ಒಳ್ಳೆತನದಿಂದ ಕಾರ್ಯನಿರ್ವಹಿಸಿ ನಿಮ್ಮನ್ನು ಜನರು ನೆನಪಿಸಿಕೊಳ್ಳುತ್ತಾರೆ: ನಿವೃತ್ತ ಐಎಎಸ್ ಅಧಿಕಾರಿ ಅಮರ ನಾರಾಯಣ

ವಿಜಯ ದರ್ಪಣ ನ್ಯೂಸ್….

ಅಧಿಕಾರಿಗಳು ಸೌಜನ್ಯ ಮನೋಭಾವವನ್ನು ಅಳವಡಿಸಿಕೊಳ್ಳಬೇಕು

ಒಳ್ಳೆತನದಿಂದ ಕಾರ್ಯನಿರ್ವಹಿಸಿ ನಿಮ್ಮನ್ನು ಜನರು ನೆನಪಿಸಿಕೊಳ್ಳುತ್ತಾರೆ: ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿಸೆಂಬರ್ 23 :

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಈ ದಿನ ಬಹಳ ವಿಶೇಷವಾದ ದಿನ ನಮ್ಮ ರೈತರ ದಿನವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ.
ಮುಖ್ಯವಾಗಿ ರೈತರು ನಿಮ್ಮ ಕಚೇರಿಗೆ ಬಂದಾಗ ಉತ್ತಮ ಮನಸ್ಥಿತಿಯಿಂದ ಮುಗುಳ್ನಗುತ್ತಾ ಮಾತನಾಡಿಸಿ, ಏಕೆಂದರೆ ಅವರು ನಮಗೆ ಅನ್ನ ನೀಡುವ ದೇವರು. ಯಾವುದೇ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಅಧಿಕಾರಿಗಳಿಗೆ ನಿವೃತ್ತ ಐಎಎಸ್ ಅಧಿಕಾರಿ ಅಮರ್ ನಾರಾಯಣ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಹಮ್ಮಿಕೊಂಡಿದ್ದ ‘ಪ್ರಶಾಸನ್ ಗಾಂವ್ ಕೀ ಒರ್ 2025’ Good Governance Week
ಪ್ರಸರಣ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ನಾವು ಸ್ಪಂದಿಸಿದರೆ ಹಾಗೂ ಸಮಸ್ಯೆಗಳನ್ನು ಬಗೆಹರಿಸಿದರೆ ಅವರು ನಮಗೆ ಗೌರವವನ್ನು ನೀಡುತ್ತಾರೆ. ಎಡ್ಮಂಡ್ ಬರ್ಕ್ ಎಂಬ ವ್ಯಕ್ತಿ – ಸಮಾಜದ ಕಟ್ಟಕಡೆಯ ವ್ಯಕ್ತಿಯು ಸಹ ಸೇವೆಯಿಂದ ವಚಿಂತರಾಗದಂತೆ ನೋಡಿಕೊಳ್ಳುವುದೇ ಉತ್ತಮ ಸೇವೆ ಎಂದು ಹೇಳಿದ್ದಾರೆ. ಹಾಗಾಗಿ ನಾವುಗಳು ಉತ್ತಮ ರೀತಿಯಲ್ಲಿ ನಮ್ಮ ಕಾರ್ಯನಿರ್ವಹಿಸಿದರೆ ಜನರು ನಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ನಾವು ಪ್ರಚಾರಕ್ಕಾಗಿ ಕೆಲಸ ಮಾಡುವ ಬದಲು ಉತ್ತಮ ಫಲಿತಾಂಶಕ್ಕಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಮುಂದಾಗಿ.

ಯಾವುದಾದರು ಕಡತಗಳು ಹಾಗೇ ಉಳಿದರೆ ಅದು ನಮಗೆ ಅವಮಾನ ಸಂಗತಿಯಾಗಿದೆ. ನೊಂದವರಿಗೆ ಪರಿಹಾರ ಒದಗಿಸುವುದು ನಮ್ಮ ಕರ್ತವ್ಯ, ಸಾರ್ವಜನಿಕರು ನಮಗೆ ಸಮಸ್ಯೆ ಪತ್ರ ಕೊಟ್ಟರೇನೆ ನಾವು ಪ್ರತಿಕ್ರಿಯೆ ಮಾಡಬೇಕು ಅನ್ನುವುದು ಸಲ್ಲದು, ಮೌಖಿಕವಾಗಿ ನಿಮ್ಮ ಬಳಿ ಕೇಳಿದಾಗ ಸವಿನಯದಿಂದ ಮಾತನಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಮಾತನಾಡಿ,
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ಪ್ರತಿ ವರ್ಷ ಈ ದಿನವನ್ನು Good Governess Week ಅನ್ನು ಎಂದು ಆಚರಿಸಲಾಗುತ್ತಿದೆ.

ಭಾರತ ಸರ್ಕಾರದಿಂದ ಪ್ರತೀ ವರ್ಷ ಈ ವಾರವನ್ನು ಪ್ರಶಾಸನ್ ಗಾಂವ್ ಕೀ ಒರ್ 2025 ಅನ್ನು ಆಚರಿಸಲಾಗುತ್ತಿದೆ,
ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಮುಖ್ಯಮಂತ್ರಿಗಳು ನಮ್ಮ ರಾಜ್ಯದಲ್ಲಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಜನಸ್ಪಂದನ ಕಾರ್ಯಕ್ರಮವನ್ನು
ಆರಂಭಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ತಮ್ಮಲ್ಲಿರುವ ಬಾಕಿ ಉಳಿದಿರುವ ಸಾರ್ವಜನಿಕರ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಮಾದರಿ ಅಧಿಕಾರಿ ಎಂದೆನಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವುಕುಮಾರ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.