ಮಾನವತಾವಾದವನ್ನು ಸಾರಿದ ಧರ್ಮ ಬೌದ್ದ ಧರ್ಮ : ಸಚಿವ ಮುನಿಯಪ್ಪ
ವಿಜಯ ದರ್ಪಣ ನ್ಯೂಸ್….
ಮಾನವತಾವಾದವನ್ನು ಸಾರಿದ ಧರ್ಮ ಬೌದ್ದ ಧರ್ಮ : ಸಚಿವ ಮುನಿಯಪ್ಪ
ಚಿತ್ರದುರ್ಗ ಆಗಸ್ಟ್ 10 : ಅನುಭವ ಮಂಟಪ ಮುರಘಾ ಮಠದಲ್ಲಿಂದು ಭವ್ಯವಾಗಿ ನಡೆದ ‘ ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ’ ಮಹೋತ್ಸವದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ರವರು ಭಾಗವಹಿಸಿ ಬುದ್ಧ–ಬಸವ ಮೂರ್ತಿಗೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು ಬಸವೇಶ್ವರ ನಾಡಿನಲ್ಲಿ ಬುದ್ಧ ಸ್ಮರಣೆ ಮತ್ತು ದಲೈ ಲಾಮಾ ಅವರ 90ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಬಹಳ ಸಂತೋಷಕರವಾಗಿದೆ ಎಂದರು.
ಬೌದ್ಧ ಧರ್ಮ ಬಹಳ ಹಳೆಯ ಧರ್ಮ ಈ ಧರ್ಮದ ನಾಲ್ಕು-ಐದನೇ ಶತಮಾನದ ಪುರಾವೆಗಳು ಇಂದು ನಾನು ಪ್ರತಿನಿಧಿಸುವ ಬೆಂಗಳೂರು ಗ್ರಾಮಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದ ರಾಜಘಟ್ಟ ಗ್ರಾಮದಲ್ಲಿ ಕೆಲವು ಪುರಾವೆಗಳು ದೊರಕಿದ್ದು ಅವುಗಳನ್ನು ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಸಂಶೋಧನೆ ನಡೆಸುತ್ತಿದ್ದಾರೆ.
ಇತ್ತೀಚಿಗೆ 15 ದಿನದಗಳ ಹಿಂದೆ ಅಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿ ಬೌದ್ಧ ಧರ್ಮದ ಗುರುಪೀಠ, ಪ್ರಾಥನೆಯ ಮಂದಿರದ ಅನೇಕ ಪುರಾತನ ಅವಶೇಷತೆಗಳನ್ನು ನೋಡಿದ್ದೇವೆ.
ಇದು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಸ್ಥಳ ಅಂತ ಗುರುತಿಸಲ್ಪಟ್ಟಿದೆ ಅದನ್ನು ಸಂಶೋಧನಾ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ನೇತ್ರತ್ವದಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ.
ಇದರ ಮುಖಾಂತರ ಮತ್ತೆ ದಕ್ಷಿಣ ಭಾರತದಲ್ಲಿ ನಾಲ್ಕು-ಐದನೇ ಶತಮಾನದಲ್ಲಿ ಇದ್ದ ಒಂದು ಗುರುತುಗಳನ್ನು ಪುನರ್ಜೀವನಗೊಳಿಸಿ, ಈ ಧರ್ಮದ ಸಂದೇಶವನ್ನು ಭಾರತದ ಉದ್ದಕ್ಕೂ ಜಗತ್ತಿಗೂ ತಲುಪಿಸುವ ಚಿಂತನೆಯನ್ನು ಕರ್ನಾಟಕ ಸರ್ಕಾರ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಾವೆಲ್ಲಾರೂ ಚಿಂತನೆ ಮಾಡುತ್ತಿದ್ದೇವೆ.
ನಾವು ಪಠ್ಯಪುಸ್ತಕಗಳಲ್ಲಿ ಓದುವ ಕಾಲದಲ್ಲಿ ಬುದ್ಧ, ಬಸವಣ್ಣನವರ ಜೈನ ಧರ್ಮ ಇವೆಲ್ಲವನ್ನೂ ಓದಿದ್ದೇವೆ ಜೈನ ಧರ್ಮವೂ ಅತಿ ಶಾಂತಿ, ತಾಳ್ಮೆ, ಸಹಿಷ್ಣತೆ, ಮಾನವತಾವಾದವನ್ನು ಸಾರಿದ ಮಹಾನ್ ಧರ್ಮ ಬೌದ್ಧ ಧರ್ಮದಲ್ಲೂ ಅದೇ ರೀತಿ, ಅಶೋಕ ಚಕ್ರವರ್ತಿಯವರು ಕಳಿಂಗ ಯುದ್ಧದ ರಕ್ತಪಾತ ನೋಡಿ ಪಶ್ಚಾತ್ತಾಪಗೊಂಡು ದೀಕ್ಷೆ ಪಡೆದು, ಬೌದ್ಧ ಧರ್ಮಕ್ಕೆ ಸೇರಿ, ಶ್ರೀಲಂಕಾ, ಇಂಡೋನೇಷ್ಯಾ ಮುಂತಾದ ಪೂರ್ವ ರಾಷ್ಟ್ರಗಳಿಗೆ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು, ಸಹೋದರಿಯನ್ನು ಕಳುಹಿಸಿದ ವಿಷಯವನ್ನು ಪುಸ್ತಕಗಳಲ್ಲಿ ಓದಿದ್ದೇವೆ.
