ಕಳ್ಳರನ್ನು ಬಂಧಿಸಿ ಕಳವು ಮಾಡಿದ್ದ 60 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣವನ್ನು ವಶಪಡಿಸಿಕೊಂಡ ಪೊಲೀಸರು
ವಿಜಯ ದರ್ಪಣ ನ್ಯೂಸ್…
ಕಳ್ಳರನ್ನು ಬಂಧಿಸಿ ಕಳವು ಮಾಡಿದ್ದ 60 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣವನ್ನು ವಶಪಡಿಸಿಕೊಂಡ ಪೊಲೀಸರು

ಶಿಡ್ಲಘಟ್ಟ : ನಗರದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯಾದ ಮುಬಾರಕ್ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಮೂವರನ್ನು ಬಂಧಿಸಿ ಕಳವು ಮಾಡಿದ್ದ 60 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾಹಿಲ್ ಶಾರುಖ್ ಪಾಷಾ(25),ಸಾಹಿಲ್ ಪಾಷ (24) ಹಾಗೂ ಇನಾಯತ್ ಪಾಷಾ(54) ಬಂಧಿತರು.
ಈ ಮೂವರು ನಗರದ ಫಿಲೇಚರ್ ಕ್ವಾಟರ್ಸ್ ನ ವಾಸಿಗಳಾಗಿದ್ದು, ರೇಷ್ಮೆ ನೂಲು ಹಾಗು ಇನ್ನಿತರೆ ವ್ಯಾಪಾರ ಮಾಡಿಕೊಂಡಿದ್ದರು.
ಬಂಧಿತರಿಂದ 451 ಗ್ರಾಂ. ಚಿನ್ನಾಭರಣ, 819 ಗ್ರಾಂ. ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಡಿ.10ರಂದು ರಾತ್ರಿ ಮುಬಾರಕ್ ಅವರನ್ನು ಆಕೆಯ ತಮ್ಮನ ಮಗ ಸಾಹಿಲ್ ಬಿಟ್ಟು ಹೋಗಿದ್ದು, ಈ ವೇಳೆ ಮುಸುಕು ಧರಿಸಿ ಮನೆ ಒಳಗೆ ಮನೆಗೆ ಸೇರಿದ್ದ ಇವರು ಮುಬಾರಕ್ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದರು.
ಪ್ರಕರಣ ದಾಖಲಿಸಿಕೊಂಡು ಸಿಪಿಐ ಆನಂದ್ ಕುಮಾರ್
ಜಿಲ್ಲಾ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರ ನೇತೃತ್ವದಲ್ಲಿ ಎಎಸ್ಪಿ ಜಗನ್ನಾಥ್ ರೈ, ಡಿವೈಎಸ್ ಪಿ ಮುರಳೀಧರ್ ಮಾರ್ಗದರ್ಶನದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಜೆ.ಎನ್. ಆನಂದ್ ಕುಮಾರ್ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್‌ಐ ವೇಣುಗೋಪಾಲ್ ಗ್ರಾಮಾಂತರ ಠಾಣೆಯ ಸತೀಶ್, ನಾಗರಾಜ್, ಪಿಎಸ್‌ಐ ಶಾಮಲಾ,ಸಿಬ್ಬಂದಿಯಾದ ಸಂದೀಪ್ ಮುರಳಿಕೃಷ್ಣ, ಜಗದೀಶ್, ವಿಶ್ವನಾಥ್, ರವೀಂದ್ರ, ಅಶ್ವಥ್, ಲಕ್ಷ್ಮಿ, ಆಂಜನೇಯ, ಮಂಜುನಾಥ್, ನರೇಶ್, ಸುನಿಲ್‌ಕುಮಾರ್, ಸಂಪತ್, ವಾಹನ ಚಾಲಕ ರವಿಕುಮಾರ್, ಅಂಬರೀಶ್, ಮುನಿಕೃಷ್ಣ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಕುಶಾಲ್ ಚೌಕ್ಷೆ ಅವರು ತನಿಖಾ ತಂಡದ ಎಲ್ಲರನ್ನೂ ಶ್ಲಾಘಿಸಿದ್ದಾರೆ.
&&&&&&&&&&&&&&&&&&&&&&&&
ಅನ್ನದಾತರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ

ಶಿಡ್ಲಘಟ್ಟ : ದೇಶಾದ್ಯಂತ ರೈತರು ಕೃಷಿಯನ್ನು ನಂಬಿದ್ದು ಇದೀಗ ಕೃಷಿ ಗಂಡಾಂತರದಲ್ಲಿದೆ ನಮ್ಮ ದೇಶದಲ್ಲಿ ಕೃಷಿಕರು ದಿಕ್ಕು ತಪ್ಪುತ್ತಿ ದ್ದಾರೆ ದೇಶದಲ್ಲಿ ಅನ್ನದಾತ ಸಾಯಲು ಶರಣಾಗುತ್ತಿದ್ದಾನೆ ಅನ್ನದಾತರ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಎಂದು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಮತ್ತು ಕೃಷಿಕ ಸಮಾಜದ ಅಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.
