ್ಮ ಸರ್ಕಾರದಲ್ಲಿ ಇಟ್ಟುಕೊಳ್ಳಬಾರದೆಂದು ಮನವಿ ಮಾಡಿದ್ದಾರೆ .

ಕನ್ನಡ ಭಾಷೆಗೆ ಅವಮಾನ ಮಾಡುವ ಯಾವುದೇ ಸಚಿವರಾಗಲಿ, ಅಧಿಕಾರಿಗಳಾಗಲಿ ಅವರನ್ನು ಈ ನಾಡಿನ ಏಳು ಕೋಟಿ ಕನ್ನಡಿಗರು ಸಹಿಸುವುದಿಲ್ಲ ಎಂದು ಭಾರತ ಜನಜಾಗೃತಿ ಸೇನೆಯ ರಾಜ್ಯಧ್ಯಕ್ಷ ಸಿ. ಮುನಿಯಪ್ಪ ಮಾಧ್ಯಮಗಳ ಮೂಲಕ  ಎಚ್ಚರಿಕೆ ನೀಡಿದ್ದಾರೆ.