ಅಂದರೆ ಈ ಧರ್ಮ ಜಗತ್ತಿಗೆ ಶ್ರೇಷ್ಠವಾದ ಮಾನವತಾವಾದವನ್ನು ಸಾರಿದ ಧರ್ಮ ಇಂದು ಬಂದಂತಹ ಧರ್ಮಗಳಿಗೆ ಪೂರ್ವ ಧರ್ಮ ವಾಗಿದೆ.
ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿಯನ್ನು ನೋಡಿದಾಗ, ಇವತ್ತಿಗೂ ಅದು ಸರಿಯಾದ ರೀತಿಯಲ್ಲಿ ಪ್ರಚಾರವಾಗಿದ್ದರೆ, ಜಗತ್ತಿನ ಮಾನವತಾವಾದ ಕ್ರಾಂತಿಕಾರರಲ್ಲಿ ಬಸವಣ್ಣನವರು ಶ್ರೇಷ್ಠ.
ಅವರ ಅನುಭವ ಮಂಟಪದ ರೀತಿಯಲ್ಲಿ ಇವತ್ತು ನಮ್ಮ ಪಾರ್ಲಿಮೆಂಟ್ (ಸಂಸತ್ತು) ನಡೆಯುತ್ತಿದೆ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದೆ.
ನಾನು ವೈಯಕ್ತಿಕವಾಗಿ ಕೂಡ ಬೌದ್ಧ ಧರ್ಮದ ಬಗ್ಗೆ ಮಧ್ಯಮ ಶಾಲೆಯ ಕಾಲದಿಂದಲೂ ಆಸಕ್ತಿ ಹೊಂದಿದ್ದೇನೆ ಅದರ ಎಂಟು ದಾರಿಗಳು, ಮಹಾತ್ಮ ಗಾಂಧೀಜಿಯವರ “ಸಪ್ತವ್ರತ” ಜೀವನದ ಮಾರ್ಗ ಎಲ್ಲವೂ ನನಗೆ ಪ್ರೇರಣೆಯಾಗಿವೆ.
ನಾನು ವಕೀಲನಾಗಿದ್ದಾಗ ಬೆಂಗಳೂರಿನ ಗಾಂಧಿಬಜಾರಿನ ಮಹಾಬೋಧಿ ಸೊಸೈಟಿಗೆ ಪ್ರತಿ ವಾರಕ್ಕೊಮ್ಮೆ ಹೋಗಿ ಅರ್ಧಗಂಟೆ ಕುಳಿತುಕೊಳ್ಳುತ್ತಿದ್ದೆ. ಅಲ್ಲಿ ಶಾಂತಿ, ಒಳ್ಳೆ ಮಾತು, ಮಾರ್ಗದರ್ಶನ ದೊರಕುತ್ತಿತ್ತು.
ಟಿಬೆಟ್ ನ ಮಹಾಗುರು ದಲೈ ಲಾಮಾ ಅವರ 90ನೇ ಜನ್ಮದಿನ ಆಚರಣೆಯಲ್ಲಿ, ಈ ಕಾರ್ಯಕ್ರಮ ಆಯೋಜಿಸಿರುವುದು ಸಂತಸಕರವಾಗಿದ್ದು ಚಿತ್ರದುರ್ಗದ ನಿಜಲಿಂಗಪ್ಪನವರ ಜನ್ಮಸ್ಥಳದಲ್ಲಿ ಈ ಕಾರ್ಯಕ್ರಮ ಆಯೋಜನೆ ನಡೆಸಿರುವುದು ಸಂತೋಷಕರವಾಗಿದೆ.
ಈ ಧರ್ಮ ಉಳಿಯಬೇಕು, ಬೆಳೆಯಬೇಕು , ಈ ಧರ್ಮ ಮಾನವತಾವಾದವನ್ನು ಸಾರಿದೆ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ.ಪಾಟೇಲ್, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್, ಯೋಜನೆ ಮತ್ತು ಅಂಕಿಅಂಶ ಸಚಿವ ಡಿ. ಸುಧಾಕರ್, ಚಿತ್ರದುರ್ಗ ಮಠದ ಮಾದಾರ ಚನ್ನಯ್ಯ ಸ್ವಾಮೀಜಿ, ನಿರಂಜನಾನಂದ ಪುರಿ ಸ್ವಾಮೀಜಿ,ಸಿದ್ದಾರೂಡಾ ಸ್ವಾಮೀಜಿ , ಪ್ರಸನ್ನಾಂದಪುರಿ ಸ್ವಾಮೀಜಿ ,ವಚನಾಂದ ಸ್ವಾಮೀಜಿ,ಮಾಜಿ ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ ,ಶಾಸಕರಾದ ರಘು ಮೂರ್ತಿ,ವೀರೇಂದ್ರ ಪಪ್ಪಿ, ಆಧಿಜಾಂಭವ ಅಭಿವೃಧ್ದಿ ನಿಗಮದ ಅಧ್ಯಕ್ಷ ಜಿ.ಎಸ್ .ಮಂಜುನಾಥ್, ಬಹುಜನ ಸಮಾಜದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಬಧ್ದ ಧರ್ಮದ ಅನುಯಾಯಿಗಳು ಮುಖಂಡರು ಉಪಸ್ಥಿತರಿದ್ದರು.