ಕೃಷಿ ಇಲಾಖೆ, ಕೃಷಿಕ ಸಮಾಜ ಮತ್ತು ಕೃಷಿ ಸಂಬಂದಿತ ಇಲಾಖೆಗಳ ಆಶ್ರಯದಲ್ಲಿ ತಾಲ್ಲೂಕಿನ ವರದನಾಯಕನಹಳ್ಳಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೨೦೨೫-೨೬ ನೇ ಸಾಲಿನ ರಾಷ್ಟ್ರೀಯ ರೈತರ ದಿನಾಚರಣೆ ಮತ್ತು ಆತ್ಮ ಯೋಜನೆಯಯಡಿ ಕಿಸಾನ್ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅನ್ನದಾತರಿಗೆ ಗೌರವ ಕೊಡುತ್ತಿಲ್ಲ, ಅನ್ನದಾತರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅನ್ನದಾತ ಸತ್ತರೆ ಮನುಷ್ಯನ ಬದುಕು ಅಂತ್ಯವಾಗುತ್ತದೆ ,ಜಗತ್ತಿನಲ್ಲಿ ಜೀವ ಸಂಕುಲ ಉಳಿದು ಬದುಕುತ್ತಿದೆ ಎಂದರೆ ಅದಕ್ಕೆ ಭೂಮಿ ಮತ್ತು ಅನ್ನ ಕಾರಣ, ಅದರಲ್ಲೂ ರೈತರಿಗೆ ಭೂಮಿ ಇಲ್ಲ ಅಂದರೆ ಅನ್ನ ಬೆಳೆಯಲು ಸಾಧ್ಯವಿಲ್ಲ ಎಂದರು.
ವಿಜ್ಞಾನಿ ತನ್ವೀರ್ ಅಹಮ್ಮದ್ ಮಾತನಾಡಿ, ರೈತರು ಸಾವಯವ ಕೃಷಿ ಬಗ್ಗೆ ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವುದರ ಜತೆಗೆ ಸುಸ್ಥಿರವಾಗಿ ದೀರ್ಘಕಾಲದವರೆಗೆ ಲಾಭದಾಯಕ ಬೆಳೆಯನ್ನು ಬೆಳೆಯಬಹುದು. ಸಾವಯವ ಬೆಳೆ ಬೆಳೆಯಲು ಅನುಸರಿಸಬೇಕಾದ ಬೇಸಾಯ ಪದ್ಧತಿ, ವಿವಿಧ ಸಾವಯವ ಗೊಬ್ಬರ ಉತ್ಪಾದನೆ ಮತ್ತು ಬಳಕೆ, ಸುಧಾರಿತ ಕಾಂಪೋಸ್ಟ್ ಮತ್ತು ಎರೆಗೊಬ್ಬರ ತಯಾರಿಕೆ, ದ್ರವರೂಪದ ಗೊಬ್ಬರಗಳಾದ ಜೀವಸಾರ ಘಟಕ, ಜೀವಾಮೃತ, ಬೀಜಾಮೃತ ತಯಾರಿಕೆ ಬಗ್ಗೆ ಅವರು ವಿವರ ನೀಡಿದರು.
ಸಾವಯವ ಕೃಷಿ ಮಾಡುವ ಮೊದಲು ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ವೈಜ್ಞಾನಿಕವಾಗಿ ತಯಾರಿಸಿ ಅವುಗಳಿಗೆ ಅವಶ್ಯಕತೆಯಿರುವ ಪ್ರಮಾಣದಲ್ಲಿ ಕೊಡುವ ಕಡೆಗೆ ಗಮನಹರಿಸಬೇಕು. ಸಾವಯವ ಆಹಾರ ಪದಾರ್ಥಗಳಿಗೆ ಸಾವಯವ ದೃಢೀಕರಣ ಮಾಡಿಸಿ ಸ್ಥಳೀಯ ಮತ್ತು ಅಂತರರಾಷ್ಟಿçÃಯ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಪಿ.ರವಿ ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ಕೃಷಿಕ ಸಮಾಜದ ಉಪಾಧ್ಯಕ್ಷ ರೆಡ್ಡಿಸ್ವಾಮಿ,ಪಾಪಣ್ಣ, ಕೆಂಪೇಗೌಡ, ರೈತ ಸಂಘದ ರಾಜ್ಯಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಪ್ರತೀಶ್, ಬಿ.ಮುನಿಕೆಂಪಣ್ಣ, ಟಿ.ಕೆ.ಅರುಣ್ ಕುಮಾರ್, ಚೀಮನಹಳ್ಳಿ ಬೈರೇಗೌಡ, ಜಿ.ಆರ್.ರಾಜಣ್ಣ, ಮಂಜುನಾಥ್ ಬಾಬು ಹಾಗಯ ರೈತಬಾಂದವರು ಪಾಲ್ಗೊಂಡಿದ್ದರು.
